Flydubai: ‘ನನಗೆ 39 ವರ್ಷ, ಇಬ್ಬರು ಮಕ್ಕಳಿದ್ದಾರೆ’ ಗಾಯವಾಗಿ ಬಿದ್ದಿದ್ದಾಗ ಸ್ಮಿತ್ ಮಚ್ಚಾರ್ ಭಾವುಕ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸ್ಮಿತ್ ಮಚ್ಚರ್


Last Updated:

ವಿಮಾನದಲ್ಲಿ ಸ್ಮಿತ್ ಮಚ್ಚರ್​ಗೆ ಮೊದಲ ಪ್ರಾಥಮಿಕ ಚಿಕಿತ್ಸೆ ಕೊಟ್ಟಿದ್ದು ಡೆಂಟಿಸ್ಟ್ ಆಗಿದ್ದಂತಹ ಒಬ್ಬ ಪ್ರಯಾಣಿಕ. ಅವರು ಹೇಳಿದ್ದೇನು ಗೊತ್ತಾ?

ಸ್ಮಿತ್ ಮಚ್ಚರ್
ಸ್ಮಿತ್ ಮಚ್ಚರ್

ಫ್ಲೈದುಬೈ ಫ್ಲೈಟ್​ ಘಟನೆಯಲ್ಲಿ ಪೈಲಟ್ ಸ್ಮಿತ್ ಮಚ್ಚಾರ್ (Smit Machchar) ಅವರು ತೀವ್ರವಾಗಿ ಗಾಯಗೊಂಡಾಗ ಅವರಿಗೆ ಪ್ರಾಥಮಿಕ ಚಿಕಿತ್ಸೆ (First Aid) ಕೊಟ್ಟಿದ್ದು ವಿಮಾನದಲ್ಲಿದ್ದಂತಹ ಒಬ್ಬರು ಡೆಂಟಿಸ್ಟ್. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸ್ಮಿತ್ ಅವರನ್ನು ಟ್ರೀಟ್ ಮಾಡಿದ ಡೆಂಟಿಸ್ಟ್ ಹೇಳಿದ್ದೇನು?

ಫ್ಲೈ ದುಬೈ ಫ್ಲೈಟ್ ಹಾರಿಸುತ್ತಿದ್ದ ಸ್ಮಿತ್ ಮಚ್ಚರ್ ಅವರ ಆರೋಗ್ಯ ಈಗ ಸುಧಾರಿಸಿದೆ. ಆದರೆ ಅವರ ಮೇಲೆ ದಾಳಿ ನಡೆದಾಗ ಅಪಾರ ಪ್ರಮಾಣದಲ್ಲಿ ರಕ್ತ ಹೋಗಿತ್ತು. ಆದರೆ ಅವರು ಕಾಕ್ಪಿಟ್ ಬಾಗಿಲು ತೆಗೆದು 174 ಜನರನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ. ಮೂಸೆವ್ ಶೋಟ ಎನ್ನುವ ಡೆಂಟಿಸ್ಟ್ ಒಬ್ಬರು ಸ್ಮಿತ್​ಗೆ ಚಿಕಿತ್ಸೆ ಕೊಟ್ಟಿದ್ದಾರೆ. ಶೋಟ ಅವರು ಸ್ಮಿತ್​ಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಎಮರ್ಜೆನ್ಸಿ ವೈದ್ಯಕೀಯ ಚಿಕಿತ್ಸೆ ನೀಡಿದ್ದು ಸ್ಮಿತ್ ಅವರ ಜೀವನ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಇಸ್ರೇಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ಕಾಯಲಿಲ್ಲ. ಏನೋ ಒಂದು ತಪ್ಪಾಗಿದೆ ಎನಿಸಿ ಓಡಿದೆ. ಮಚ್ಚರ್ ಅವರು ಕ್ರಿಟಿಕಲ್ ಪರಿಸ್ಥಿತಿಯಲ್ಲಿದ್ದರು. ಅವರ ತಲೆ ಹಾಗೂ ಕೈಗಳಿಂದ ಭಾರೀ ರಕ್ತಸ್ರಾವವಾಗುತ್ತಿತ್ತು. ವಿಮಾನದಲ್ಲಿ ನಾನೊಬ್ಬನೇ ಡಾಕ್ಟರ್ ಇದ್ದಿದ್ದು. ರಕ್ತ ಹೋಗುವುದನ್ನು ತಡೆಯೋಕೆ ನನಗೆ ಸಾಧ್ಯವಾಯಿತು. ಇನ್ನೇನು ಲ್ಯಾಂಡಿಂಗ್ ಆಗಬೇಕು ಎನ್ನುವವರೆಗೆ ಸ್ವಲ್ಪ ಚೇತರಿಸಿಕೊಂಡಿದ್ದ ಸ್ಮಿತ್ ಆರೋಗ್ಯ ಆ ನಂತರ ಹದಗೆಡಲಾರಂಭಿಸಿದೆ ಎಂದಿದ್ದಾರೆ.

ರಕ್ತ ಹೋಗುತ್ತಲೇ ಇತ್ತು

ತಲೆಗೆ ಕೈಗೆ ಗಾಯವಾಗಿತ್ತು. ಅವು ಸ್ವಲ್ಪ ಓಪನ್ ಆಗಿದ್ದವು. ಎರಡೂ ಕಡೆಯೂ ಸಿವಿಯರ್ ಆಗಿತ್ತು. ಅವರು ಸೀರಿಯಸ್ ಕಂಡೀಷನ್​​ನಲ್ಲಿದ್ದರು. ಕ್ರಿಟಿಕಲ್ ಅಲ್ಲ, ಆದರೆ ರಕ್ತ ಬಹಳಷ್ಟು ಹೋದ ಕಾರಣ ಸೀರಿಯಸ್ ಆಗಿದ್ದರು ಎಂದಿದ್ದಾರೆ.

ಇಬ್ಬರು ಮಕ್ಕಳಿದ್ದಾರೆ ಎಂದಿದ್ದ ಪೈಲಟ್

ರಕ್ತದ ಮಡುವಿನಲ್ಲಿ ಬಿದ್ದಿದ್ದಾಗಲೂ ಪೈಲಟ್ ಎಚ್ಚರದಿಂದ ಇದ್ದುಕೊಂಡು ತಮ್ಮ ಜೊತೆ ಮಾತನಾಡಿದ್ದರು ಎಂದು ಡೆಂಟಿಸ್ಟ್ ನೆನಪಿಸಿಕೊಂಡಿದ್ದಾರೆ. ಸ್ಮಿತ್ ಅವರು ನೆಲದಲ್ಲಿ ಬಿದ್ದಿರುವಾಗಲೇ ಅವರಿಗೆ 39 ವರ್ಷ ಹೆಂಡತಿ ಇಬ್ಬರು ಮಕ್ಕಳಿದ್ದಾರೆ ಎಂದು ಹೇಳಿ ದಾಳಿ ಮಾಡಿದ ಪೈಲಟ್​ನ ಶಪಿಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed