Last Updated:
ಏರ್ ಇಂಡಿಯಾ ವಿಮಾನ ಗಂಭೀರ ತಾಂತ್ರಿಕ ದೋಷಕ್ಕೆ ಒಳಗಾಗಿದೆ. ಥೈಲ್ಯಾಂಡ್ನ ಫುಕೆಟ್ನಿಂದ ದೆಹಲಿಗೆ ತೆರಳುತ್ತಿದ್ದ ಈ ವಿಮಾನ ತೊಂದರೆಗೀಡಾಗಿದ್ದು, 24 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಏರ್ ಇಂಡಿಯಾ (Air India) ವಿಮಾನ ಗಂಭೀರ ತಾಂತ್ರಿಕ ದೋಷಕ್ಕೆ ಒಳಗಾಗಿ ದೊಡ್ಡ ದುರಂತ ಸಂಭವಿಸಿದೆ. ಥೈಲ್ಯಾಂಡ್ನ (Thailand) ಫುಕೆಟ್ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ಏರ್ಬಸ್ A320 ವಿಮಾನದಲ್ಲಿ ಗಂಭೀರ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. 36,000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ವಿಮಾನದ ಮೂರು ಹೈಡ್ರಾಲಿಕ್ ವ್ಯವಸ್ಥೆಗಳು ಬಹುತೇಕ ಏಕಕಾಲದಲ್ಲಿ ವಿಫಲವಾಗಿದ್ದು, ಇದರಿಂದ ವಿಮಾನ ತೀವ್ರವಾಗಿ ಉರುಳಿಬಿದ್ದು ಪ್ರಯಾಣಿಕರಿಗೆ ಗಾಯಗಳಾಗಿದೆ.














