YouTuber Madhumitha: ಕಳ್ಳರಿಗೆ ಯೂಟ್ಯೂಬರ್​ ಮಧುಮಿತಾ ವಿಳಾಸ ಸಿಕ್ಕಿದ್ದೇಗೆ? ರೀಲ್ಸ್​​​ನಲ್ಲಿ ಮಾಡಿದ್ದ ಇದೊಂದು ಯಡವಟ್ಟು ಕಾರಣವಾಯ್ತಾ? / YouTuber Madhumitha: Did a Re | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಕಳ್ಳರಿಗೆ ಯೂಟ್ಯೂಬರ್​ ಮಧುಮಿತಾ ವಿಳಾಸ ಸಿಕ್ಕಿದ್ದೇಗೆ?


Last Updated:

ಯೂಟ್ಯೂಬರ್ ಮಧುಮಿತಾ ಅವರ ಮನೆಯಲ್ಲಿ ಕಳ್ಳತನ ನಡೆದ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಇದೀಗ ಈ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಮಧ್ಯೆ ಮಧುಮಿತಾ ಮನೆ ವಿಳಾಸ ಕಳ್ಳರಿಗೆ ಹೇಗೆ ಗೊತ್ತಾಯಿತು ಎಂಬ ಅನುಮಾನ ವ್ಯಕ್ತವಾಗಿದ್ದು, ಕಳ್ಳರು ಭಯಾನಕ ವಿಚಾರವನ್ನು ಬಾಯಿಬಿಟ್ಟಿದ್ದಾರೆ.

ಕಳ್ಳರಿಗೆ ಯೂಟ್ಯೂಬರ್​ ಮಧುಮಿತಾ ವಿಳಾಸ ಸಿಕ್ಕಿದ್ದೇಗೆ?
ಕಳ್ಳರಿಗೆ ಯೂಟ್ಯೂಬರ್​ ಮಧುಮಿತಾ ವಿಳಾಸ ಸಿಕ್ಕಿದ್ದೇಗೆ?

ಕಳೆದ ಗುರುವಾರ ನಾಗರಕೋಯಿಲ್ ಬಳಿಯ ತಮ್ಮತುಕೋಣಂನಲ್ಲಿ ವಾಸಿಸುತ್ತಿರುವ ಯೂಟ್ಯೂಬರ್ ಮಧುಮಿತಾ (YouTuber Madhumitha) ಅವರ ಮನೆಯಲ್ಲಿ ದೊಡ್ಡ ಕಳ್ಳತನ (Theft Case) ನಡೆದಿತ್ತು. ಈ ಪ್ರಕರಣ ಇದೀಗ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೂತುಕುಡಿ ಮತ್ತು ತಿರುನಲ್ವೇಲಿ ಜಿಲ್ಲೆಗಳಿಂದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಕನ್ಯಾಕುಮಾರಿ ಎಸ್‌ಪಿ ಅಂಶುಲ್ ನಗರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಕಳ್ಳತನ ನಡೆದ ಸ್ಥಳದಿಂದ ತೂತುಕುಡಿ ಜಿಲ್ಲೆಯ ಶ್ರೀವೈಕುಂಡಂವರೆಗೆ ಇರುವ ಸುಮಾರು 160 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿ ಶಂಕಿತರನ್ನು ಪತ್ತೆಹಚ್ಚಲಾಗಿದೆ. ಈ ವೇಳೆ ಆರೋಪಿಗಳು ಕೆಲವು ಅಚ್ಚರಿ ವಿಚಾರಗಳನ್ನು ಬಾಯಿಬಿಟ್ಟಿದ್ದಾರೆ.

ಯೂಟ್ಯೂಬರ್​​ ಮನೆಯಲ್ಲಿ ಕಳ್ಳತನ, ನಾಲ್ವರು ಬಂಧನ

ಈ ಕಳ್ಳತನ ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಶ್ರೀವೈಕುಂಡಂನ ಸಿ. ಎಸಕಿಪಾಂಡಿ (30), ಮುಕ್ಕುಡಲ್‌ನ ಇ. ಮುರುಗನ್ (28), ಆಲಂಗುಲಂನ ಎಂ. ಮುರುಗೇಶನ್ (30) ಮತ್ತು ತಿಮ್ಮರಾಜಪುರಂನ ಪಿ. ತಂಗಪಾಂಡಿ (39) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ ಪ್ರಮುಖ ಆರೋಪಿ ಎಸಕಿಪಾಂಡಿ ಒಬ್ಬನೇ ಮನೆಯೊಳಗೆ ನುಗ್ಗಿದ್ದಾನೆ. ಉಳಿದ ಮೂವರು ಬೆಲೆಬಾಳುವ ವಸ್ತುಗಳನ್ನು ವರ್ಗಾಯಿಸಲು ಮತ್ತು ಮಾರಾಟ ಮಾಡಲು ಸಹಾಯ ಮಾಡಿದ್ದರು ಎಂದು ತಿಳಿದುಬಂದಿದೆ.

ಸದ್ಯ ಕಳ್ಳರು ಸುಮಾರು 118 ಪೌಂಡ್ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದರು ಎನ್ನಲಾಗಿದ್ದು, ಇದೀಗ ಅವರಿಂದ 98 ಪೌಂಡ್ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತಷ್ಟು ಚಿನ್ನ ಎಲ್ಲಿದೆ ಎಂಬುದನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ಮಗುವಿನ ಐಡಿ ಕಾರ್ಡ್ ವಿಳಾಸ ಪತ್ತೆ ಮಾಡಿದ್ರಾ ಆರೋಪಿಗಳು?

ಎಸ್‌ಪಿ ಅಂಶುಲ್ ನಗರ್ ಅವರು ಹೇಳುವಂತೆ, ಇವರು ಮೊದಲ ಬಾರಿಗೆ ಕಳ್ಳತನ ಮಾಡಿದವರು ಎನ್ನಲಾಗಿದೆ. ಆರು ತಿಂಗಳ ಕಾಲ ಯೂಟ್ಯೂಬರ್ ಮಧುಮಿತಾ ಅವರ ರೀಲ್‌ಗಳನ್ನು ವೀಕ್ಷಿಸುತ್ತಿದ್ದರು. ಈ ರೀಲ್‌ಗಳಲ್ಲಿ ಕಾಣಿಸಿದ ಮಗುವಿನ ಶಾಲಾ ಬ್ಯಾಗ್‌ನಲ್ಲಿ ಮುದ್ರಿತವಾಗಿದ್ದ ಪ್ರದೇಶದ ಹೆಸರು ಮತ್ತು ಅದರಲ್ಲಿ ಕಂಡು ಬಂದ ಮಗುವಿನ ಐಡಿ ಕಾರ್ಡ್​​ ನೋಡಿ, ಮನೆಯನ್ನು ಗುರುತಿಸಿದ್ದಾರೆ ಎಂದು ತಿಳಿದುಬಂದಿದೆ. ನಂತರ ಸೆಪ್ಟೆಂಬರ್ ಆರಂಭದಿಂದಲೂ ಎಸಕಿಪಾಂಡಿ ದ್ವಿಚಕ್ರ ವಾಹನದಲ್ಲಿ ಮನೆಯನ್ನು ವೀಕ್ಷಿಸುತ್ತಿದ್ದರು. ದಂಪತಿಗಳು ಕಾರಿನಲ್ಲಿ ಹೊರಗೆ ಹೋಗಿದ್ದಾರಾ ಎಂದು ಗಮನಿಸುತ್ತಿದ್ದರು ಎಂದು ಆರೋಪಿಗಳು ಬಾಯಿಬಿಟ್ಟಿದ್ದಾರೆ.

ಇದನ್ನೂ ಓದಿ: Food Crisis in India: ಜಗತ್ತಿನಾದ್ಯಂತ ಮತ್ತೊಂದು ಬಿಕ್ಕಟ್ಟು, ದುಬಾರಿ ತೈಲ ಬೆಲೆ ಆರಂಭವಷ್ಟೇ! ಜೈಶಂಕರ್ ಎಚ್ಚರಿಕೆ

ಮಧುಮಿತಾ ಮತ್ತು ಅವರ ಪತಿ ವಿನೋದ್ ಕುಮಾರ್ ಇತ್ತೀಚೆಗೆ ತಮ್ಮತುಕೋಣಂನಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದರು. ಗುರುವಾರ ಸಂಜೆ ದಂಪತಿ ತಿರುನಲ್ವೇಲಿಗೆ ಹೋಗಿದ್ದರು. ಆ ಸಮಯದಲ್ಲಿ ಎಸಕಿಪಾಂಡಿ ಕಟ್ಟರ್ ಬಳಸಿ ಮನೆಯ ಹಿಂದಿನ ಬಾಗಿಲನ್ನು ಮುರಿದು ಒಳಗೆ ನುಗ್ಗಿ ಮೊದಲ ಮಹಡಿಯಿಂದ ಚಿನ್ನಾಭರಣಗಳನ್ನು ಕದ್ದಿದ್ದಾನೆ. ಪೊಲೀಸರು ಕನ್ಯಾಕುಮಾರಿ ಡಿವೈಎಸ್‌ಪಿ ಆರ್. ಪ್ರಕಾಶ್ ಮತ್ತು ರಾಜಕ್ಕಮಂಗಲಂ ಇನ್‌ಸ್ಪೆಕ್ಟರ್ ಜಯಲಕ್ಷ್ಮಿ ನೇತೃತ್ವದಲ್ಲಿ ಏಳು ವಿಶೇಷ ತಂಡಗಳನ್ನು ರಚಿಸಿದ್ದರು. ಸಿಸಿಟಿವಿ ದೃಶ್ಯಗಳಲ್ಲಿ ಪ್ರಮುಖ ಶಂಕಿತನ ದ್ವಿಚಕ್ರ ವಾಹನವನ್ನು ಗುರುತಿಸಲಾಯಿತು. ಸೋಮವಾರ ರಾತ್ರಿ ಎರುಂಪುಕಾಡುನಲ್ಲಿ ಎಸಕಿಪಾಂಡಿ ಮತ್ತು ಮುರುಗನ್ ಅವರನ್ನು ಬಂಧಿಸಲಾಯಿತು. ಉಳಿದ ಇಬ್ಬರಿಂದ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣವನ್ನು ರಾಜಕ್ಕಮಂಗಲಂ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಯೂಟ್ಯೂಬ್‌ನಲ್ಲಿ ಸಂಪತ್ತನ್ನು ಪ್ರದರ್ಶಿಸುವ ವೀಡಿಯೊಗಳು ಕಳ್ಳರಿಗೆ ಗುರಿ ಒದಗಿಸಿರುವುದು ಈ ಪ್ರಕರಣದಿಂದ ಸ್ಪಷ್ಟವಾಗಿದೆ. ಪೊಲೀಸರ ವೇಗದ ಕ್ರಮದಿಂದ ಹೆಚ್ಚಿನ ಚಿನ್ನ ವಶಕ್ಕೆ ಬಂದಿದ್ದು, ದಂಪತಿಗಳಿಗೆ ಸ್ವಲ್ಪ ನೆಮ್ಮದಿ ದೊರೆತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed