RR vs LSG: ರಾಜಸ್ಥಾನಕ್ಕೆ ಗೆಲುವು ತಂದುಕೊಟ್ಟ ಸೂರ್ಯವಂಶಿ ಸ್ಫೋಟಕ ಆಟ! LSG ಮಣಿಸಿ ಪ್ಲೇಆಫ್ ಸನಿಹ ಬಂದ ರಾಯಲ್ಸ್ | ಕ್ರೀಡಾ ಸುದ್ದಿ | ACTPnews

ರಾಜಸ್ಥಾನ್ ರಾಯಲ್ಸ್


Last Updated:

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಎಲ್​​ಎಸ್​​ಜಿ ತಂಡ 20 ಓವರ್ಗಳಲ್ಲಿ 5 ವಿಕೆಟ್​ ಕಳೆದುಕೊಂಡ 220 ರನ್ ಗಳಿಸಿತ್ತು. ಈ ಬೃಹತ್ ರನ್​ಗಳ ಗುರಿಯನ್ನು ಬೆನ್ನಟ್ಟಿದ ಆರ್​​ಆರ್​ 19.1 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ರಾಜಸ್ಥಾನ್ ರಾಯಲ್ಸ್
ರಾಜಸ್ಥಾನ್ ರಾಯಲ್ಸ್

ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ IPL 2026ರಲ್ಲಿ 64ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಲಖನೌ ಸೂಪರ್ ಜೈಂಟ್ಸ್  (RR vs LSG) ವಿರುದ್ಧ 7 ವಿಕೆಟ್​ಗಳ ಭರ್​​​​ಜರಿ ಜಯ ಸಾಧಿಸಿ ಪ್ಲೇಆಫ್ (Playoff) ಕನಸನ್ನ ಜೀವಂತವಾಗಿರಿಸಿಕೊಂಡಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಎಲ್​​ಎಸ್​​ಜಿ ತಂಡ 20 ಓವರ್ಗಳಲ್ಲಿ 5 ವಿಕೆಟ್​ ಕಳೆದುಕೊಂಡ 220 ರನ್ ಗಳಿಸಿತ್ತು. ಈ ಬೃಹತ್ ರನ್​ಗಳ ಗುರಿಯನ್ನು ಬೆನ್ನಟ್ಟಿದ ಆರ್​​ಆರ್​ 19.1 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.  ವೈಭವ್ ಸೂರ್ಯವಂಶಿ ಕೇವಲ 38 ಎಸೆತಗಳಲ್ಲಿ 7 ಬೌಂಡರಿ, 10 ಸಿಕ್ಸರ್​ಗಳ ಸಹಿತ 93 ರನ್​ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಧ್ರುವ್ ಜುರೆಲ್ ಅಜೇಯ ಅರ್ಧಶತಕ ಸಿಡಿಸಿ ತಂಡವನ್ನ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ಪ್ಲೇಆಫ್ ರೇಸ್​ನಲ್ಲಿ ಇನ್ನೂ ಉಳಿದುಕೊಂಡಿದೆ.

ಭರ್ಜರಿ ಆರಂಭ ನೀಡಿದ ಜೈಸ್ವಾಲ್-ವೈಭವ್

221 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ಭರ್ಜರಿ ಆರಂಭ ಪಡೆದುಕೊಂಡಿತು. ನಾಯಕ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಮೊದಲ ವಿಕೆಟ್​​ ಜೊತೆಯಾಟದಲ್ಲಿ 6.3 ಓವರ್​ಗಳಲ್ಲಿ 75 ರನ್ ಸೇರಿಸಿದರು. ಜೈಸ್ವಾಲ್ 23 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್​​ ಸಹಿತ 43 ರನ್​​​ಗಳಿಸಿ ಆಕಾಶ್ ಸಿಂಗ್ ಬೌಲಿಂಗ್​​​ನಲ್ಲಿ ರಿಷಭ್ ಪಂತ್​ಗೆ ಕ್ಯಾಚ್ ನೀಡಿ ಔಟ್ ಆದರು.

ಮ್ಯಾಚ್ ಟರ್ನಿಂಗ್ ಪಾಯಿಂಟ್ ಮಾಡಿದ ಸೂರ್ಯವಂಶಿ

ನಂತರ ಬಂದ ಧ್ರುವ್ ಜುರೆಲ್ 2ನೇ ವಿಕೆಟ್​ ಜೊತೆಯಾಟದಲ್ಲಿ ಸೂರ್ಯವಂಶಿ ಜೊತೆಗೂಡಿ ಕೇವಲ 45 ಎಸೆತಗಳಲ್ಲಿ 105 ರನ್​​ ಸೇರಿಸಿದರು.  ಎಂದಿನಂತೆ ತಮ್ಮ ವಿಧ್ವಂಸಕ ಆಟವಾಡಿದ ವೈಭವ್ ಸೂರ್ಯವಂಶಿ 38 ಎಸೆತಗಳಲ್ಲಿ 7 ಬೌಂಡರಿ ಹಾಗೂ 10 ಭರ್ಜರಿ ಸಿಕ್ಸರ್​ಗಳ ಸಹಿತ 93 ರನ್​ಗಳಿಸಿ ಶತಕಕ್ಕೆ 7 ರನ್​ಗಳಿರುವಾಗ ಔಟ್ ಆದರು. ಮೊಹ್ಶಿನ್ ಖಾನ್ ಬೌಲಿಂಗ್​​​ನಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಅಬ್ಧುಲ್ ಸಮದ್​​ಗೆ ಕ್ಯಾಚ್ ನೀಡಿ  ನಿರ್ಗಮಿಸಿದರು. ಆದರೆ ವೈಭವ್ ಅಷ್ಟರಲ್ಲಾಗಲೇ ಪಂದ್ಯವನ್ನ ಸಂಪೂರ್ಣವಾಗಿ ರಾಜಸ್ಥಾನ್ ರಾಯಲ್ಸ್​ ಕಡೆಗೆ ವಾಲಿಸಿದ್ದರು.

ಫಿನಿಶ್ ಮಾಡಿದ ಜುರೆಲ್-ಫೆರೇರಾ

ಸೂರ್ಯವಂಶಿ ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ರಾಯಲ್ಸ್ 6 ಓವರ್​ಗಳಲ್ಲಿ ಕೇವಲ 30 ರನ್​ಗಳ ಅವಶ್ಯಕತೆ ಇತ್ತು. 4ನೇ ಕ್ರಮಾಂಕದಲ್ಲಿ ಬಂದ ಲುವಾನ್ ಡಿ ಪ್ರಿಟೋರಿಯಸ್​ 7 ರನ್​ಗಳಿಸಿ ರನ್​ಔಟ್ ಆದರು. ಆದರೆ ಧ್ರುವ್ ಜುರೆಲ್ ಹಾಗೂ ಡೊನೊವನ್ ಫೆರೇರಾ ಮುರಿಯದ​ 4ನೇ ವಿಕೆಟ್ ಜೊತೆಯಾಟದಲ್ಲಿ 29 ರನ್​ಗಳಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು.  ಧ್ರುವ್ ಜುರೆಲ್ 38 ಎಸೆತಗಳಲ್ಲಿ ತಲಾ 3 ಬೌಂಡರಿ, 3 ಸಿಕ್ಸರ್​ಗಳ ಸಹಿತ ಅಜೇಯ 53 ರನ್​ಗಳಿಸಿದರೆ, ಫೆರೇರಾ 10 ಎಸೆತಗಳಲ್ಲಿ ತಲಾ 1 ಬೌಂಡರಿ, ಸಿಕ್ಸರ್​ ಸಹಿತ ಅಜೇಯ 16 ರನ್​ಗಳಿಸಿದರು.

ಲಖನೌ ಸೂಪರ್ ಜೈಂಟ್ಸ್ ಪರ ಅಕಾಶ್ ಸಿಂಗ್ 54ಕ್ಕೆ1, ಮೊಹ್ಶಿನ್ ಖಾನ್ 31ಕ್ಕೆ1 ವಿಕೆಟ್ ಪಡೆದರು. ವೈಭವ್ ಅಬ್ಬರದಕ್ಕೆ ಸಿಲುಕಿದ ಲಖನೌ ಬೌಲರ್​ಗಳು ದುಬಾರಿಯಾದರು.

 ಪ್ಲೇ ಆಫ್​ ರೇಸ್​​ನಲ್ಲಿ ಮತ್ತಷ್ಟು ಸನಿಹ ಬಂದ ರಾಜಸ್ಥಾನ್ ರಾಯಲ್ಸ್

ಈ ರೋಚಕ ಗೆಲುವಿನೊಂದಿಗೆ ರಾಜಸ್ಥಾನ್​ ರಾಯಲ್ಸ್ ಟೂರ್ನಿಯಲ್ಲಿ 7ನೇ ಗೆಲುವು ಸಾಧಿಸಿತು. 13 ಪಂದ್ಯಗಳನ್ನಾಡಿರುವ ರಾಯಲ್ಸ್ 6 ರಲ್ಲಿ ಸೋಲು ಕಂಡು, 14 ಅಂಕಗಳಿಸಿದೆ. ತನ್ನ ಕೊನೆಯ ಪಂದ್ಯವನ್ನ ಭಾನಿವಾರ  ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದ್ದು, ಆ ಪಂದ್ಯವನ್ನ ಗೆದ್ದರೆ ರಾಜಸ್ಥಾನ್ ರಾಯಲ್ಸ್ ನೇರವಾಗಿ, ಯಾವುದೇ ತಂಡದ ಫಲಿತಾಂಶ ಲೆಕ್ಕಿಸದೇ ಪ್ಲೇ ಆಫ್​ ಪ್ರವೇಶಿಸಲಿದೆ.

ಲಖನೌ ಸೂಪರ್ ಜೈಂಟ್ಸ್ ಇನ್ನಿಂಗ್ಸ್

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ತಂಡ ಭರ್ಜರಿ ಬ್ಯಾಟಿಂಗ್ ಮಾಡಿ 220 ರನ್​ಗಳಿಸಿತ್ತು. ಮಿಚೆಲ್ ಮಾರ್ಷ್ ಮತ್ತೊಮ್ಮೆ ಅಬ್ಬರ ಬ್ಯಾಟಿಂಗ್ ಮಾಡಿದರು. 57 ಎಸೆತಗಳಲ್ಲಿ 11 ಬೌಂಡರಿ,  5ಸಿಕ್ಸರ್ಗಳ ಸಹಿತ 96 ರನ್​ಗಳಿಸಿ ಬೃಹತ್ ಮೊತ್ತಕ್ಕೆ ನೆರವಾಗಿದ್ದರು. ಜೋಸ್ ಇಂಗ್ಲಿಸ್ 29 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್​ಗಳ ಸಹಿತ 60,  ರಿಷಭ್ ಪಂತ್ 23 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್​ಗಳ ಸಹಿತ 35 ರನ್​ಗಳಿಸಿದ್ದರು.

ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಆರ್ಚರ್ 39ಕ್ಕೆ1, ಯಶ್ ಪೂಂಜಾ 35ಕ್ಕೆ2 ವಿಕೆಟ್ ಪಡೆದಿದ್ದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports