Last Updated:
Darshan-Rachita Ram: ಜೈಲು ಗೇಟ್ನಲ್ಲಿ ರಚಿತಾ ರಾಮ್ ಕಾದಿದ್ದೇ ಬಂತು. ಒಂದಲ್ಲಾ, ಎರಡಲ್ಲಾ, ಬರೋಬ್ಬರಿ 5 ಗಂಟೆ ಕಾದರೂ ಜೈಲಲ್ಲಿ ರಚಿತಾ ರಾಮ್ಗೆ ‘ದರ್ಶನ’ ಭಾಗ್ಯ ಮಾತ್ರ ಸಿಗಲಿಲ್ವಂತೆ! ಇನ್ನೇನು ಬಂದ ದಾರಿಗೆ ಸುಂಕವಿಲ್ಲ ಅಂತ ಡಿಂಪಲ್ ಕ್ವೀನ್ ತಮ್ಮ ಕಾರನ್ನು ಯೂಟರ್ನ್ ತಗೊಂಡು ವಾಪಸ್ ಹೊಂಟೋದ್ರಂತೆ!
ನಟಿ ರಚಿತಾ ರಾಮ್ಗೆ (Actress Rachita Ram) ಜೈಲಲ್ಲಿ ದರ್ಶನ ಸಿಗಲಿಲ್ಲ! ಒಂದಲ್ಲ, ಎರಡಲ್ಲ, ಬರೋಬ್ಬರಿ 5 ಗಂಟೆ ಕಾದು ನಿಂತರೂ ಬುಲ್ ಬುಲ್ ಮಾತಾಡಲಿಲ್ಲ! ಹೌದು, ರೇಣುಕಾಸ್ವಾಮಿ ಕೊಲೆ ಕೇಸ್ನ (Renukaswamy Murder Case) ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ (Parappana Agrahara Jail) ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ನೋಡೋದಕ್ಕೆ ಇಂದು ದರ್ಶನ್ ಆಪ್ತ ಬಳಗದ ನಟಿ ರಚಿತಾ ರಾಮ್ ಬಂದಿದ್ರು. ಆದ್ರೆ ಜೈಲು ಗೇಟ್ನಲ್ಲಿ ರಚಿತಾ ರಾಮ್ ಕಾದಿದ್ದೇ ಬಂತು. ಒಂದಲ್ಲಾ, ಎರಡಲ್ಲಾ, ಬರೋಬ್ಬರಿ 5 ಗಂಟೆ ಕಾದರೂ ಜೈಲಲ್ಲಿ ರಚಿತಾ ರಾಮ್ಗೆ ‘ದರ್ಶನ’ ಭಾಗ್ಯ ಮಾತ್ರ ಸಿಗಲಿಲ್ವಂತೆ! ಇನ್ನೇನು ಬಂದ ದಾರಿಗೆ ಸುಂಕವಿಲ್ಲ ಅಂತ ಡಿಂಪಲ್ ಕ್ವೀನ್ ತಮ್ಮ ಕಾರನ್ನು ಯೂಟರ್ನ್ ತಗೊಂಡು ವಾಪಸ್ ಹೊಂಟೋದ್ರಂತೆ!
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಭೇಟಿಗೆ ಅವರ ಕುಟುಂಬಸ್ಥರು, ಆಪ್ತರು, ಸ್ನೇಹಿತರು ಆಗಾಗ ಬರುತ್ತಲೇ ಇರುತ್ತಾರೆ. ಪತ್ನಿ ವಿಜಯಲಕ್ಷ್ಮಿ, ತಾಯಿ ಮೀನಾ ತೂಗುದೀಪ್, ಸಹೋದರ ದಿನಕರ್ ತೂಗುದೀಪ್ ಸೇರಿದಂತೆ ಕುಟುಂಬಸ್ಥರು ಆಗಾಗ ಬರುತ್ತಾರೆ. ಇನ್ನು ಸ್ನೇಹಿತವರ್ಗದಲ್ಲಿ ಗುರುತಿಸಿಕೊಂಡ ನಟ ಧನ್ವೀರ್ ಆಗಾಗ ಜೈಲಿಗೆ ಬಂದು ನಟನ ದರ್ಶ: ಮಾಡಿದ್ದರು.
ಹೀಗೆ ಯಾರಾದ್ರೂ ದರ್ಶನ್ ಭೇಟಿಗೆ ಬಂದಾಗ ಅವರನ್ನು ಭೇಟಿ ಆಗಬೇಕೋ ಬೇಡವೋ ಎಂಬ ಸಂಪೂರ್ಣವಾಗಿ ನಿರ್ಧರಿಸೋ ಹಕ್ಕು ದರ್ಶನ್ಗಿದೆ. ಬಂದವರನ್ನು ಮನಸ್ಸಿದ್ದರೆ ದರ್ಶನ್ ಭೇಟಿ ಮಾಡಬಹುದು, ಇಲ್ಲವಾದರೇ ಭೇಟಿಯಾಗೋದಿಲ್ಲ ಅಂತ ಜೈಲಾಧಿಕಾರಿಗಳಿಗೆ ತಿಳಿಸಬಹುದು. ಒಂದು ವೇಳೆ ಭೇಟಿಯಾಗೋದಿಲ್ಲ ಅಂತ ದರ್ಶನ್ ಹೇಳಿದ್ರೆ, ದರ್ಶನ ಭಾಗ್ಯಕ್ಕಾಗಿ ಜೈಲು ಗೇಟ್ವರೆಗೆ ಬಂದವರು ಹಾಗೆ ಮುಂದೆ ಬರದೇ, ವಾಪಸ್ ಹೊರಡಲೇಬೇಕು.
ಇಂದು ಅದೇ ರೀತಿ ಆಗಿದೆ. ದರ್ಶನ್ ಭೇಟಿಗಾಗಿ ನಟಿ ರಚಿತಾ ರಾಮ್ ಪರಪ್ಪನ ಅಗ್ರಹಾರ ಜೈಲಿನವರೆಗೂ ಬಂದಿದ್ದಾರೆ. ದರ್ಶನ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ರಚಿತಾ ರಾಮ್, ತಮ್ಮ ಆಪ್ತರ ಜೊತೆ ಬಂದಿದ್ದಾರೆ. ಒಟ್ಟು 2 ಕಾರುಗಳಲ್ಲಿ ಅವರೆಲ್ಲಾ ಬಂದು, ಕಾಯುತ್ತಾ ಇದ್ದರು. ಈ ದೃಶ್ಯ ನ್ಯೂಸ್ 18 ಕ್ಯಾಮೆರಾದಲ್ಲೂ ಕೂಡ ಸೆರೆಯಾಗಿತ್ತು.
ಆದರೆ ಅದೇನಾಯ್ತೋ ಏನೋ.. ದರ್ಶನ್ ಮಾತ್ರ ರಚಿತಾ ರಾಮ್ ಭೇಟಿಗೆ ಅವಕಾಶ ನೀಡಿಲ್ಲ ಎನ್ನಲಾಗಿದೆ. ಈಗ ಒಳಕ್ಕೆ ಬಿಡ್ತಾರೆ ಆಗ ಒಳಕ್ಕೆ ಬಿಡ್ತಾರೆ, ದರ್ಶನ್ರನ್ನು ನೋಡಬಹುದು, ಮಾತನಾಡಬಹುದು ಅಂತ ರಚಿತಾ ರಾಮ್ ಕಾದಿದ್ದೇ ಬಂತು. 1 ತಾಸು ಆಯ್ತು, 2 ತಾಸು ಆಯ್ತು.. ಆದ್ರೂ ದರ್ಶನ್ ಭೇಟಿಗೆ ಅನುಮತಿ ಸಿಕ್ಕಿಲ್ಲ ಎನ್ನಲಾಗಿದೆ.
ಆದರೆ ದರ್ಶನ್ ಭೇಟಿಗೆ ರಚಿತಾ ರಾಮ್ ಆ್ಯಂಡ್ ತಂಡಕ್ಕೆ ಅವಕಾಶ ಸಿಕ್ಕಿಲ್ವಂತೆ. ಬರೋಬ್ಬರಿ 5 ಗಂಟೆ ಕಾದು ನಿಂತಿದ್ದರೂ ರಚಿತಾ ರಾಮ್ಗೆ ಜೈಲಿನಲ್ಲಿ ದರ್ಶನ ಭಾಗ್ಯವೇ ಸಿಕ್ಕಿಲ್ಲ. ಕೊನೆಗೆ ಕಾದು ಕಾದು ಸುಸ್ತಾದ ರಚಿತಾ ರಾಮ್ ಆ್ಯಂಡ್ ಟೀಂ ದರ್ಶನ್ ನೋಡದೇ ಅಲ್ಲಿಂದ ವಾಪಸ್ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅಂದಹಾಗೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ದರ್ಶನ್ ಈಗಾಗಲೇ ಜೈಲಿನಲ್ಲಿದ್ದಾರೆ. ಇದೇ ಕೇಸ್ನಲ್ಲಿ ಎ1 ಆರೋಪಿಯಾಗಿರೋ ದರ್ಶನ್ಗೆ ಇದೀಗ ಪ್ರದೋಷ್ ಮಾಫಿಸಾಕ್ಷಿ ಸಂಕಷ್ಟ ಎದುರಾಗಿದ್ದು, ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ.














