Kerala Lottery Result: ₹30 ಕೋಟಿ ಬಂಪರ್ ಬಹುಮಾನ ಪಡೆದವರು ಯಾರು? ಕೇರಳಂ ಲಾಟರಿ ಫಲಿತಾಂಶ ಪ್ರಕಟ | ಟ್ರೆಂಡಿಂಗ್ ಸುದ್ದಿ | ACTPnews

ಕೇರಳ ಲಾಟರಿ (ಸಾಂಕೇತಿಕ ಚಿತ್ರ)


Last Updated:

Kerala Lottery Result: ತೀವ್ರ ಕುತೂಹಲ ಮೂಡಿಸಿದ್ದ ಕೇರಳಂನ ತಿರವೋಣಂ ಬಂಪರ್ ಲಾಟರಿ 2026ರ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಅತೀ ಹೆಚ್ಚು ಅಂದರೆ 30 ಕೋಟಿ ರೂಪಾಯಿ ಪ್ರಥಮ ಬಹುಮಾನ ಘೋಷಿಸಲಾಗಿತ್ತು. ಇದೀಗ ಎಲ್ಲಾ ಕುತೂಹಲಕ್ಕೂ ತೆರೆ ಬಿದ್ದಿದ್ದು, 30 ಕೋಟಿ ರೂಪಾಯಿ ಪ್ರಥಮ ಬಹುಮಾನ ಯಾರ ಪಾಲಾಗಿದೆ ಎಂಬ ಮಾಹಿತಿ ಇಲ್ಲಿದೆ…

ಕೇರಳ ಲಾಟರಿ (ಸಾಂಕೇತಿಕ ಚಿತ್ರ)
ಕೇರಳ ಲಾಟರಿ (ಸಾಂಕೇತಿಕ ಚಿತ್ರ)

ತಿರುವನಂತಪುರಂ, ಕೇರಳಂ: ತೀವ್ರ ಕುತೂಹಲ ಮೂಡಿಸಿದ್ದ ಕೇರಳಂನ ತಿರವೋಣಂ ಬಂಪರ್ ಲಾಟರಿ (Thiruvonam Bumper Lottery) 2026ರ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಅತೀ ಹೆಚ್ಚು ಅಂದರೆ 30 ಕೋಟಿ ರೂಪಾಯಿ ಪ್ರಥಮ ಬಹುಮಾನ ಘೋಷಿಸಲಾಗಿತ್ತು. ಈ ಮೂಲಕ ಕೇರಳಂ ಲಾಟರಿ (Kerala Lottery) ಭಾರೀ ಸುದ್ದಿ ಮಾಡಿತ್ತು. 500 ರೂಪಾಯಿ ಮುಖಬೆಲೆಯ 90 ಲಕ್ಷ ಟಿಕೆಟ್‌ ಮಾರಾಟವಾಗಿ ಈ ಬಾರಿ ದಾಖಲೆ ಬರೆದಿತ್ತು. ಇನ್ನು ಲಾಟರಿ ಟಿಕೆಟ್ ಮಾರಾಟದಿಂದಲೇ ಕೇರಳಂ ಸರ್ಕಾರ ಬರೋಬ್ಬರಿ 450 ಕೋಟಿ ರೂಪಾಯಿ ಗಳಿಸಿತ್ತು ಎನ್ನಲಾಗಿದೆ. ಇದೀಗ ಎಲ್ಲಾ ಕುತೂಹಲಕ್ಕೂ ತೆರೆ ಬಿದ್ದಿದ್ದು, 30 ಕೋಟಿ ರೂಪಾಯಿ ಪ್ರಥಮ ಬಹುಮಾನ ಯಾರ ಪಾಲಾಗಿದೆ ಎಂಬ ಮಾಹಿತಿ ಇಲ್ಲಿದೆ…

ಕೇರಳ ತಿರುವೋಣಂ ಬಂಪರ್ ಲಾಟರಿ ಫಲಿತಾಂಶ ಪ್ರಕಟ

ಕೇರಳಂ ಸರ್ಕಾರದ 2026ರ ತಿರುವೋಣಂ ಬಂಪರ್ ಲಾಟರಿಯ 30 ಕೋಟಿ ರೂ. ಪ್ರಥಮ ಬಹುಮಾನ ವಿಜೇತರ ಘೋಷಣೆಯಾಗಿದೆ. ಶನಿವಾರ ತಿರುವನಂತಪುರದ ಗೋರ್ಕಿ ಭವನದಲ್ಲಿ ನಡೆದ ತಿರುವೋಣಂ ಬಂಪರ್ ಲಾಟರಿ ಡ್ರಾದಲ್ಲಿ ವಿಜೇತ ಸಂಖ್ಯೆಯನ್ನು ಪ್ರಕಟಿಸಲಾಯಿತು.

ಒಟ್ಟೂ 125.54 ಕೋಟಿ ಮೊತ್ತದ ಬಹುಮಾನ

ತಿರುವನಂತಪುರದ ಗೋರ್ಕಿ ಭವನದಲ್ಲಿ ಡ್ರಾ ನಡೆಯಿತು. 5,34,470 ಜನರು 30 ಕೋಟಿ ರೂ.ಗಳಿಂದ 500 ರೂ.ಗಳವರೆಗಿನ ಬಹುಮಾನಗಳನ್ನು ಪಡೆಯಲಿದ್ದಾರೆ. ಒಟ್ಟು ಬಹುಮಾನದ ಮೊತ್ತ 125.54 ಕೋಟಿ ರೂಪಾಯಿಗಳಾಗಿವೆ. ಈ ಬಾರಿ ಪಾಲಕ್ಕಾಡ್ ಜಿಲ್ಲೆಯಲ್ಲಿ ಅತಿ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿತ್ತು.

ಸರ್ಕಾರಕ್ಕೆ ಲಾಟರಿ ಮಾರಾಟದಿಂದ 450 ಕೋಟಿ ರೂಪಾಯಿ!

ಕಳೆದ ವರ್ಷದ 75 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದ ದಾಖಲೆಯನ್ನು ಲಾಟರಿ ಇಲಾಖೆ ಈ ಬಾರಿ ಮುರಿದಿದೆ. 500 ರೂಪಾಯಿ ಮುಖಬೆಲೆಯ 90 ಲಕ್ಷ ಟಿಕೆಟ್‌ ಮಾರಾಟವಾಗಿ ಈ ಬಾರಿ ದಾಖಲೆ ಬರೆದಿತ್ತು. ಇನ್ನು ಲಾಟರಿ ಟಿಕೆಟ್ ಮಾರಾಟದಿಂದಲೇ ಕೇರಳಂ ಸರ್ಕಾರ ಬರೋಬ್ಬರಿ 450 ಕೋಟಿ ರೂಪಾಯಿ ಗಳಿಸಿತ್ತು ಎನ್ನಲಾಗಿದೆ.

20 ಮಂದಿಗೆ ತಲಾ 1 ಕೋಟಿ ರೂಪಾಯಿ

ತಿರುವೋಣಂ ಬಂಪರ್‌ನಲ್ಲಿ ಒಬ್ಬರಿಗೆ 30 ಕೋಟಿ ಬಂಪರ್ ಬಹುಮಾನ ಸಿಗಲಿದೆ. ಎರಡನೇ ಬಹುಮಾನ 1 ಕೋಟಿ ರೂಪಾಯಿ, ಇದನ್ನು 20 ಜನರಿಗೆ ನೀಡಲಾಗುವುದು. ಮೂರನೇ ಬಹುಮಾನ 25 ಲಕ್ಷ ರೂಪಾಯಿ, ಇದನ್ನು 20 ಜನರಿಗೆ ನೀಡಲಾಗುವುದು. ನಾಲ್ಕನೇ ಬಹುಮಾನ 5 ಲಕ್ಷ ರೂಪಾಯಿ, ಇದನ್ನು 10 ಜನರಿಗೆ ನೀಡಲಾಗುವುದು. ಐದನೇ ಬಹುಮಾನ 2 ಲಕ್ಷ ರೂಪಾಯಿ, ಇದನ್ನು 10 ಜನರಿಗೆ ನೀಡಲಾಗುವುದು. 5,000, 2,000, 1,000 ಮತ್ತು 500 ರೂಪಾಯಿಗಳ ಬಹುಮಾನಗಳೂ ಇವೆ.

30 ಕೋಟಿ ರೂಪಾಯಿ ಬಂಪರ್ ಬಹುಮಾನ ಯಾರಿಗೆ?

ಅಂದಹಾಗೆ ಮೂಲಗಳ ಪ್ರಕಾರ ಕಣ್ಣೂರು ಜಿಲ್ಲೆಯ ಚಕ್ಕರಕ್ಕಲ್‌ನಲ್ಲಿರುವ ಲಾಟರಿ ಏಜೆನ್ಸಿ ಮೂಲಕ ಮಾರಾಟವಾದ TL 360615 ಎಂಬ ಸಂಖ್ಯೆಯ ಟಿಕೆಟ್‌ಗೆ 30 ಕೋಟಿ ರೂಪಾಯಿ ಬಂಪರ್ ಬಹುಮಾನ ಲಭಿಸಿದೆ.

ಬಂಪರ್ ಬಹುಮಾನ ಪಡೆದವರು ಯಾರು?

ಮೂಲಗಳ ಪ್ರಕಾರ 30 ಕೋಟಿ ರೂಪಾಯಿ ಬಂಪರ್ ಬಹುಮಾನ ಪಡೆದವರು ಯಾರು ಎಂಬ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ. ಪ್ರಥಮ ಬಹುಮಾನ ಪಡೆದ ಟಿಕೆಟ್‌ದಾರರು ಕೇರಳಂ ಲಾಟರಿ ಇಲಾಖೆಯ ನಿಯಮಾನುಸಾರ ಮೂಲ ಟಿಕೆಟ್ ಹಾಗೂ ಅಗತ್ಯ ಗುರುತಿನ ದಾಖಲೆಗಳೊಂದಿಗೆ ಬಹುಮಾನ ಮೊತ್ತವನ್ನು ಕ್ಲೇಮ್ ಮಾಡಬೇಕಾಗುತ್ತದೆ. ಬಹುಮಾನ ಮೊತ್ತಕ್ಕೆ ಅನ್ವಯವಾಗುವ ತೆರಿಗೆ ಹಾಗೂ ಇತರ ಕಡಿತಗಳ ಬಳಿಕ ವಿಜೇತರಿಗೆ ಹಣ ಪಾವತಿಯಾಗಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed