Smit Machchhar: ಆಸ್ಪತ್ರೆಯಲ್ಲಿ ಈಗ ಹೇಗಿದ್ದಾರೆ ‘ಭಾರತದ ಹೀರೋ’? ಸ್ಮಿತ್ ಮಚ್ಚರ್ ಮೇಲೆ ನಡೆದಿತ್ತಾ ಕೊಡಲಿಯಿಂದ ಹಲ್ಲೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸ್ಮಿತ್ ಮಚ್ಚರ್


Last Updated:

Smit Machchhar: ಫ್ಲೈದುಬೈ ವಿಮಾನದ ಕಾಕ್‌ಪಿಟ್ ಘಟನೆಯಲ್ಲಿ ಗಾಯಗೊಂಡಿದ್ದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಈಗ ಹೇಗಿದ್ದಾರೆ? ಅವರ ಆರೋಗ್ಯ ಹೇಗಿದೆ? ಇದು ಕೋಟ್ಯಂತರ ಭಾರತೀಯರ ಕಾತರ ಮತ್ತು ಆತಂಕ. ಆದರೆ ಇದೀಗ ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ತಮ್ಮ ಆರೋಗ್ಯದ ಕುರಿತಂತೆ ಖುದ್ದು ಸ್ಮಿತ್ ಮಚ್ಚರ್ ಅವರೇ ಟ್ವಿಟರ್‌ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ!

ಸ್ಮಿತ್ ಮಚ್ಚರ್
ಸ್ಮಿತ್ ಮಚ್ಚರ್

ಫ್ಲೈದುಬೈ (Flydubai) ವಿಮಾನದ ಕಾಕ್‌ಪಿಟ್ ಘಟನೆಯಲ್ಲಿ ಗಾಯಗೊಂಡಿದ್ದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ (Captain Smith Machar) ಈಗ ಹೇಗಿದ್ದಾರೆ? ಅವರ ಆರೋಗ್ಯ ಹೇಗಿದೆ? ಇದು ಕೋಟ್ಯಂತರ ಭಾರತೀಯರ ಕಾತರ ಮತ್ತು ಆತಂಕ. ಆದರೆ ಇದೀಗ ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಸ್ಮಿತ್ ಆರೋಗ್ಯದಲ್ಲಿ ಚೇತರಿಕೆ ಆಗುತ್ತಿದೆ ಎಂದು ಭಾರತದ ಯುಎಇ ರಾಯಭಾರಿ ದೀಪಕ್ ಮಿತ್ತಲ್ ಗುರುವಾರ ತಿಳಿಸಿದ್ದಾರೆ. ಅವರು ಆಸ್ಪತ್ರೆಗೆ ಭೇಟಿ ನೀಡಿ ಸ್ಮಿತ್ ಮಚ್ಚರ್ ಕುಟುಂಬವನ್ನು ಭೇಟಿಯಾದರು ಅಂತ ಮೂಲಗಳು ತಿಳಿಸಿವೆ. 

ಈಗ ಹೇಗಿದ್ದಾರೆ ಕ್ಯಾಪ್ಟನ್ ಸ್ಮಿತ್ ಮಚ್ಚರ್?

ಭಾರತೀಯ ರಾಯಭಾರ ಕಚೇರಿ “ಕ್ಯಾಪ್ಟನ್ ಮಚ್ಛರ್ ಉತ್ತಮ ಆರೋಗ್ಯದಲ್ಲಿದ್ದಾರೆ, ಅವರು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಚೆನ್ನಾಗಿ ನಡೆಯುತ್ತಿದೆ” ಎಂದು ಹೇಳಿದೆ. ಚಿಕಿತ್ಸೆ ಮುಂದುವರಿಸಲು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿಯೂ ತಿಳಿಸಿದೆ.

ಘಟನೆ ಬಳಿಕ ಸ್ಮಿತ್ ಮಚ್ಚರ್ ಮೊದಲ ರಿಯಾಕ್ಷನ್!

ಇನ್ನು ತಮ್ಮ ಆರೋಗ್ಯದ ಕುರಿತಂತೆ ಇದೇ ಮೊದಲ ಬಾರಿಗೆ ಖುದ್ದು ಸ್ಮಿತ್ ಮಚ್ಚರ್ ಅವರೇ ಮಾಹಿತಿ ನೀಡಿದ್ದಾರೆ. ಘಟನೆ ಬಳಿಕ ಇದೀಗ ಟ್ವೀಟ್ ಮಾಡಿದ್ದಾರಂತೆ! ಆದರೆ ಇದು ಸ್ಮಿತ್ ಅವರದ್ದೇ ಅಕೌಂಟ್ ಅಥವಾ ಅವರ ಕುಟುಂಬಸ್ಥರ ಅಕೌಂಟ್ ಅಥವಾ ಬೇರೆ ಅಕೌಂಟ್ ಅಂತ ತಿಳಿದು ಬಂದಿಲ್ಲ. ಇದರಲ್ಲಿ, ನಿಮ್ಮೆಲ್ಲರೊಂದಿಗೆ ಒಂದು ಪ್ರಮುಖ ವಿಷಯವನ್ನು ಹಂಚಿಕೊಳ್ಳಲು ನಾನು ಇಂದು ಈ ಖಾತೆಯನ್ನು (account) ತೆರೆದಿದ್ದೇನೆ. ನನ್ನೊಂದಿಗೆ ನಿಂತು, ನನಗೆ ಬೆಂಬಲ ನೀಡಿ ಮತ್ತು ತಮ್ಮ ಪ್ರಾರ್ಥನೆಗಳಲ್ಲಿ ನನ್ನನ್ನು ನೆನಪಿಸಿಕೊಂಡ ಪ್ರತಿಯೊಬ್ಬರಿಗೂ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ.

ನಾನು ಈಗ ಚೇತರಿಸಿಕೊಳ್ಳುತ್ತಿದ್ದೇನೆ

ನನ್ನ ಆರೋಗ್ಯ ಈಗ ಅಪಾಯದಿಂದ ಪಾರಾಗಿದೆ ಮತ್ತು ನಾನು ಚೇತರಿಸಿಕೊಳ್ಳುತ್ತಿದ್ದೇನೆ ಎಂಬ ವಿಷಯವನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. ಈ ಕಠಿಣ ಸಮಯದಲ್ಲಿ ನಿಮ್ಮ ಪ್ರಾರ್ಥನೆ, ಬೆಂಬಲ ಮತ್ತು ಶುಭ ಹಾರೈಕೆಗಳು ನನಗೆ ಬಹಳ ದೊಡ್ಡ ಆಸರೆಯಾಗಿವೆ ಎಂದಿದ್ದಾರೆ. ನನ್ನ ಪರವಾಗಿ ಪ್ರಾರ್ಥಿಸಿದ ಮತ್ತು ನನಗೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಿಮ್ಮೆಲ್ಲರನ್ನೂ ನಾನು ನಿಜವಾಗಿಯೂ ಗೌರವಿಸುತ್ತೇನೆ ಮತ್ತು ಕೃತಜ್ಞನಾಗಿದ್ದೇನೆ ಅಂತ ಸ್ಮಿತ್ ಮಚ್ಚರ್ ಹೆಸರಿನ ಟ್ವಿಟರ್ ಖಾತೆಯಲ್ಲಿ ಹೇಳಿದ್ದಾರೆ.

ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನದಲ್ಲಿ ಘಟನೆ

ಬುಧವಾರ ದುಬೈಯಿಂದ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನ ಎಫ್‌ಝಡ್ 1073ರಲ್ಲಿ ಘಟನೆ ನಡೆಯಿತು. ವಿಮಾನದಲ್ಲಿ 174 ಜನರಿದ್ದರು. ಇಸ್ರೇಲ್ ಅಧಿಕಾರಿಗಳ ಪ್ರಕಾರ, ಒಮಾನ್ ದೇಶದ ಸಹ-ಪೈಲಟ್ ಕಾಕ್‌ಪಿಟ್‌ನಲ್ಲಿ ಕ್ಯಾಪ್ಟನ್ ಮಚ್ಛರ್ ಮೇಲೆ ದಾಳಿ ಮಾಡಿ ವಿಮಾನವನ್ನು ಆ್ಯಕ್ಸಿಡೆಂಟ್ ಮಾಡಲು ಯೋಜಿಸಿದ್ದ. ವಿಮಾನ ಸುಮಾರು 14,000 ಅಡಿ ಎತ್ತರದಿಂದ 30 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಕೆಳಗೆ ಇಳಿಯಿತು.

ಸ್ಮಿತ್ ಮೇಲೆ ಕೊಡಲಿಯಿಂದ ದಾಳಿ

ಗಂಭೀರವಾಗಿ ಗಾಯಗೊಂಡು ರಕ್ತಸ್ರಾವದಲ್ಲಿದ್ದರೂ, ಕ್ಯಾಪ್ಟನ್ ಸ್ಮಿತ್ ಮಚ್ಚರ್ ಸಾಹಸಪಟ್ಟು ಆತನನ್ನು ತಡೆದಿದ್ದಾರೆ. ಬಳಿಕ ಅರೇಬಿಯಾದ ವಾಯುವ್ಯ ಭಾಗದ ತಬುಕ್‌ನಲ್ಲಿ ತುರ್ತು ಇಳಿಯಿತು. ಪ್ರಯಾಣಿಕರು ಸುರಕ್ಷಿತವಾಗಿ ಇಸ್ರೇಲ್ ತಲುಪಿದರು. ಇನ್ನು ಸ್ಮಿತ್‌ ಮೇಲೆ ಚಾಕುವಿನ ದಾಳಿ ಮಾಡಲಾಗಿದೆ ಎಂದು ಹೇಳಲಾಗಿತ್ತು. ಆದರೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದಂತೆ, ಸಹ-ಪೈಲಟ್ ಕಾಕ್‌ಪಿಟ್‌ನಲ್ಲಿರುವ ಕ್ರ್ಯಾಶ್ ಆಕ್ಸ್ (ತುರ್ತು ಕೊಡಲಿ) ಬಳಸಿದ್ದಾರೆ.

ಸ್ಮಿತ್‌ಗೆ ಆಸ್ಪತ್ರೆಯಲ್ಲಿ ಮುಂದುವರೆದ ಚಿಕಿತ್ಸೆ

ಘಟನೆಯ ಸಮಯದಲ್ಲಿ ವಿಮಾನ ಮೊದಲು ಸಾಮಾನ್ಯ ತುರ್ತು ಸಂಕೇತ ಸ್ಕ್ವಾಕ್ 7700, ನಂತರ ಕಾನೂನುಬಾಹಿರ ಹಸ್ತಕ್ಷೇಪ ಸೂಚಿಸುವ 7500 ಕಳುಹಿಸಿತು. ಮಚ್ಛರ್ ಅವರಿಗೆ ತಬುಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಅಂದು ರಾತ್ರಿ ರಿಯಾದ್‌ನ ಭಾರತೀಯ ರಾಯಭಾರ ಕಚೇರಿ ಅವರ ಪರಿಸ್ಥಿತಿ ಸ್ಥಿರವಾಗಿದೆ ಎಂದಿತ್ತು. ಮರುದಿನ ಅವರನ್ನು ಯುಎಇಗೆ ಸ್ಥಳಾಂತರಿಸಲಾಯಿತು. ರಾಯಭಾರ ಕಚೇರಿ ಚಿಕಿತ್ಸೆ ಮುಂದುವರಿಯುವಂತೆ ನೋಡಿಕೊಳ್ಳುತ್ತಿದೆ ಅಂತ ನ್ಯೂಸ್ 18 ಇಂಗ್ಲಿಷ್ ವರದಿ ಮಾಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed