Last Updated:
ಉತ್ತರ ಪ್ರದೇಶದ ಮಾಜಿ ಸಚಿವ ಮತ್ತು ಎಂಟು ಬಾರಿ ಶಾಸಕರಾಗಿದ್ದ ಶ್ಯಾಮ್ ಸುಂದರ್ ಶರ್ಮಾ ಅವರು ಕಾಂಗ್ರೆಸ್‌ಗೆ ಮರುಸೇರ್ಪಡೆಗೊಂಡಿದ್ದಾರೆ.
ಉತ್ತರ ಪ್ರದೇಶದಲ್ಲಿ (Uttar Pradesh) ಮೂರು ಬಾರಿ ಸಚಿವರಾಗಿದ್ದ ಮಥುರಾದ ದಿಗ್ಗಜ ನಾಯಕ ಪಂಡಿತ್ ಶ್ಯಾಮ್ ಸುಂದರ್ ಶರ್ಮಾ (Pandit Shyam Sundar Sharma) ಅವರು ಕಾಂಗ್ರೆಸ್‌ಗೆ (Congress) ಘರ್ ವಾಪ್ಸಿ ಆಗಿದ್ದಾರೆ. ಮಥುರಾದ (Mathura) ಮಾಂಟ್ ಕ್ಷೇತ್ರದಿಂದ ಎಂಟು ಬಾರಿ ಶಾಸಕರಾಗಿದ್ದ ಶ್ಯಾಮ್ ಸುಂದರ್ ಶರ್ಮಾ ಅವರು ದಿಲ್ಲಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಕಚೇರಿಯಲ್ಲಿ ಕಾಂಗ್ರೆಸ್ ಸದಸ್ಯತ್ವ ಪಡೆದರು. ಅವರೊಂದಿಗೆ ಆಮ್ ಆದ್ಮಿ ಪಕ್ಷದ ನಾಯಕಿ ಪ್ರಿಯಾಂಕಾ ಕಕ್ಕಡ್ ಮತ್ತು ಪತ್ರಕರ್ತ ರಜತ್ ಟಂಡನ್ ಕೂಡ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ.
ಮುಂದುವರೆದು ಮಾತನಾಡಿದ, ಒಮ್ಮೆ ಬಾಗ್ಬಾನ್ ಎಂಬ ಸಿನಿಮಾ ಬಂದಿತ್ತು, ಅದರಲ್ಲಿ ‘ಈ ಮುದುಕನು ಯಾವ ಕೆಲಸಕ್ಕೆ ಬರ್ತಾನೆ’ ಎನ್ನುವ ಡೈಲಾಗ್ ಇದೆ. ಆದರೆ ಇಂದು ನಾನು ಹೇಳುತ್ತೇನೆ, ಈ ಮುದುಕನು ತುಂಬಾ ಕೆಲಸಕ್ಕೆ ಬರ್ತಾನೆ’ ಎಂದರು. ತಾವು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದಿರುವುದಾಗಿ ತಿಳಿಸಿದ ಅವರು, ತೀವ್ರವಾದಿ ಕಾಂಗ್ರೆಸ್ ಹುಟ್ಟಿಕೊಂಡಾಗ ಭ್ರಮೆಯಿಂದ ತಿವಾರಿ ಜಿ ಅವರ ಜತೆ ಹೋಗಿದ್ದೆ ಎಂದು ಹೇಳಿದರು.
ಕಳೆದ ಬಾರಿ ಅಲ್ಪ ಮತಗಳ ಅಂತರದಿಂದ ಸೋತಿರುವುದಾಗಿ ತಿಳಿಸಿದ ಶ್ಯಾಮ್ ಸುಂದರ್, ರಾಜಕಾರಣ ಎಂದರೆ ಸೇವೆ ಮತ್ತು ಈ ಯೋಚನೆ ಇರುವುದು ಕಾಂಗ್ರೆಸ್‌ನಲ್ಲಿ ಮಾತ್ರ. ಜನರು ಜಾತಿ ಮತ್ತು ಧರ್ಮದ ಬಗ್ಗೆ ಮಾತನಾಡುತ್ತಾರೆ ಆದರೆ ರಾಹುಲ್ ಗಾಂಧಿ ಮಾತ್ರ ಮಾನವತಾವಾದದ ಬಗ್ಗೆ ಮಾತನಾಡುವ ಏಕೈಕ ನಾಯಕ ಎಂದು ಪುನರುಚ್ಚರಿಸಿದರು.
ಶ್ಯಾಮ್ ಸುಂದರ್ ಜೊತೆಗೆ ಆಮ್ ಆದ್ಮಿ ಪಕ್ಷದ ನಾಯಕಿ ಪ್ರಿಯಾಂಕಾ ಕಕ್ಕಡ್ ಕೂಡ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಪತ್ರಕರ್ತ ರಜತ್ ಟಂಡನ್ ಕೂಡ ಕಾಂಗ್ರೆಸ್ ಸೇರಿದ್ದಾರೆ. ಈ ವೇಳೆ ಮಾತನಾಡಿದ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್ ಶುಕ್ಲಾ, ನಾವು ಮುಂದಿನ ಚುನಾವಣೆಯಲ್ಲಿ ಖಂಡಿತ ಗೆಲ್ಲುತ್ತೇವೆ, ಯುಪಿಯಲ್ಲಿ ದೊಡ್ಡ ಬದಲಾವಣೆಯಾಗಲಿದೆ ಎಂದರು. ಯುಪಿಯಲ್ಲಿ ನಿನ್ನೆ ಆರಾಧನಾ ಮಿಶ್ರಾ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದ್ದು, ಎಲ್ಲಾ ನಿರ್ಧಾರಗಳನ್ನು ಆಲೋಚಿಸಿ ತೆಗೆದುಕೊಳ್ಳಲಾಗುತ್ತದೆ, ಅಜಯ್ ರಾಯ್ ಅವರಿಗೆ ಗೌರವ ಸಿಗಲಿದೆ. ಪಕ್ಷದ ಹಿತಾಸಕ್ತಿಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ, ಅದಕ್ಕಾಗಿಯೇ ಆರಾಧನಾ ಮಿಶ್ರಾ ಅವರಿಗೆ ಪ್ರದೇಶ ಅಧ್ಯಕ್ಷ ಹುದ್ದೆ ನೀಡಲಾಗಿದೆ ಎಂದರು.














