India vs Pakistan: ಕೊನೆಯ 47 ಸೆಕೆಂಡ್​ಗಳಿದ್ದಾಗ ರೋಚಕ ಗೋಲು! ಪಾಕಿಸ್ತಾನ ಬಗ್ಗುಬಡಿದು ಚಿನ್ನದ ಪಂದ್ಯಕ್ಕೆ ಎಂಟ್ರಿಕೊಟ್ಟ ಭಾರತ | ಕ್ರೀಡಾ ಸುದ್ದಿ | ACTPnews

ಭಾರತ ಹಾಕಿ ತಂಡ


Last Updated:


ಪಂದ್ಯದ ಮೂರನೇ ಕ್ವಾರ್ಟರ್‌ವರೆಗೆ ಹಿನ್ನಡೆಯಲ್ಲಿದ್ದ ಪಾಕಿಸ್ತಾನ ತಂಡ, ನಾಲ್ಕನೇ ಕ್ವಾರ್ಟರ್‌ನಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿ 2 ಗೋಲು ಸಿಡಿಸಿ ಸ್ಕೋರ್ ಅನ್ನು 3-3 ರಿಂದ ಸಮಬಲಗೊಳಿಸಿತ್ತು. ಆದರೆ ಅಂತಿಮ ಕ್ಷಣದಲ್ಲಿ ಅಭಿಷೇಕ್ ಭಾರತಕ್ಕೆ ಭರ್ಜರಿ ಜಯ ತಂದುಕೊಟ್ಟರು.

ಭಾರತ ಹಾಕಿ ತಂಡ
ಭಾರತ ಹಾಕಿ ತಂಡ

ಏಷ್ಯನ್ ಗೇಮ್ಸ್‌ನ (Asian Games) ಪುರುಷರ ಹಾಕಿ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್ ಭಾರತ ತಂಡ (Team India) ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ (India vs Pakistan) ರೋಚಕ ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ತೀವ್ರ ಕುತೂಹಲ ಕೆರಳಿಸಿದ್ದ ಸೆಮಿಫೈನಲ್ ಪಂದ್ಯದಲ್ಲಿ ಭಾರತ 4-3 ಗೋಲುಗಳ ಅಂತರದಿಂದ ಪಾಕಿಸ್ತಾನವನ್ನು ಮಣಿಸಿತು. ಕೊನೆಯ 47 ಸೆಕೆಂಡುಗಳು ಬಾಕಿ ಇರುವಾಗ ಅಭಿಷೇಕ್ ಬಾರಿಸಿದ ಫೀಲ್ಡ್ ಗೋಲ್ ಭಾರತದ ಗೆಲುವಿನ ರೂವಾರಿಯಾಯಿತು.

ಪಂದ್ಯದ ಮೂರನೇ ಕ್ವಾರ್ಟರ್‌ವರೆಗೆ ಹಿನ್ನಡೆಯಲ್ಲಿದ್ದ ಪಾಕಿಸ್ತಾನ ತಂಡ, ನಾಲ್ಕನೇ ಕ್ವಾರ್ಟರ್‌ನಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿ 2 ಗೋಲು ಸಿಡಿಸಿ ಸ್ಕೋರ್ ಅನ್ನು 3-3 ರಿಂದ ಸಮಬಲಗೊಳಿಸಿತ್ತು. ಆದರೆ ಅಂತಿಮ ಕ್ಷಣದಲ್ಲಿ ಅಭಿಷೇಕ್ ಭಾರತಕ್ಕೆ ಭರ್ಜರಿ ಜಯ ತಂದುಕೊಟ್ಟರು. ಫೈನಲ್‌ನಲ್ಲಿ ಭಾರತ ತಂಡ, ಮಲೇಷ್ಯಾ ಮತ್ತು ದಕ್ಷಿಣ ಕೊರಿಯಾ ನಡುವಿನ ಎರಡನೇ ಸೆಮಿಫೈನಲ್ ಪಂದ್ಯದ ವಿಜೇತರನ್ನು ಎದುರಿಸಲಿದೆ.

ಭಾರತ ಮತ್ತು ಪಾಕ್ ಪರ ಗೋಲು ಗಳಿಸಿದವರು

* ಹರ್ಮನ್‌ಪ್ರೀತ್ ಸಿಂಗ್ (ಭಾರತ): 5ನೇ ಮತ್ತು 13ನೇ ನಿಮಿಷದಲ್ಲಿ ಎರಡು ಗೋಲು.

* ಸುಖ್‌ಜೀತ್ (ಭಾರತ): 23ನೇ ನಿಮಿಷದಲ್ಲಿ ಒಂದು ಗೋಲು.

* ಅಭಿಷೇಕ್ (ಭಾರತ): 60ನೇ ನಿಮಿಷದಲ್ಲಿ ಮ್ಯಾಚ್ ವಿನ್ನಿಂಗ್ ಗೋಲು.

* ಅಬು ಬಕರ್ (ಪಾಕಿಸ್ತಾನ): 30ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಮೊದಲ ಗೋಲು.

* ಶಾಹಿದ್ ಹನ್ನಾನ್ (ಪಾಕಿಸ್ತಾನ): 45 ಮತ್ತು 49ನೇ ನಿಮಿಷಗಳಲ್ಲಿ ಗೋಲು.

* ರಾಣಾ ವಾಹಿದ್ (ಪಾಕಿಸ್ತಾನ): 49ನೇ ನಿಮಿಷಗಳಲ್ಲಿ ಗೋಲು.

28 ವರ್ಷಗಳ ಬಳಿಕ ಭಾರತಕ್ಕೆ ಅಪರೂಪದ ದಾಖಲೆ

1998ರ ಬ್ಯಾಂಕಾಕ್ ಏಷ್ಯನ್ ಗೇಮ್ಸ್ ಬಳಿಕ ಭಾರತದ ಪುರುಷರ ಮತ್ತು ಮಹಿಳಾ ಹಾಕಿ ತಂಡಗಳೆರಡೂ ಏಕಕಾಲದಲ್ಲಿ ಫೈನಲ್ ತಲುಪಿರುವುದು ಇದೇ ಮೊದಲು. 2016ರ ದಕ್ಷಿಣ ಏಷ್ಯಾ ಕ್ರೀಡಾಕೂಟದ ಫೈನಲ್ ನಂತರ ಭಾರತ ತಂಡ ಪಾಕಿಸ್ತಾನ ವಿರುದ್ಧ ಸೋಲಿಲ್ಲದೇ ತನ್ನ ಅಜೇಯ ದಾಖಲೆಯನ್ನು ಈ ಪಂದ್ಯದಲ್ಲೂ ಮುಂದುವರಿಸಿದೆ. ಚಿನ್ನದ ಪದಕಕ್ಕೆ ಈಗ ಭಾರತ ಕೇವಲ ಒಂದು ಹೆಜ್ಜೆ ಮಾತ್ರ ದೂರದಲ್ಲಿದೆ.

ಟೂರ್ನಿಯಲ್ಲಿ ಅಜೇಯ ಓಟ

ಈ ವರ್ಷದ ವಿಶ್ವಕಪ್‌ನಲ್ಲಿ 7ನೇ ಸ್ಥಾನ ಪಡೆದಿದ್ದ ಭಾರತ ತಂಡ, ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದು ಫೈನಲ್ ಪ್ರವೇಶಿಸಿದೆ. ಗ್ರೂಪ್ ಹಂತದಲ್ಲಿ ಇಂಡೋನೇಷ್ಯಾವನ್ನು 13-1, ಶ್ರೀಲಂಕಾವನ್ನು 16-1, ದಕ್ಷಿಣ ಕೊರಿಯಾವನ್ನು 8-2, ಜಪಾನ್ ಅನ್ನು 2-0 ಮತ್ತು ಬಾಂಗ್ಲಾದೇಶವನ್ನು 10-0 ಗೋಲುಗಳಿಂದ ಭಾರತ ಧೂಳೀಪಟ ಮಾಡಿತ್ತು.

ನಾಯಕ ಹರ್ಮನ್‌ಪ್ರೀತ್ ಸಿಂಗ್ ಪ್ರಸ್ತುತ 10 ಗೋಲುಗಳೊಂದಿಗೆ ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಸುಫಿಯಾನ್ ಖಾನ್ (11 ಗೋಲು) ಮೊದಲ ಸ್ಥಾನದಲ್ಲಿದ್ದಾರೆ.

ವಾಲಿಬಾಲ್ ಸೋಲಿಗೆ ಹಾಕಿಯಲ್ಲಿ ಸೇಡು

ಇದೇ ದಿನ ನಡೆದಿದ್ದ ಪುರುಷರ ವಾಲಿಬಾಲ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ 0-3 (19-25, 23-25, 18-25) ಸೆಟ್‌ಗಳಿಂದ ಸೋತು ನಿರಾಶೆ ಅನುಭವಿಸಿತ್ತು. ಈ ಮೂಲಕ ವಾಲಿಬಾಲ್‌ನಲ್ಲಿ 40 ವರ್ಷಗಳ ಬಳಿಕ ಮೆಡಲ್ ಗೆಲ್ಲುವ ಭಾರತದ ಕನಸು ಭಗ್ನಗೊಂಡಿತ್ತು. ಆದರೆ, ಸಂಜೆ ನಡೆದ ಹಾಕಿ ಪಂದ್ಯದಲ್ಲಿ ಪಾಕ್ ತಂಡವನ್ನು ಮಣಿಸುವ ಮೂಲಕ ಭಾರತೀಯ ಹಾಕಿ ತಂಡ ವಾಲಿಬಾಲ್ ಸೋಲಿಗೆ ಭರ್ಜರಿ ಸೇಡು ತೀರಿಸಿಕೊಂಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed