Last Updated:
ವ್ಯಕ್ತಿಯೊಬ್ಬ ತನ್ನ ಪತ್ನಿ, ತನ್ನ ಪ್ರಿಯಕರನೊಂದಿಗೆ ಮದುವೆಯಾಗಲು ಸಹಾಯ ಮಾಡಿದ ಘಟನೆ ನಡೆದಿದೆ. ಆಕೆ ತನ್ನ ಮದುವೆ ಮನೆಯನ್ನು ತೊರೆದು ಪ್ರಿಯಕರನೊಂದಿಗೆ ಓಡಿ ಹೋಗಿದ್ದಳು. ಅಲ್ಲದೇ ಮತ್ತೆ ತನ್ನ ಬಳಿಗೆ ಮರಳಲು ನಿರಾಕರಿಸಿದ್ದು, ಪ್ರಿಯಕರನೊಂದಿಗೆ ಮದುವೆ ಮಾಡಿಸಿದ್ದಾನೆ.
ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು (Wife) ಆಕೆಯ ಪ್ರಿಯಕರನೊಂದಿಗೆ ಮದುವೆಯಾಗಲು (Marriage) ಸಹಾಯ ಮಾಡಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ (Uttar Pradesh) ಲಕ್ನೋದಲ್ಲಿ ಈ ಒಂದು ವಿಶಿಷ್ಟ ಘಟನೆ ನಡೆದಿದೆ. ಒಬ್ಬ ವ್ಯಕ್ತಿ ತನ್ನ ಪತ್ನಿ ತನ್ನ ಮಾಜಿ ಪ್ರಿಯಕರನನ್ನು ಮದುವೆಯಾಗಲು ಸಹಾಯ ಮಾಡಿದ್ದಾನೆ. ಯಾಕೆಂದರೆ, ಪತ್ನಿ ಗಂಡನ ಮನೆಯನ್ನು ತೊರೆದು ಮಾಜಿ ಪ್ರೇಮಿಯ ಬಳಿ ಹೋಗಿದ್ದಳು, ಗಂಡನ ಮನೆ ಬಿಟ್ಟು ಓಡಿ ಹೋಗಿದ್ದಳು. ಅಲ್ಲದೇ ವಾಪಾಸ್ ಬರಲು ನಿರಾಕರಿಸಿದ್ದಳು.














