Last Updated:
ಕ್ರೇಜಿ ಸ್ಟಾರ್ ರವಿಚಂದ್ರನ್ ನಾಯಕಿ ಖುಷ್ಬು ಕನ್ನಡ ಸಿನಿಮಾ ಮಾಡಿದ್ದಾರೆ. ಈ ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ. ನಾಯಕಿ ಡೈಸಿ ಬೋಪಣ್ಣ ಕೂಡ ಈ ಸಿನಿಮಾದಲ್ಲಿದ್ದಾರೆ. ಎಂ.ಜಿ.ಶ್ರೀನಿವಾಸ್ ಅವರ ಈ ಚಿತ್ರದ ಇನ್ನಷ್ಟು ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ.
ಕ್ರೇಜಿ ಸ್ಟಾರ್ ರವಿಚಂದ್ರನ್ ನಾಯಕಿ ಖುಷ್ಬೂ (Khushbu) ಮತ್ತೆ ಕನ್ನಡಕ್ಕೆ ಬರ್ತಿದ್ದಾರೆ. ಒಂದು ಪವರ್ ಫುಲ್ ಪಾತ್ರದ ಮೂಲಕವೇ ಕಮ್‌ಬ್ಯಾಕ್ (Come Back) ಮಾಡ್ತಿದ್ದಾರೆ. ಕನ್ನಡದ ಮತ್ತೊಬ್ಬ ನಟಿ ಡೈಸಿ ಬೋಪಣ್ಣ (Daisy Bopanna) ಸಹ ಈ ಚಿತ್ರ ಮಾಡಿದ್ದಾರೆ. ಈ ಚಿತ್ರವನ್ನ ಘೋಸ್ಟ್ ಡೈರೆಕ್ಟರ್ ಎಂ.ಜಿ.ಶ್ರೀನಿವಾಸ್ (M.G.Srinivas) ಡೈರೆಕ್ಷನ್ ಮಾಡಿದ್ದಾರೆ. ಇವರೇ ಸಿನಿಮಾದ ನಾಯಕರೂ ಆಗಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣ ಸಹ ಇದ್ದಾರೆ. ಈ ಚಿತ್ರದ ಇನ್ನಷ್ಟು ಅಧಿಕೃತ ವಿವರ ಇಲ್ಲಿದೆ ಓದಿ.














