Karavali Movie: ಕಿರುತೆರೆಗೆ ಬಂತು ‘ಕರಾವಳಿ’! ರಾಜ್ ಬಿ ಶೆಟ್ಟಿ-ಪ್ರಜ್ವಲ್ ಸಿನಿಮಾ ಎಲ್ಲಿ ನೋಡಬಹುದು ಗೊತ್ತಾ? | | ACTPnews

ಕಿರುತೆರೆಗೆ ಕಾಲಿಡ್ತಿರೋ ರಾಜ್ ಬಿ ಶೆಟ್ಟಿ-ಪ್ರಜ್ವಲ್ ಸಿನಿಮಾ; ಕರಾವಳಿ ಹೊಸ ಮಾಹಿತಿ ಔಟ್! (ಚಿತ್ರ ಕೃಪೆ: ಜೀ​ ಕನ್ನಡ ಇನ್​ಸ್ಟಾಗ್ರಾಮ್)


Last Updated:

Karavali Movie: ಕರಾವಳಿ ಚಿತ್ರದ ಹೈಪ್ ಸಖತ್ ಆಗಿಯೇ ಇತ್ತು. ಳೆದ ಜುಲೈ-24 ರಂದು ಈ ಚಿತ್ರ ತೆರೆಗೆ ಬಂದಿತ್ತು. ಆದರೆ ಹೇಳಿಕೊಳ್ಳುವಷ್ಟು ಸಕ್ಸಸ್ ಸಿಗಲಿಲ್ಲ. ಇದೀಗ ಬಿಡುಗಡೆ ಆಗಿ 3 ತಿಂಗಳಲ್ಲಿಯೇ ಈ ಸಿನಿಮಾ ಟಿವಿಗೆ ಬರ್ತಿದೆ. ಇದರ ಮಾಹಿತಿನೂ ಅಧಿಕೃತವಾಗಿಯೆ ಹೊರ ಬಂದಿದೆ.

ಕಿರುತೆರೆಗೆ ಕಾಲಿಡ್ತಿರೋ ರಾಜ್ ಬಿ ಶೆಟ್ಟಿ-ಪ್ರಜ್ವಲ್ ಸಿನಿಮಾ; ಕರಾವಳಿ ಹೊಸ ಮಾಹಿತಿ ಔಟ್! (ಚಿತ್ರ ಕೃಪೆ: ಜೀ​ ಕನ್ನಡ ಇನ್​ಸ್ಟಾಗ್ರಾಮ್)
ಕಿರುತೆರೆಗೆ ಕಾಲಿಡ್ತಿರೋ ರಾಜ್ ಬಿ ಶೆಟ್ಟಿ-ಪ್ರಜ್ವಲ್ ಸಿನಿಮಾ; ಕರಾವಳಿ ಹೊಸ ಮಾಹಿತಿ ಔಟ್! (ಚಿತ್ರ ಕೃಪೆ: ಜೀ​ ಕನ್ನಡ ಇನ್​ಸ್ಟಾಗ್ರಾಮ್)

ಕರಾವಳಿ ಚಿತ್ರದ (Karavali Movie) ಹೈಪ್ ಸಖತ್ ಆಗಿಯೇ ಇತ್ತು. ಜನರಿಗೂ ಈ ಚಿತ್ರ ತನ್ನದೇ ರೀತಿಯಲ್ಲಿಯೇ ಇಷ್ಟ ಆಗಿತ್ತು. ಪ್ರಜ್ವಲ್ ದೇವರಾಜ್ (Prajwal Devaraj) ಮತ್ತು ರಾಜ್ ಬಿ ಶೆಟ್ಟಿ (Raj B Shetty) ಅವರ ಈ ಚಿತ್ರದ ಪ್ರಚಾರವೂ ಜೋರಾಗಿಯೇ ಆಗಿತ್ತು. ಕಳೆದ ಜುಲೈ-24 ರಂದು ಈ ಚಿತ್ರ ತೆರೆಗೆ ಬಂದಿತ್ತು. ಆದರೆ ಹೇಳಿಕೊಳ್ಳುವಷ್ಟು ಸಕ್ಸಸ್ ಸಿಗಲಿಲ್ಲ. ಇದೀಗ ಬಿಡುಗಡೆ ಆಗಿ 3 ತಿಂಗಳಲ್ಲಿಯೇ ಈ ಸಿನಿಮಾ ಟಿವಿಗೆ ಬರ್ತಿದೆ. ಇದರ ಮಾಹಿತಿನೂ ಅಧಿಕೃತವಾಗಿಯೆ ಹೊರ ಬಂದಿದೆ. ಇತರ ವಿವರ ಇಲ್ಲಿದೆ ಓದಿ.

ಜೀ ಕನ್ನಡದಲ್ಲಿ ಕರಾವಳಿ…

ಕರಾವಳಿ ಸಿನಿಮಾ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದೆ. ಯಾವ ದಿನ ಅನ್ನೋದು ಗೊತ್ತಾಗಿಲ್ಲ. ಆದರೆ, ಜೀ ಕನ್ನಡ ತನ್ನ ಪ್ರೋಮೋದಲ್ಲಿ ಅತೀ ಶೀಘ್ರದಲ್ಲಿ ಅಂತ ಹೇಳಿಕೊಂಡಿದೆ.

raj b shetty prajwal devaraj karavali zee kannada telecast latest updates

ಕರಾವಳಿ ಹೊಸ ಮಾಹಿತಿ ಔಟ್

(ಚಿತ್ರ ಕೃಪೆ: ಜೀ​ ಕನ್ನಡ ಇನ್​ಸ್ಟಾಗ್ರಾಮ್)

ಈ ಪ್ರೋಮೋ ಇಂಟ್ರಸ್ಟಿಂಗ್ ಆಗಿಯೆ ಇದೆ. ಚಿತ್ರದ ಪ್ರಮುಖ ಅಂಶಗಳು ಇದರಲ್ಲಿ ಝಲಕ್ ರೂಪದಲ್ಲಿಯೇ ಇವೆ. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ ಶೆಟ್ರು ಅಭಿನಯಿಸಿದ್ದಾರೆ.

ಕರಾವಳಿಯ ಕಂಬಳದ ಕತೆ

ಕಂಬಳ ಅನ್ನೋದು ಒಂದು ಆಟವಷ್ಟೆ ಅಲ್ಲ, ಇದರ ಹಿಂದೆ ಶ್ರಮ ಇರುತ್ತದೆ. ಎಮೋಷನಲ್ ಕನೆಕ್ಷನ್ ಇರುತ್ತದೆ. ಈ ಎಲ್ಲ ವಿಷಯವನ್ನ ಕರಾವಳಿ ಸಿನಿಮಾದಲ್ಲಿ ಹೇಳಿದ್ದಾರೆ.

ಪ್ರಜ್ವಲ್ ದೇವರಾಜ್ ಉತ್ತಮ ಅಭಿನಯ ತೋರಿದ್ದಾರೆ. ಕಂಬಳದ ಓಟವನ್ನ ಇವರೇ ಮಾಡಿದ್ದರೆ ಇನ್ನು ಚೆನ್ನಾಗಿ ಇರ್ತಾ ಇತ್ತು ಅನ್ನುವ ಅಭಿಪ್ರಾಯ ಕೂಡ ಬಂದಿವೆ.

ಕರಾವಳಿ ಸಿನಿಮಾ

ಕರಾವಳಿ ಸಿನಿಮಾದಲ್ಲಿ ಹಾಸ್ಯ ನಟ ಮಿತ್ರ ಅಭಿನಯಿಸಿದ್ದಾರೆ. ಮಹಾಬಲ ಅನ್ನುವ ಪಾತ್ರವನ್ನೆ ಮಾಡಿದ್ದಾರೆ. ಇವರ ಕನಸಿನ ಸುತ್ತವೇ ಇಡೀ ಕತೆ ಇದೆ.

raj b shetty prajwal devaraj karavali zee kannada telecast latest updates

ಹಾಸ್ಯ ನಟ ಮಿತ್ರ

(ಚಿತ್ರ ಕೃಪೆ: ಹಾಸ್ಯ ನಟ ಮಿತ್ರ)

ಮಹಾವೀರ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಅಭಿನಯಿಸಿದ್ದಾರೆ. ಈ ಗೆಳೆಯರ ಆಳವಾದ ಕತೇನೆ ಇಡೀ ಸಿನಿಮಾ ಅಂತ ಹೇಳಬಹುದು. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಧನಂಜಯ್ ಅನ್ನುವ ರೋಲ್ ಮಾಡಿದ್ದಾರೆ ನೋಡಿ.

ರಮೇಶ್ ಇಂದಿರಾ

ಕರಾವಳಿ ಚಿತ್ರದಲ್ಲಿ ರಮೇಶ್ ಇಂದಿರಾ ಅವರೂ ಇದ್ದಾರೆ. ಇವರ ಪಾತ್ರದ ಖದರ್ ಎಂದಿನಂತೆ ಇಲ್ಲೂ ಬೇರೆ ಇದೆ. ಈ ಚಿತ್ರದಲ್ಲಿ ಇವರೂ ಹೈಲೈಟ್ ಆಗಿದ್ದಾರೆ.
ಟಿವಿಯಲ್ಲಿ ಬರ್ತಿದೆ

ಕರಾವಳಿ ಸಿನಿಮಾ ಟಿವಿಯಲ್ಲಿ ಬರ್ತಿದೆ. ಜೀ ಕನ್ನಡದದಲ್ಲಿ ಈ ಚಿತ್ರ ಪ್ರಸಾರ ಆಗುತ್ತಿದೆ. ಆದಷ್ಟು ಬೇಗ ಅಂತಲೇ ಜೀ ಕನ್ನಡ ಹೇಳಿಕೊಂಡಿದೆ. ಜೀ ಕನ್ನಡದ ಅಧಿಕೃತ ಇನ್‌ಸ್ಟಾಗ್ರಾಮ್‌ ಪೇಜ್ ಅಲ್ಲಿ ಈ ಬಗೆಗಿನ ಪ್ರೋಮೋ ಕೂಡ ರಿಲೀಸ್ ಆಗಿದೆ. ಶೀಘ್ರದಲ್ಲಿಯೇ ಈ ಸಿನಿಮಾದ ಪ್ರಸಾರ ಅನ್ನುವ ಮಾಹಿತಿನೂ ಇದರಲ್ಲಿ ಸಿಗುತ್ತದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed