Last Updated:
ಬಿಗ್ ಬಾಸ್ ಮನೆಯಿಂದ ಆಚೆ ಬಂದಿರುವ ಬಿಗ್ ಬಾಸ್ ಸೀಸನ್ 13ರ ಸ್ಪರ್ಧಿ ಮಾತನಾಡಿದ್ದು, ತಮ್ಮ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದಾರೆ.
ಬಾಸ್ ಸೀಸನ್ -13 (Bigg Boss-13) ರಿಂದ ಓಂ ಪ್ರಕಾಶ್ ರಾವ್ (OM Prakash Rao) ಹೊರಗೆ ಬಂದಿದ್ದಾರೆ. ಅನಾರೋಗ್ಯ ಹಿನ್ನೆಲೆ ಓಂ ಪ್ರಕಾಶ್ ರಾವ್ ಅವರು ತಮ್ಮ ಬಿಗ್ ಬಾಸ್ ಜರ್ನಿಯನ್ನು ಅಂತ್ಯಗೊಳಿಸಿದ್ದಾರೆ. ಈ ಬಗ್ಗೆ ಲರ್ಸ್ ಕನ್ನಡ ಅಧಿಕೃತವಾಗಿ ಮಾಹಿತಿ ನೀಡಿದೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ ಕಲರ್ಸ್ ಕನ್ನಡ, ಓಂ ಪ್ರಕಾಶ್ ರಾವ್ DISCONTINUED ಅಂತ ಪೋಸ್ಟರ್ ರಿಲೀಸ್ ಮಾಡಿದೆ.
ಸದ್ಯ, ಫ್ಯಾಮಿಲಿ ಡಾಕ್ಟರ್ ಚೆಕ್ ಮಾಡಿ ರಿಪೋರ್ಟ್ಸ್ಗಳನ್ನು ನೋಡಿ 15 ದಿನಗಳ ಕಾಲ ರೆಸ್ಟ್ ಮಾಡಿ ಎಂದು ಹೇಳಿದ್ದಾರೆ. ಜನರಿಗಾಗಿ ನಾನು ಬಿಗ್ ಬಾಸ್ ಮನಗೆ ಹೋಗಿದ್ದೆ. ನಿಮ್ಮನ್ನ ರಂಜಿಸಬೇಕು ಅಂತಾ ಪ್ರಯತ್ನ ಪಟ್ಟಿದೆ. ಆದ್ರೆ, ಈ ಆರೋಗ್ಯ ಹದಗೆಟ್ಟ ಹಿನ್ನೆಲೆ ಹೊರಗಡೆ ಬಂದೆ. ದಯವಿಟ್ಟು ಕ್ಷಮಿಸಿ. ಬಿಗ್ ಬಾಸ್ ಮನೆಯಲ್ಲಿರುವ ಎಲ್ಲರನ್ನೂ ಮಿಸ್ ಮಾಡ್ಕೊಳ್ಳುತ್ತಿದ್ದೇನೆ. ಆದಷ್ಟು ಬೇಗ ಚೇತರಿಸಿಕೊಂಡು ಹೊರಗಡೆ ಬರ್ತಿನಿ, ಬೇಗ ಗುಣಮುಖನಾಗಿ ಕೆಲಸಗಳನ್ನು ಶುರುಮಾಡುತ್ತೇನೆ ಎಂದು ಓಂ ಪ್ರಕಾಶ್ ರಾವ್ ಅವರು ತಿಳಿಸಿದ್ರು.
(ವರದಿ: ಗೀತಾ, ನ್ಯೂಸ್18 ಕನ್ನಡ, ಬೆಂಗಳೂರು)














