Last Updated:
SRH ತಂಡದ ಈ ನಿರ್ಧಾರವು ಅಭಿಷೇಕ್ ಶರ್ಮಾ ಅವರ ಕೋಪಕ್ಕೆ ಕಾರಣ ಎನ್ನಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL) 2027 ಕ್ಕಿಂತ ಮುಂಚಿತವಾಗಿ ಸನ್ರೈಸರ್ಸ್ ಹೈದರಾಬಾದ್ (SRH) ಶಿಬಿರದಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಮಾಧ್ಯಮ ವರದಿಗಳ ಪ್ರಕಾರ, ಭಾರತೀಯ ಟಿ20 ತಂಡದ ಸ್ಫೋಟಕ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (Abhishek Sharma), ಫ್ರಾಂಚೈಸಿಯ ಒಳಗೆ ಕೈಗೊಂಡಿರುವ ನಾಯಕತ್ವದ ನಿರ್ಧಾರದಿಂದ ತೀವ್ರ ಅಸಮಾಧಾನಗೊಂಡಿದ್ದು, ಐಪಿಎಲ್ 2027ಕ್ಕಾಗಿ (IPL 2027) ತಂಡವನ್ನು ತೊರೆಯಲು ಬಯಸಿದ್ದಾರೆ ಎಂದು ತಿಳಿದುಬಂದಿದೆ.
ಪ್ಯಾಟ್ ಕಮ್ಮಿನ್ಸ್ ಅವರ ಉತ್ತರಾಧಿಕಾರಿಯಾಗಿ ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಇಶಾನ್ ಕಿಶನ್ ಅವರಿಗೆ ತಂಡದ ನಾಯಕತ್ವವನ್ನು ವಹಿಸಿರುವುದೇ ಅಭಿಷೇಕ್ ಅವರ ಕೋಪಕ್ಕೆ ಕಾರಣ ಎನ್ನಲಾಗಿದೆ.
ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವವನ್ನು ಸನ್ರೈಸರ್ಸ್ ಮ್ಯಾನೇಜ್ಮೆಂಟ್ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಿದೆ. ಇಶಾನ್ ಕಿಶನ್ ಕಳೆದ ಸೀಸನ್ನಲ್ಲೂ ಕೆಲವು ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿದ್ದರು. ವರದಿಯ ಪ್ರಕಾರ, ಅಭಿಷೇಕ್ ಶರ್ಮಾ 2019ರಿಂದ ಹೈದರಾಬಾದ್ ತಂಡದೊಂದಿಗೆ ಗುರುತಿಸಿಕೊಂಡಿದ್ದು, ಇಷ್ಟು ವರ್ಷಗಳ ನಿಷ್ಠೆ ಮತ್ತು ಪ್ರದರ್ಶನದ ಬಳಿಕ ತಾವೇ ನಾಯಕತ್ವಕ್ಕೆ ಹಕ್ಕುದಾರರು ಎಂದುಕೊಂಡಿದ್ದರು. ಆದ್ರೆ, ಸನ್ರೈಸರ್ಸ್ ಹೈದರಾಬಾದ್ ಸಿಇಒ ಕೆ. ಷಣ್ಮುಗಮ್ ಈ ಎಲ್ಲಾ ಊಹಾಪೋಹಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಅಭಿಷೇಕ್ ಶರ್ಮಾ ಅವರ ಸಂಭಾವ್ಯ ಹೊಸ ತಂಡದ ಕುರಿತು ಹಲವು ಫ್ರಾಂಚೈಸಿಗಳೊಂದಿಗೆ ಮಾತುಕತೆ ಆರಂಭವಾಗಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ರೇಸ್ನಲ್ಲಿ ಅತ್ಯಂತ ಪ್ರಮುಖ ಆಯ್ಕೆಯಾಗಿ ಕಾಣಿಸಿಕೊಳ್ಳುತ್ತಿದೆ. ಇದರೊಂದಿಗೆ, ದೆಹಲಿ ಕ್ಯಾಪಿಟಲ್ಸ್ ಜೊತೆಗೂ ಮಾತುಕತೆ ನಡೆಸುವ ಸಾಧ್ಯತೆಗಳು ಬಲವಾಗಿವೆ. ಏಕೆಂದರೆ ದೆಹಲಿ ತಂಡದ ಮೆಂಟರ್ ಮತ್ತು ಮಾಜಿ ದಿಗ್ಗಜ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಪ್ರಸ್ತುತ ದೆಹಲಿಯ ಕೋಚಿಂಗ್ ಮತ್ತು ಸಪೋರ್ಟ್ ಸ್ಟಾಫ್ನ ಭಾಗವಾಗಿದ್ದಾರೆ. ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ಜೊತೆಗೂ ಸಂಪರ್ಕ ಸಾಧಿಸಲಾಗುತ್ತಿದೆ ಎಂಬ ವರದಿಗಳಿವೆ.














