Rajinikanth: ರಜನಿಕಾಂತ್ ಜೊತೆ ಶ್ರೀಲೀಲಾ ಶೂಟಿಂಗ್; ‘ಧರ್ಮನ್’ ಸೆಟ್‌ನಿಂದ ಲೀಕ್ ಆಯ್ತು ನಟಿಯ ಲುಕ್! | | ACTPnews

News18


Last Updated:

ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲೂ ತಮ್ಮದೇ ಛಾಪು ಮೂಡಿಸಿರುವ ನಟಿ ಶ್ರೀಲೀಲಾ ಇದೀಗ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಸಿನಿಮಾದ ಭಾಗವಾಗಿದ್ದಾರೆ.

News18
News18

ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲೂ ತಮ್ಮದೇ ಛಾಪು ಮೂಡಿಸಿರುವ ನಟಿ ಶ್ರೀಲೀಲಾ (Actress Sreeleela) ಇದೀಗ ಸೂಪರ್‌ಸ್ಟಾರ್ ರಜನಿಕಾಂತ್ (Superstar Rajinikanth) ಅಭಿನಯದ ಬಹುನಿರೀಕ್ಷಿತ ಸಿನಿಮಾದ ಭಾಗವಾಗಿದ್ದಾರೆ. ಅಶ್ವತ್ ಮಾರಿಮುತ್ತು ನಿರ್ದೇಶನದ ‘ಧರ್ಮನ್’ ಸಿನಿಮಾದ ಮೈಸೂರು ಶೆಡ್ಯೂಲ್‌ನಲ್ಲಿ ಶ್ರೀಲೀಲಾ ಚಿತ್ರೀಕರಣದಲ್ಲಿ ಭಾಗವಹಿಸಿರುವ ಸುದ್ದಿ ಹೊರಬಿದ್ದಿದೆ.

ಮೈಸೂರಿನಲ್ಲಿ ಧರ್ಮನ್ ಶೂಟಿಂಗ್

ರಜನಿಕಾಂತ್ ಅಭಿನಯದ ಧರ್ಮನ್ ಸಿನಿಮಾದ ಚಿತ್ರೀಕರಣ ಸದ್ಯ ಮೈಸೂರು ಭಾಗದಲ್ಲಿ ನಡೆಯುತ್ತಿದೆ. ಸಿನಿಮಾದ ನಾಲ್ಕನೇ ಶೆಡ್ಯೂಲ್ ಮೈಸೂರಿನಲ್ಲಿ ನಡೆಯಲಿದೆ ಎಂದು ನಿರ್ದೇಶಕ ಅಶ್ವತ್ ಮಾರಿಮುತ್ತು ಈ ಹಿಂದೆ ತಿಳಿಸಿದ್ದರು. ಸುಮಾರು ಹತ್ತು ದಿನಗಳ ಕಾಲ ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಸುವ ಯೋಜನೆ ಇತ್ತು. ಇದೀಗ ಈ ಶೆಡ್ಯೂಲ್‌ನಲ್ಲಿ ಹಲವು ಪ್ರಮುಖ ಕಲಾವಿದರು ಭಾಗಿಯಾಗಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

ಶ್ರೀಲೀಲಾ ಧರ್ಮನ್ ತಂಡಕ್ಕೆ ಎಂಟ್ರಿ

ಶ್ರೀಲೀಲಾ ಧರ್ಮನ್ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂಬುದು ಇದೀಗ ವರದಿಯಾಗಿದೆ. ಸೆಪ್ಟೆಂಬರ್ 30ರಂದು ಮೈಸೂರಿನ ಚಿತ್ರೀಕರಣ ಸ್ಥಳದಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಭಾಗದ ಚಿತ್ರೀಕರಣ ಆರಂಭಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಸಿನಿಮಾದಲ್ಲಿ ಅವರ ಪಾತ್ರದ ಸಂಪೂರ್ಣ ವಿವರಗಳನ್ನು ಚಿತ್ರತಂಡ ಇನ್ನೂ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ: Kantara Movie: 4 ವರ್ಷಗಳ ಬಳಿಕವೂ ಕಾಂತಾರ ನೆನಪು; ಮನದಾಳದ ಮಾತು ಹಂಚಿಕೊಂಡ ರಿಷಬ್ ಶೆಟ್ಟಿ!

ಮೈಸೂರು ಶೆಡ್ಯೂಲ್‌ನಲ್ಲಿ ಶ್ರೀಲೀಲಾ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿರುವುದು ಗಮನ ಸೆಳೆದಿದೆ. ಸೋಮನಾಥಪುರ ಭಾಗದಲ್ಲಿ ಚಿತ್ರೀಕರಣ ನಡೆಯುತ್ತಿದೆ ಎಂಬ ಮಾಹಿತಿ ಹರಿದಾಡಿದ್ದು, ಹಾಡಿನ ಚಿತ್ರೀಕರಣ ಸೇರಿದಂತೆ ಸಿನಿಮಾದ ಕೆಲವು ದೃಶ್ಯಗಳನ್ನು ಈ ಭಾಗದಲ್ಲಿ ಸೆರೆಹಿಡಿಯಲಾಗುತ್ತಿದೆ ಎನ್ನಲಾಗಿದೆ. ಶ್ರೀಲೀಲಾ ಸಾಂಪ್ರದಾಯಿಕ ಲುಕ್‌ನ ದೃಶ್ಯಗಳು ಹೊರಬರುತ್ತಿದ್ದಂತೆ ಅಭಿಮಾನಿಗಳಲ್ಲಿ ಸಿನಿಮಾದಲ್ಲಿನ ಪಾತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಇದೇ ಶೂಟಿಂಗ್ ವೇಳೆಯಲ್ಲಿ ರಜನಿಕಾಂತ್ ಸರಳವಾಗಿ ಆಟೋದಲ್ಲಿ ಚಿತ್ರೀಕರಣ ಸ್ಥಳಕ್ಕೆ ಆಗಮಿಸಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಮೈಸೂರಿನಲ್ಲಿ ಶೂಟಿಂಗ್ ನಡೆಯುತ್ತಿರುವ ವಿಷಯ ತಿಳಿದು ಹಲವು ಅಭಿಮಾನಿಗಳು ಸ್ಥಳದ ಬಳಿ ಜಮಾಯಿಸಿದ್ದರು. ಆಟೋದಿಂದ ಇಳಿದ ರಜನಿಕಾಂತ್ ಅಭಿಮಾನಿಗಳತ್ತ ಕೈ ಬೀಸಿ ನಂತರ ಚಿತ್ರೀಕರಣಕ್ಕೆ ತೆರಳಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇದನ್ನೂ ಓದಿ: Darshan: ಶವ ಬಿಸಾಕೋವರೆಗೂ ಬಾಯ್ಬಿಟ್ಟಿರುವ ಪ್ರದೋಷ್! ಸರೆಂಡರ್ ಆದ ಕಥೆ ಸೋಮವಾರ ರಿವೀಲ್

ಧರ್ಮನ್ ಸಿನಿಮಾದಲ್ಲಿ ರಜನಿಕಾಂತ್ ಜೊತೆಗೆ ಸಿಮ್ರನ್, ರಾಶಿ ಖನ್ನಾ ಹಾಗೂ ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಮತ್ತು ಆರ್. ಮಹೇಂದ್ರನ್ ಅವರ ಟರ್ಮರಿಕ್ ಮೀಡಿಯಾ ಸಹಯೋಗದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಅಶ್ವತ್ ಮಾರಿಮುತ್ತು ನಿರ್ದೇಶನ ಮಾಡುತ್ತಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ತೆಲುಗಿನ ನಟ ರಾಮ್ ಪೊತಿನೇನಿ ಕೂಡ ಧರ್ಮನ್ ತಂಡದ ಭಾಗವಾಗಿರುವುದು ಇದೀಗ ಸ್ಪಷ್ಟವಾಗಿದೆ. ರಾಶಿ ಖನ್ನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಚಿತ್ರವೊಂದರಲ್ಲಿ ರಜನಿಕಾಂತ್ ಮತ್ತು ರಾಮ್ ಪೊತಿನೇನಿ ಕಾಣಿಸಿಕೊಂಡಿದ್ದರು. ಆ ಪೋಸ್ಟ್ ಬಳಿಕ ಅಳಿಸಲ್ಪಟ್ಟಿದ್ದರೂ, ರಾಮ್ ಸಿನಿಮಾದಲ್ಲಿರುವುದು ಕುರಿತು ವರದಿಗಳು ಮತ್ತಷ್ಟು ಬಲಗೊಂಡಿವೆ. ಆದರೆ ಅವರು ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಚಿತ್ರತಂಡ ಅಧಿಕೃತವಾಗಿ ಬಹಿರಂಗಪಡಿಸಿಲ್ಲ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed