Successful Story: ಬೆಂಗಳೂರಿನ ಟೆಕ್ಕಿ ಈಗ ಸಕ್ಸಸ್ ಫುಲ್ ರೈತ, ಕಾರ್ಪೊರೇಟ್ ಕೆಲಸಕ್ಕೆ ಗುಡ್‍ಬೈ ಹೇಳಿ ಗೆದ್ದಿದ್ದು ಹೇಗೆ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಆದಾಯದ ಕೃಷಿ (Photos: @manjannashettyfamilyfarms) Instagram


Last Updated:

ಚೇತನ್ ಶೆಟ್ಟಿ ಕಾರ್ಪೊರೇಟ್ ಕೆಲಸ ಬಿಟ್ಟು 11 ಎಕರೆ ತೋಟದಲ್ಲಿ ಅಡಕೆ, ರಂಬುಟಾನ್, ಮ್ಯಾಂಗೋಸ್ಟೀನ್ ಬೆಳೆದು, ವರ್ಷಕ್ಕೆ 25 ರಿಂದ 60 ಲಕ್ಷ ಆದಾಯ ಗಳಿಸಿ, ಜೆಪ್ಟೊ, ಫಾರ್ಮಿಜೆನ್ ಜೊತೆಗೂಡಿ ಯಶಸ್ವಿ ರೈತರಾದರು

ಆದಾಯದ ಕೃಷಿ (Photos: @manjannashettyfamilyfarms) Instagram
ಆದಾಯದ ಕೃಷಿ (Photos: @manjannashettyfamilyfarms) Instagram

ಬೆಂಗಳೂರಿನಲ್ಲಿ ಹಾಯಾಗಿ ದೊಡ್ಡ ಸಂಬಳದ ಉದ್ಯೋಗ (Job), ಐಷಾರಾಮಿ ಜೀವನ. ಇಂತಹ ಸುರಕ್ಷಿತ ಬದುಕನ್ನು ಬಿಟ್ಟು ಯಾರಾದರೂ ಕೃಷಿಯತ್ತ (Agriculture) ಮುಖ ಮಾಡುತ್ತಾರೆಯೇ? ಅಸಾಧ್ಯ ಎಂದು ನೀವು ಅಂದುಕೊಳ್ಳಬಹುದು. ಆದರೆ, ಚೇತನ್ ಶೆಟ್ಟಿ (Chetan Shetty) ಎಂಬುವವರು ಇಡೀ ಸಮಾಜದ ಲೆಕ್ಕಾಚಾರವನ್ನೇ ಬದಲಿಸಿದ್ದಾರೆ. ಎಂಟು ವರ್ಷಗಳ ಕಾಲ ಕಾರ್ಪೊರೇಟ್ (Corporate) ಜಗತ್ತಿನಲ್ಲಿ ಕೆಲಸ ಮಾಡಿದ್ದ ಅವರು, 2017ರಲ್ಲಿ ಅನಿರೀಕ್ಷಿತ ನಿರ್ಧಾರವೊಂದನ್ನು ತೆಗೆದುಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದರು.

ಸಂಬಂಧಿಕರ ಟೀಕೆ, ಸಾಂಪ್ರದಾಯಿಕ ಕೃಷಿಗೆ ಗುಡ್‍ಬೈ

ಸ್ನೇಹಿತರು ಮತ್ತು ಸಂಬಂಧಿಕರು ಸುರಕ್ಷಿತವಾದ ಕೆಲಸ ಬಿಟ್ಟು ಮಣ್ಣಿನ ಕೆಲಸಕ್ಕೆ ಯಾಕೆ ಹೋಗ್ತೀಯಾ? ಎಂದು ಟೀಕಿಸಿದರೂ, ಚೇತನ್ ತಮ್ಮ ಕುಟುಂಬದ 11 ಎಕರೆ ಪೂರ್ವಜರ ಕೃಷಿ ಭೂಮಿಯನ್ನು ನವೀಕರಿಸುವ ಸಾಹಸಕ್ಕೆ ಕೈಹಾಕಿದರು. ಕೃಷಿಯನ್ನು ಬದಲಾಯಿಸಲು ಸುಮಾರು 17-18 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿ, ಆಧುನಿಕ ತಂತ್ರಗಳನ್ನು ಅಳವಡಿಸಿಕೊಂಡರು ಎಂದು ನ್ಯೂಸ್ 18 ಇಂಗ್ಲಿಷ್ ವರದಿ ಮಾಡಿದೆ.

ವಾರ್ಷಿಕ 60 ಲಕ್ಷ ಆದಾಯದ ಸೀಕ್ರೆಟ್ ಏನು?

ಇಂದು ಚೇತನ್ ಅವರ ತೋಟ ಕೇವಲ ಸಾಂಪ್ರದಾಯಿಕ ಅಡಿಕೆ ಕೃಷಿಗೆ ಸೀಮಿತವಾಗಿಲ್ಲ. ಅಡಕೆ ಕೃಷಿಯಿಂದ 12 ಲಕ್ಷ ರೂಪಾಯಿ ಖಚಿತ ಆದಾಯ ಪಡೆಯುವ ಜೊತೆಗೆ, ರಂಬುಟಾನ್, ಮ್ಯಾಂಗೋಸ್ಟೀನ್, ಆವಕಾಡೊ, ಅರಿಶಿನ ಮತ್ತು ಜಾಯಿಕಾಯಿಯಂತಹ ವಿಲಕ್ಷಣ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇಲ್ಲಿನ ವಿಶೇಷತೆ ಏನೆಂದರೆ, ಮ್ಯಾಂಗೋಸ್ಟೀನ್ ಪ್ರತಿ ಕೆಜಿಗೆ ಬರೋಬ್ಬರಿ 750 ರೂ.ಗಳವರೆಗೆ ಮಾರಾಟವಾಗುತ್ತದೆ. ಇವರ ವಾರ್ಷಿಕ ಆದಾಯ ಇಂದು 25 ಲಕ್ಷದಿಂದ 60 ಲಕ್ಷ ರೂ.ಗಳವರೆಗೆ ತಲುಪಿದೆ, ಅಂದರೆ 15 ಲಕ್ಷ ರೂ.ಗಳಷ್ಟು ಲಾಭವನ್ನು ಇವರು ಗಳಿಸುತ್ತಿದ್ದಾರೆ.
ಸೋಲದ ಮನೋಭಾವವೇ ಗೆಲುವಿನ ದಾರಿ

ಕೃಷಿ ಎಂದ ಮೇಲೆ ಹವಾಮಾನ ವೈಪರೀತ್ಯಗಳೂ ತಪ್ಪಿದ್ದಲ್ಲ. 2022ರಲ್ಲಿ 5,500 ಕೆಜಿ ಇದ್ದ ರಂಬುಟಾನ್ ಉತ್ಪಾದನೆ, 2024ರಲ್ಲಿ ಕೇವಲ 400 ಕೆಜಿಗೆ ಕುಸಿದಾಗ ಚೇತನ್ ಕುಗ್ಗಿ ಹೋಗಲಿಲ್ಲ. ಬದಲಾಗಿ, ತಮ್ಮ ಕೃಷಿ ವಿಧಾನಗಳನ್ನು ಮರುಯೋಜಿಸಿದರು. ಇಂದು ಇವರ ಫಾರ್ಮ್‍ನಲ್ಲಿ 2,500 ಅಡಕೆ ಮರಗಳು, 650 ರಂಬುಟಾನ್ ಮರಗಳು ಸೇರಿ ಬೃಹತ್ ಕೃಷಿ ಉದ್ಯಮವೇ ನಿರ್ಮಾಣವಾಗಿದೆ.

(Source: News18)



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports