Kavitha Gowda: ಪತ್ರಕರ್ತೆ ಪಾತ್ರದಲ್ಲಿ ಕವಿತಾ ಗೌಡ; ಈ ಸೀರಿಯಲ್ ಯಾವುದು ಗೊತ್ತಾ? | | ACTPnews

ಪತ್ರಕರ್ತೆ ಪಾತ್ರದಲ್ಲಿ ಕವಿತಾ ಗೌಡ; ಸೀರಿಯಲ್ ಯಾವುದು ಗೊತ್ತಾ?(ಚಿತ್ರ ಕೃಪೆ: ಕವಿತಾ ಗೌಡ ಇನ್​ಸ್ಟಾಗ್ರಾಮ್)


Last Updated:

ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನಟಿ ಕವಿತಾ ಗೌಡ ದಿಟ್ಟ ಪತ್ರಕರ್ತೆ ಪಾತ್ರ ಮಾಡಿದ್ದಾರೆ. ಅಪ್ಪನ ಚಾನೆಲ್ ನೋಡ್ತಾನೇ ಫ್ಯಾಮಿಲಿ ನೋಡಿಕೊಳ್ತಾ ಇರ್ತಾರೆ. ಇವರ ಜೀವನದಲ್ಲಿ ಎಲ್ಲವೂ ಇದೆ. ಆದರೆ, ಮಗಳನ್ನ ಅಪ್ಪನಿಂದ ದೂರ ಇಡುವ ಸ್ಥಿತಿ ಇದೆ. ಯಾಕೆ ಅನ್ನುವ ಕುತೂಹಲವನ್ನ ಇದೀಗ ಪ್ರೋಮೋ ಹುಟ್ಟುಹಾಕಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಪತ್ರಕರ್ತೆ ಪಾತ್ರದಲ್ಲಿ ಕವಿತಾ ಗೌಡ; ಸೀರಿಯಲ್ ಯಾವುದು ಗೊತ್ತಾ?(ಚಿತ್ರ ಕೃಪೆ: ಕವಿತಾ ಗೌಡ ಇನ್​ಸ್ಟಾಗ್ರಾಮ್)
ಪತ್ರಕರ್ತೆ ಪಾತ್ರದಲ್ಲಿ ಕವಿತಾ ಗೌಡ; ಸೀರಿಯಲ್ ಯಾವುದು ಗೊತ್ತಾ?(ಚಿತ್ರ ಕೃಪೆ: ಕವಿತಾ ಗೌಡ ಇನ್​ಸ್ಟಾಗ್ರಾಮ್)

ಲಕ್ಷ್ಮಿಬಾರಮ್ಮ ಸೀರಿಯಲ್ ಖ್ಯಾತಿಯ ನಟಿ ಕವಿತಾ ಗೌಡ (Kavitha Gowda) ಮತ್ತೆ ಬಂದಿದ್ದಾರೆ. ಇವರ ಹೊಸ ಸೀರಿಯಲ್ ಯಾವುದು ಅನ್ನೋದು ಗೊತ್ತಿದೆ. ಈ ಸೀರಿಯಲ್ (Serial) ಪಾತ್ರ ಹೇಗೆ ಇರುತ್ತದೆ ಅನ್ನುವ ಕುತೂಹಲ ಇತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಜೀ ಕನ್ನಡ ಇದೀಗ ಕವಿತಾ ಗೌಡ ಅವರ ಪಾತ್ರದ ಇಂಟ್ರಡಕ್ಷನ್ ಪ್ರೋಮೋ (Promo) ಬಿಟ್ಟಿದೆ. ಕೌಶಿಕಿ (Kaushiki) ಅನ್ನುವ ಈ ರೋಲ್‌ನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಕವಿತಾ ಗೌಡ ‘ಕೌಶಿಕಿ’ ರೋಲ್

ಕವಿತಾ ಗೌಡ ಹೊಸ ಪಾತ್ರದ ಹೆಸರು ಕೌಶಿಕಿ ಅನ್ನೋದೇ ಆಗಿದೆ. ಆದರೆ, ಈ ಒಂದು ಹೆಸರು ತುಂಬಾನೆ ಪವರ್ ಫುಲ್ ಆಗಿದೆ. ಪಾರ್ವತಿ ದೇವಿ ಸೃಷ್ಟಿ ಮಾಡಿರೋ ಇನ್ನೊಂದು ದೇವಿಯ ಹೆಸರು ಇದಾಗಿದೆ.
kavitha gowda jagadhatri kannada serial character intro promo release

ಪತಿಯಿಂದ ದೂರ ಇರೋ…..

(ಚಿತ್ರ ಕೃಪೆ: ಜೀ​ ಕನ್ನಡ ಇನ್​ಸ್ಟಾಗ್ರಾಮ್)

ಶುಂಭ ಹಾಗೂ ನಿಶುಂಭ ಹೆಸರಿನ ರಾಕ್ಷಸರನ್ನ ಸಂಹರಿಸಲು ದೇವಿಯ ಸೃಷ್ಟಿ ಆಗುತ್ತದೆ. ಪಾರ್ವತಿ ದೇವಿ ತನ್ನ ಜೀವ ಕೋಶದಿಂದಲೇ ಈ ಕೌಶಿಕಿಯನ್ನ ಸೃಷ್ಟಿ ಮಾಡುತ್ತಾಳೆ.

ಈ ಕೌಶಿಕಿ ಶಕ್ತಿ ಶಾಲಿ ದೇವತೆ ಆಗಿದ್ದಾಳೆ. ಈ ಒಂದು ಹೆಸರಿನ ಪಾತ್ರವನ್ನೆ ಕವಿತಾ ಗೌಡ ಈ ಸೀರಿಯಲ್ ಅಲ್ಲಿ ಮಾಡುತ್ತಿದ್ದಾರೆ.

ದಿಟ್ಟ ಪತ್ರಕರ್ತೆಯ ಪಾತ್ರ

ಕವಿತಾ ಗೌಡ ಈ ಸೀರಿಯಲ್ ಅಲ್ಲಿ ದಿಟ್ಟ ಪತ್ರಕರ್ತೆಯ ಪಾತ್ರ ಮಾಡುತ್ತಿದ್ದಾರೆ. ಅಪ್ಪ ಕಟ್ಟಿದ ಜನ ಧ್ವನಿ ನ್ಯೂಸ್ ಚಾನೆಲ್ ಅನ್ನ ನೋಡಿಕೊಳ್ತಾ ಇರ್ತಾರೆ.

ಮಗಳು, ಚಾನೆಲ್ ಹಾಗೂ ಫ್ಯಾಮಿಲಿ ಇವು ಈ ಕೌಶಿಕಿಯ ಜೀವನದ ಮುಖ್ಯ ಭಾಗಗಳೇ ಆಗಿವೆ. ಇದನ್ನ ಹೇಳ್ತಾನೆ ಕೌಶಿಕಿ ಇಲ್ಲಿ ಮಗಳಿಗೆ ಎಲ್ಲವನ್ನು ಕೊಡಿಸಬಲ್ಲ ಶಕ್ತಿ ಇದೆ ಅಂತ ಹೇಳ್ತಾರೆ. ಆದರೆ, ಅಪ್ಪನನ್ನ ಬಿಟ್ಟು ಅಂತಲೇ ಹೇಳೋದು ಇದೆ.

kavitha gowda jagadhatri kannada serial character intro promo release

ದಿಟ್ಟ ಪತ್ರಕರ್ತೆಯ ಪಾತ್ರ

(ಚಿತ್ರ ಕೃಪೆ: ಜೀ​ ಕನ್ನಡ ಇನ್​ಸ್ಟಾಗ್ರಾಮ್)

ಪತಿಯಿಂದ ದೂರ ಇರೋ…

ಕೌಶಿಕಿ ಇಲ್ಲಿ ಪತಿಯಿಂದ ದೂರ ಇದ್ದಾರೆ. ಯಾಕೆ ಮತ್ತು ಏನ್ ಕತೆ ಅನ್ನೋದು ಸದ್ಯ ಹುಟ್ಟಿದ ಕುತೂಹಲವೇ ಆಗಿದೆ. ಕಾರಣ ಕೌಶಿಕಿ ಈ ಪ್ರೋಮದಲ್ಲಿ ಆ ಬಗ್ಗೆ ಹೆಚ್ಚಿಗೆ ಏನೂ ಹೇಳೋದಿಲ್ಲ.

ಅದು ಇಲ್ಲಿ ಬೇಕಾಗಿಲ್ಲ. ಅದು ಮತ್ತೊಂದು ಕಥೆ ಅನ್ನುವ ಅರ್ಥದಲ್ಲಿಯೇ ಮಾತು ಮುಗಿಸುತ್ತಾರೆ. ಅಂದ್ಹಾಗೆ ಕವಿತಾ ಗೌಡ ಅಭಿನಯದ ಸೀರಿಯಲ್ ಹೆಸರೇನು ಗೊತ್ತಾ? ಅದು ಮುಂದೆ ಇದೆ.

ಜಗದ್ಧಾತ್ರಿ ಸೀರಿಯಲ್

ಕವಿತಾ ಗೌಡ ಅಭಿನಯದ ಸೀರಿಯಲ್ ಹೆಸರು ಜಗದ್ಧಾತ್ರಿನೇ ಆಗಿದೆ. ಈ ಸೀರಿಯಲ್ ಅಲ್ಲಿ ಮೋಕ್ಷಿತಾ ಪೈ ಇದ್ದಾರೆ. ವಿಜಯ್ ಸೂರ್ಯ ಈ ಸೀರಿಯಲ್ ನಾಯಕರಾಗಿದ್ದಾರೆ.

ಇವರ ಸೀರಿಯಲ್ ಅಲ್ಲಿ ಕವಿತಾ ಗೌಡ ದಿಟ್ಟ ಪತ್ರಕರ್ತೆಯ ಪಾತ್ರ ಮಾಡಿದ್ದಾರೆ. ಈ ಪಾತ್ರದ ಮೂಲಕ ಕವಿತಾ ಗೌಡ ವೀಕ್ಷಕರಿಗೆ ಮತ್ತಷ್ಟು ಇಷ್ಟ ಆಗಲಿದ್ದಾರೆ ಅನಿಸುತ್ತದೆ. ಆ ರೀತಿನೇ ಈ ಪಾತ್ರ ಇದೆ.

ದಿಟ್ಟ ಪತ್ರಕರ್ತೆ ಹೇಗೆ ಇರ್ಬೇಕೋ ಹಾಗೆ ಇಲ್ಲಿ ಕಾಣಿಸಿಕೊಂಡಿದ್ದಾರೆ. ಅದ್ಹೇಗೆ ಮಾತ್ ಆಡ್ಬೇಕೋ ಹಾಗೇನೆ ಇಲ್ಲಿ ಮಾತ್ ಆಡಿದ್ದಾರೆ. ಇವರ ಪಾತ್ರ ಪರಿಚಯದ ಪ್ರೋಮೋ ಜೀ ಕನ್ನಡದ ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್ ಅಲ್ಲಿ ಶೇರ್ ಆಗಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed