Narendra Modi-Trump: ದೂರವಾಣಿ ಕರೆ ಮೂಲಕ ಮೋದಿ-ಟ್ರಂಪ್ ಮಹತ್ವದ ಮಾತುಕತೆ! US​ ಅಧ್ಯಕ್ಷರ ಜೊತೆಗಿನ ಸಂಭಾಷಣೆ ಬಗ್ಗೆ ಪಿಎಂ ಹೇಳಿದ್ದಿಷ್ಟು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ನರೇಂದ್ರ ಮೋದಿ-ಡೊನಾಲ್ಡ್ ಟ್ರಂಪ್ (ಫೈಲ್ ಫೋಟೋ)


Last Updated:

ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿರುವುದನ್ನು ವಿರೋಧಿಸಿ ಅಮೆರಿಕವು ಭಾರತದ ಮೇಲೆ ಶೇ. 25 ರಷ್ಟು ಸುಂಕ (Tariffs) ಮತ್ತು ಹೆಚ್ಚುವರಿ ಶೇ. 50 ರಷ್ಟು ತೆರಿಗೆಯನ್ನು ವಿಧಿಸಿತ್ತು. ಈ ಕಠಿಣ ಕ್ರಮದ ಬಳಿಕ ಇವರಿಬ್ಬರ ನಡುವೆ ನಡೆದ ಮೊದಲ ಭೇಟಿ ಇದಾಗಿದೆ. ಇತ್ತೀಚೆಗೆ ಇವಿಯಾನ್‌ನಲ್ಲಿ ನಡೆದ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಅಧ್ಯಕ್ಷ ಟ್ರಂಪ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು.

 ನರೇಂದ್ರ ಮೋದಿ-ಡೊನಾಲ್ಡ್ ಟ್ರಂಪ್ (ಫೈಲ್ ಫೋಟೋ)
ನರೇಂದ್ರ ಮೋದಿ-ಡೊನಾಲ್ಡ್ ಟ್ರಂಪ್ (ಫೈಲ್ ಫೋಟೋ)

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ (Conflict in West Asia) ಭುಗಿಲೆದ್ದಿರುವ ಸಂಘರ್ಷ ಎಂಟನೇ ತಿಂಗಳಿಗೆ ಕಾಲಿಟ್ಟಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬುಧವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರೊಂದಿಗೆ ದೂರವಾಣಿ ಮೂಲಕ ಮಹತ್ವದ ಮಾತುಕತೆ ನಡೆಸಿದ್ದಾರೆ. ಉಭಯ ನಾಯಕರು ದ್ವಿಪಕ್ಷೀಯ ವ್ಯಾಪಾರ ಮತ್ತು ಹಲವು ಪ್ರಮುಖ ಅಂತಾರಾಷ್ಟ್ರೀಯ ವಿದ್ಯಮಾನಗಳ ಕುರಿತು ಸುದೀರ್ಘವಾಗಿ ಚರ್ಚಿಸಿದ್ದಾರೆ. ಪ್ರಧಾನಿ ಮೋದಿ ಸ್ವತಃ ಈ ಸಂಭಾಷಣೆಯ ಬಗ್ಗೆ ವಿವರಗಳನ್ನು ಹಂಚಿಕೊಟ್ಟಿದ್ದಾರೆ.  ವ್ಯಾಪಾರ, ಇಂಧನ ಮತ್ತು ನಿರ್ಣಾಯಕ ತಂತ್ರಜ್ಞಾನಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಗೆ ಒತ್ತು

ಮಾತುಕತೆಯ ಬಳಿಕ ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಈ ಸಂಭಾಷಣೆಯನ್ನು “ಅತ್ಯಂತ ಉಪಯುಕ್ತವಾಗಿತ್ತು” ಎಂದು ಬಣ್ಣಿಸಿದ್ದಾರೆ. ವ್ಯಾಪಾರ, ರಕ್ಷಣೆ, ಇಂಧನ, ನಿರ್ಣಾಯಕ ತಂತ್ರಜ್ಞಾನಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ದ್ವಿಪಕ್ಷೀಯ ಸಹಕಾರವನ್ನು ಉಭಯ ನಾಯಕರು ಪರಿಶೀಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

“ನಮ್ಮ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಮುನ್ನಡೆಸಲು ನಿಕಟವಾಗಿ ತೊಡಗಿಸಿಕೊಳ್ಳಲು ನಾವು ಒಪ್ಪಿಕೊಂಡಿದ್ದೇವೆ. ಜಾಗತಿಕ ಶಾಂತಿ ಮತ್ತು ಭದ್ರತೆಯನ್ನು ಉತ್ತೇಜಿಸುವ ನಿರಂತರ ಪ್ರಯತ್ನಗಳು ಸೇರಿದಂತೆ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಕುರಿತು ನಾವು ಪರಸ್ಪರ ಅನಿಸಿಕೆಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

 ಟಾರಿಫ್ ವಿವಾದದ ಬಳಿಕ ಮೊದಲ ಮಾತುಕತೆ

ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿರುವುದನ್ನು ವಿರೋಧಿಸಿ ಅಮೆರಿಕವು ಭಾರತದ ಮೇಲೆ ಶೇ. 25 ರಷ್ಟು ಸುಂಕ (Tariffs) ಮತ್ತು ಹೆಚ್ಚುವರಿ ಶೇ. 50 ರಷ್ಟು ತೆರಿಗೆಯನ್ನು ವಿಧಿಸಿತ್ತು. ಈ ಕಠಿಣ ಕ್ರಮದ ಬಳಿಕ ಇವರಿಬ್ಬರ ನಡುವೆ ನಡೆದ ಮೊದಲ ಭೇಟಿ ಇದಾಗಿದೆ. ಇತ್ತೀಚೆಗೆ ಇವಿಯಾನ್‌ನಲ್ಲಿ ನಡೆದ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಅಧ್ಯಕ್ಷ ಟ್ರಂಪ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು.

ಅಮೆರಿಕ ಪ್ರವಾಸದಲ್ಲಿ ವಾಣಿಜ್ಯ ಸಚಿವ ಪಿಯೂಷ್ ಗೋಯಲ್

ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವೆ ಮಾತುಕತೆ ನಡೆದ ಬೆನ್ನಲ್ಲೇ, ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 5 ರವರೆಗೆ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮತ್ತು ಮಧ್ಯಂತರ ವ್ಯವಸ್ಥೆಯ ಕುರಿತು ಮಾತುಕತೆ ನಡೆಸುವುದು ಈ ಪ್ರವಾಸದ ಮುಖ್ಯ ಉದ್ದೇಶವಾಗಿದೆ.

ಉಭಯ ದೇಶಗಳ ನಡುವೆ “ಸಮತೋಲಿತ ಮತ್ತು ಪರಸ್ಪರ ಲಾಭದಾಯಕ” ವ್ಯಾಪಾರ ಒಪ್ಪಂದವನ್ನು ಮುನ್ನಡೆಸುವ ಪ್ರಯತ್ನಗಳ ಭಾಗವಾಗಿ ಗೋಯಲ್ ಅವರು ತಮ್ಮ ಅಮೆರಿಕದ ಸಹವರ್ತಿಗಳನ್ನು ಭೇಟಿಯಾಗಲಿದ್ದಾರೆ ಎಂದು ನವದೆಹಲಿ ಮೂಲಗಳು ತಿಳಿಸಿವೆ.

ಉತ್ಪಾದನಾ ವಲಯದ ಪ್ರಮುಖರೊಂದಿಗೆ ಸಭೆ

ಜಿ20 ವ್ಯಾಪಾರ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಗೋಯಲ್ ಅವರು ಮಂಗಳವಾರವೇ ಮಿಲ್ವಾಕಿಗೆ ತಲುಪಿದ್ದಾರೆ. ಅಲ್ಲಿ ‘ನ್ಯಾಷನಲ್ ಅಸೋಸಿಯೇಷನ್ ​​ಆಫ್ ಮ್ಯಾನುಫ್ಯಾಕ್ಚರರ್ಸ್’ ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ಅವರು ಅಮೆರಿಕದ ಪ್ರಮುಖ ಉತ್ಪಾದನಾ ಮತ್ತು ತಂತ್ರಜ್ಞಾನ ಕಂಪನಿಗಳ ಮುಖ್ಯಸ್ಥರು ಹಾಗೂ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ ಎಂದು ಭಾರತದ ವಾಣಿಜ್ಯ ಸಚಿವಾಲಯ ತಿಳಿಸಿದೆ.

ಇದರ ಜೊತೆಗೆ, ಯುಎಸ್ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಅವರ ಆಹ್ವಾನದ ಮೇರೆಗೆ ವಿಸ್ಕಾನ್ಸಿನ್‌ನಲ್ಲಿ ನಡೆಯಲಿರುವ ಜಿ20 ವ್ಯಾಪಾರ ಸಚಿವರ ಸಭೆಯಲ್ಲೂ ಅವರು ಭಾಗವಹಿಸಲಿದ್ದಾರೆ. ಭಾರತ ಮತ್ತು ಅಮೆರಿಕ ನಡುವೆ ಕಳೆದ ಹಲವು ತಿಂಗಳುಗಳಿಂದ ಮಾತುಕತೆ ನಡೆಯುತ್ತಿದ್ದರೂ, ಒಪ್ಪಂದದಲ್ಲಿ ಸುಧಾರಿತ ನಿಯಮಗಳನ್ನು ಭಾರತ ಬಯಸುತ್ತಿರುವುದರಿಂದ ಇನ್ನು ಯಾವುದೇ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed