Last Updated:
ಮಹಾನಂದಾ ಎಕ್ಸ್ಪ್ರೆಸ್ ಹಳಿತಪ್ಪಿ ಅಪಘಾತ ಸಂಭವಿಸಿದೆ. ಅರಾ ನಿಲ್ದಾಣವನ್ನು ತಲುಪುವ ಮೊದಲೇ ರೈಲಿನ ಎಂಜಿನ್ ಮತ್ತು ಎರಡು ಬೋಗಿಗಳು ಹಳಿತಪ್ಪಿದ್ದು, ಪ್ರಯಾಣಿಕರಲ್ಲಿ ಭಾರೀ ಆತಂಕ ಉಂಟಾಗಿತ್ತು.
ಇಂದು ಬೆಳ್ಳಂಬೆಳಗ್ಗೆ ದೊಡ್ಡ ರೈಲು ಅಪಘಾತ (Train Accident) ಸಂಭವಿಸಿದೆ. ಬಿಹಾರದಲ್ಲಿ (Bihar) ಭಾನುವಾರ ಬೆಳಿಗ್ಗೆ ಈ ದೊಡ್ಡ ರೈಲು ಅಪಘಾತ ಸಂಭವಿಸಿದೆ. ಅಲಿಪುರ್ದೂರ್ನಿಂದ ದೆಹಲಿಗೆ ಹೋಗುತ್ತಿದ್ದ ಮಹಾನಂದ ಎಕ್ಸ್ಪ್ರೆಸ್ (ರೈಲು ಸಂಖ್ಯೆ 15484) ಅರಾ ರೈಲು ನಿಲ್ದಾಣದ ಬಳಿ ಹಳಿತಪ್ಪಿದೆ. ಈ ಘಟನೆಯಿಂದ ಪ್ರಯಾಣಿಕರಲ್ಲಿ ಭಯಭೀತ ವಾತಾವರಣ ನಿರ್ಮಾಣವಾಗಿತ್ತು. ದಿಡೀರ ರೈಲು ಹಳಿತಪ್ಪಿದಾಗ ದೊಡ್ಡ ಶಬ್ಶ ಬಂದಿದೆ.














