Asian Games: ಪಾಕಿಸ್ತಾನವನ್ನು ಬಗ್ಗುಬಡಿದು ಚಿನ್ನ ಗೆದ್ದ ಭಾರತ! ಗೋಲ್ಡ್ ಮೆಡಲ್ ಪಡೆದು ಏಷ್ಯನ್ ಗೇಮ್ಸ್​​ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ವೈಭವ್ | ಕ್ರೀಡಾ ಸುದ್ದಿ | ACTPnews

ವೈಭವ್ ಸೂರ್ಯವಂಶಿ (ANI Photo)


Last Updated:

ಏಷ್ಯನ್ ಗೇಮ್ಸ್​​ನ ಕ್ರಿಕೆಟ್​​ ಫೈನಲ್​​ನಲ್ಲಿ ಭಾರತ ತಂಡ ಪಾಕಿಸ್ತಾನವನ್ನ ಮಣಿಸುವ ಮೂಲಕ ಚಿನ್ನದ ಪದಕ ತನ್ನದಾಗಿಸಿಕೊಂಡಿತು. ತಂಡದಲ್ಲಿದ್ದ ವೈಭವ್ ಸೂರ್ಯವಂಶಿ ಕ್ರೀಡಾಕೂಟದ ಇತಿಹಾಸದಲ್ಲಿ ಚಿನ್ನದ ಪದಕ ಗೆದ್ದ ಅತ್ಯಂತ ಕಿರಿಯ ಕ್ರೀಡಾಪಟು ಎಂಬ ವಿಕಶ್ವದಾಖಲೆಗೆ ಪಾತ್ರರಾದರು.

 ವೈಭವ್ ಸೂರ್ಯವಂಶಿ (ANI Photo)
ವೈಭವ್ ಸೂರ್ಯವಂಶಿ (ANI Photo)

ಜಪಾನ್‌ನ ನಿಸ್ಶಿನ್‌ನಲ್ಲಿರುವ ಕೊರೊಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಶನಿವಾರ ನಡೆದ ಏಷ್ಯನ್ ಗೇಮ್ಸ್ (Asian Games) ಪುರುಷರ ಕ್ರಿಕೆಟ್‌ನ ರೋಮಾಂಚಕ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು (India vs Pakistan) 19 ರನ್‌ಗಳಿಂದ ಮಣಿಸಿದ ಭಾರತ ತಂಡ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದೆ. ಈ ಐತಿಹಾಸಿಕ ಗೆಲುವಿನೊಂದಿಗೆ ಭಾರತದ ಯುವ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ (Vaibhav Sooryavanshi) ಹೊಸ ದಾಖಲೆ ಬರೆದಿದ್ದಾರೆ.

ಪಾಕಿಸ್ತಾನದ ವಿರುದ್ಧ 19 ರನ್​ಗಳ ಜಯ

ಪ್ರಶಸ್ತಿಗಾಗಿ ನಡೆದ ಈ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 211 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಭಾರತೀಯ ಬ್ಯಾಟರ್‌ಗಳ ಪೈಕಿ ಅಭಿಷೇಕ್ ಶರ್ಮಾ (61) ಮತ್ತು ತಿಲಕ್ ವರ್ಮಾ (51) ಅತ್ಯುತ್ತಮ ಅರ್ಧಶತಕಗಳನ್ನು ಸಿಡಿಸಿ ಮಿಂಚಿದರು. ನಂತರ, ಈ ಬೃಹತ್ ಗುರಿಯನ್ನು ಬೆನ್ನಟ್ಟುವಾಗ ಪಾಕಿಸ್ತಾನದ ಯುವ ಆಟಗಾರ ಹಸನ್ ನವಾಜ್ ವೀರಾವೇಶದ ಹೋರಾಟ ನಡೆಸಿದರು. ನವಾಜ್ 51 ಎಸೆತಗಳಲ್ಲಿ 5 ಬೌಂಡರಿ ಹಾಗೂ 7 ಸಿಕ್ಸರ್‌ಗಳೊಂದಿಗೆ 96 ರನ್ ಗಳಿಸಿದರು. ಆದರೆ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಪಾಕಿಸ್ತಾನವು ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲನ್ನು ಅನುಭವಿಸಿತು.

ವೈಭವ್ ಅವರ ಅಪರೂಪದ ಸಾಧನೆ

ಪಂದ್ಯದ ನಂತರ, ಐಸಿಸಿ (ICC) ಅಧ್ಯಕ್ಷ ಜಯ್ ಶಾ ಅವರು ವಿಜೇತ ಭಾರತೀಯ ಆಟಗಾರರಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ, ಟೀಮ್ ಇಂಡಿಯಾದ ಯುವ ಪ್ರತಿಭೆ, 15 ವರ್ಷದ ವೈಭವ್ ಸೂರ್ಯವಂಶಿ ಅಪರೂಪದ ಸಾಧನೆಯೊಂದನ್ನು ಮಾಡಿದರು. ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಚಿನ್ನದ ಪದಕ ಗೆದ್ದ ಅತ್ಯಂತ ಕಿರಿಯ ಭಾರತೀಯ ಕ್ರೀಡಾಪಟು ಎಂಬ ದಾಖಲೆಯನ್ನು ವೈಭವ್ ನಿರ್ಮಿಸಿದ್ದಾರೆ.

ಸೂರ್ಯವಂಶಿ ಕೇವಲ 15 ವರ್ಷ, 6 ತಿಂಗಳು ಮತ್ತು 7 ದಿನಗಳ ಪ್ರಾಯದ ವೈಭವ್ ಸೂರ್ಯವಂಶಿ, ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಚಿನ್ನದ ಪದಕ ಗೆದ್ದ ಅತಿ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸೌರಭ್ ಚೌಧರಿ ದಾಖಲೆ ಬ್ರೇಕ್

ಈ ಹಿಂದೆ 2018ರ ಜಕಾರ್ತಾ ಏಷ್ಯನ್ ಗೇಮ್ಸ್‌ನ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದ ಶೂಟರ್ ಸೌರಭ್ ಚೌಧರಿ (16 ವರ್ಷ, 3 ತಿಂಗಳು, 9 ದಿನ) ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಸೂರ್ಯವಂಶಿ ಇದೀಗ ಅಳಿಸಿಹಾಕಿದ್ದಾರೆ. ಇದರೊಂದಿಗೆ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಒಟ್ಟಾರೆ ಭಾರತೀಯರಲ್ಲಿ ವೈಭವ್ ಎರಡನೇ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. 2023ರಲ್ಲಿ 15 ವರ್ಷ 3 ತಿಂಗಳಿದ್ದಾಗ ಕಂಚು ಗೆದ್ದಿದ್ದ ಸ್ಕೇಟಿಂಗ್ ಪಟು ಸಂಜನಾ ಬತುಲಾ ಮೊದಲ ಸ್ಥಾನದಲ್ಲಿದ್ದಾರೆ.

ಸತತ 2ನೇ ಆವೃತ್ತಿಯಲ್ಲಿ ಪದಕ

ಭಾರತ ಕ್ರಿಕೆಟ್ ತಂಡ ಜಪಾನ್​​ನಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಳ್ಳುವ ಮೂಲಕ ಸತತ 2ನೇ ಬಾರಿ ಏಷ್ಯನ್ ಗೇಮ್ಸ್​​ನಲ್ಲಿ ಸ್ವರ್ಣ ಸಾಧನೆ ಮಾಡಿತು. 2022ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿಯೂ ಭಾರತ ಪುರುಷರ ಕ್ರಿಕೆಟ್ ತಂಡ ಚಿನ್ನ ಗೆದ್ದಿತ್ತು, ಇದೀಗ ಅದನ್ನು ಯಶಸ್ವಿಯಾಗಿ ಕಾಯ್ದುಕೊಳ್ಳುವ ಮೂಲಕ ಸತತ ಎರಡನೇ ಬಾರಿ ಏಷ್ಯನ್ ಗೇಮ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಭಾರತ ಮಹಿಳಾ ತಂಡ ಕೂಡ ಸತತ 2ನೇ ಬಾರಿ ಚಿನ್ನ ಸಾಧನೆ ಮಾಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed