‘ನಗು ನಗುತ’ ಒಂದು ಕಿರುಚಿತ್ರವೇ ಆಗಿದೆ. ಈ ಪುಟ್ಟ ಚಿತ್ರದಲ್ಲಿ ಕಾಳಜಿ ಇದೆ. ಆಟೋ ಡ್ರೈವರ್ ಗಳನ್ನ ಎಚ್ಚರಿಸುವ ಮಾತುಗಳು ಇವೆ.
ನಗು ನಗುತ ಸಿನಿಮಾ
(ಚಿತ್ರ ಕೃಪೆ: ನಗು ನಗುತ ಸಿನಿಮಾ ಟೀಮ್)
ಜವಾಬ್ದಾರಿ ಅಂತಲೇ ಕೆಲಸ ಮಾಡ್ತಾನೆ ಇರೋ ಡ್ರೈವರ್ಗಳು ಆರೋಗ್ಯದ ಕಡೆಗೂ ಗಮನ ಕೊಡಬೇಕಿದೆ. ಈ ವಿಚಾರವನ್ನ ಈ ಚಿತ್ರದಲ್ಲಿ ತೋರಲಾಗಿದೆ.
ಈ ನಗು ನುಗುತ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಆಟೋ ಡ್ರೈವರ್ ಪಾತ್ರ ಮಾಡಿದ್ದಾರೆ. ಈ ಒಂದು ಪಾತ್ರದಲ್ಲಿ ವಿಷಯ ಇದೆ ಅಂತಲೇ ವಿಜಯ್ ರಾಘವೇಂದ್ರ ಈ ಚಿತ್ರ ಮಾಡಿದ್ದಾರೆ.
ಈ ಚಿತ್ರವನ್ನ ಶಿವು ಜಮಖಂಡಿ ಡೈರೆಕ್ಷನ್ ಮಾಡಿದ್ದಾರೆ. ಮ್ಯೂಸಿಕ್ ಡೈರೆಕ್ಷನ್ ಕೂಡ ಇವರೇ ಮಾಡಿದ್ದಾರೆ. ಈ ಪುಟ್ಟ ಚಿತ್ರದಲ್ಲಿ ಅತಿ ದೊಡ್ಡ ಸಂದೇಶ ಇದೆ.
ನಿರ್ಮಾಪಕರು ಬಂದು ನಿರ್ದೇಶಕ ಶಿವು ಜಮಖಂಡಿ ಅವರಿಗೆ ಕಥೆ ಹೇಳಿದ್ದಾರೆ. ಕಥೆ ಕೇಳಿದ್ಮೇಲೆ ಇಷ್ಟ ಆಗಿದೆ. ಡೈರೆಕ್ಷನ್ ಮಾಡ್ಬೇಕು ಅನಿಸಿದೆ.
ಹಾಗಾಗಿಯೇ ಈ ಚಿತ್ರ ಮಾಡ್ಬೇಕು ಅನಿಸಿಯೇ ಈ ಸಿನಿಮಾ ಮಾಡಿದ್ದೇನೆ ಅಂತ ಶಿವು ಜಮಖಂಡಿ ಹೇಳಿಕೊಂಡಿದ್ದಾರೆ.
ಚಿತ್ರದ ನಾಯಕಿ ಯಾರು
(ಚಿತ್ರ ಕೃಪೆ: ನಗು ನಗುತ ಸಿನಿಮಾ ಟೀಮ್)
‘ಈ ಕಿರುಚಿತ್ರಕ್ಕೆ ಆಟೋ ಚಾಲಕರು ದೊಡ್ಡ ಮಟ್ಟದಲ್ಲಿ ಪ್ರೊತ್ಸಾಹಿಸಿದ್ದಾರೆ. ಆಟೋ ಚಾಲಕರು ಅವರ ಆರೋಗ್ಯ ಹಾಗೂ ಕುಟುಂಬದ ಕಡೆ ಹೆಚ್ಚು ಗಮನ ಹರಿಸಲಿ ಎನ್ನುವ ಕಾರಣಕ್ಕೆ ಈ ಕಿರುಚಿತ್ರವನ್ನು ಮಾಡಿದ್ದೇವೆ.
ಹೃದಯಾಘಾತ ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗಿದೆ. ಶೀತದ ರೀತಿನೇ ಆಗಿ ಹೋಗಿದೆ. ಆದರೆ ಅದರ ಪರಿಣಾಮ ತೀವ್ರವಾಗಿದೆ. ಸಾಕಷ್ಟು ಕಾರಣಗಳು ಇರುತ್ತವೆ. ಆದರೂ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇರಲಿ’ ಎಂದು ಆಟೋ ಚಾಲಕರಿಗೆ ಎಚ್ಚರಿಕೆಯ ಕಿವಿಮಾತನ್ನು ಹೇಳಿದ್ದಾರೆ.
ಈ ಚಿತ್ರದಲ್ಲಿ ನಾಯಕಿನೂ ಇದ್ದಾರೆ. ವರ್ಷಿತಾ ರಾಮ್ ಈ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಇದು ಕಿರುಚಿತ್ರವೇ ಆಗಿದೆ. ಆದರೆ, ದೊಡ್ಡ ಸಿನಿಮಾ ಮಾಡಿದಷ್ಟೆ ಖುಷಿ ಆಗಿದೆ.
ನನ್ನ ಮೇಲೆ ಇಡೀ ತಂಡ ನಂಬಿಕೆ ಇಟ್ಟಿತ್ತು. ಈ ಒಂದು ಅವಕಾಶವನ್ನು ಕೊಟ್ಟಿತ್ತು. ಈ ಒಂದು ಅವಕಾಶಕ್ಕಾಗಿಯೇ ನಾನು ಇಡೀ ತಂಡಕ್ಕೆ ಧನ್ಯವಾದ ಹೇಳುತ್ತೇನೆ ಅಂತಲೇ ವರ್ಷಿತಾ ರಾಮ್ ಹೇಳಿದ್ದಾರೆ ಅಂತಲೇ ಹೇಳಬಹುದು.













