IND vs AFG: ನಿತೀಶ್, ಅರ್ಷದೀಪ್​​ ದಾಳಿಗೆ ಬೆಚ್ಚಿದ ಅಫ್ಘಾನ್! 2ನೇ ಪಂದ್ಯದಲ್ಲೂ ಭಾರತಕ್ಕೆ ಸಾಧಾರಣ ಗುರಿ | ಕ್ರೀಡಾ ಸುದ್ದಿ | ACTPnews

ನಿತೀಶ್ ಕುಮಾರ್ ರೆಡ್ಡಿ (PTI Photo)


Last Updated:

ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2ನೇ ಟಿ20ಐ (T20I) ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಭಾರತಕ್ಕೆ ಗೆಲ್ಲಲು 160 ರನ್​ಗಳ ಗುರಿ (159/8) ನೀಡಿದೆ.

 ನಿತೀಶ್ ಕುಮಾರ್ ರೆಡ್ಡಿ (PTI Photo)
ನಿತೀಶ್ ಕುಮಾರ್ ರೆಡ್ಡಿ (PTI Photo)

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿತು. ಇನ್ನು ಸರಣಿ ಉಳಿಸಿಕೊಳ್ಳಲು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಇಂದೂ ಕೂಡ ಅಫ್ಘಾನಿಸ್ತಾನ ದೊಡ್ಡ ಮೊತ್ತ ಪೇರಿಸುವಲ್ಲಿ ವಿಫಲವಾಯಿತು. ನಾಯಕ ಇಬ್ರಾಹಿಂ ಜದ್ರಾನ್ (37), ಅನುಭವಿಗಳಾದ ರಶೀದ್ ಖಾನ್ (28), ಮೊಹಮ್ಮದ್ ನಬಿ (20), ರಸೂಲಿ (26) ಅವರ ಹೋರಾಟದ ಹೊರತಾಗಿಯೂ  20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 159 ರನ್​ಗಳಿಸಿದೆ. 

ಭಾರತದ ಪರ ಯುವ ಆಟಗಾರ ನಿತೀಶ್ ಕುಮಾರ್ ರೆಡ್ಡಿ ಕೇವಲ 24 ರನ್ ನೀಡಿ 3 ಪ್ರಮುಖ ವಿಕೆಟ್ ಕಬಳಿಸಿ ಮಿಂಚಿದರು. ವೇಗಿ ಅರ್ಷದೀಪ್ ಸಿಂಗ್ 2 ವಿಕೆಟ್ ಹಾಗೂ ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್ ಮತ್ತು ರವಿ ಬಿಷ್ಣೋಯ್ ತಲಾ 1 ವಿಕೆಟ್ ಪಡೆದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed