Last Updated:
ವೈಮಾನಿಕ ಪ್ರದರ್ಶನದ ಸಮಯದಲ್ಲಿ ಗ್ರೀಕ್ ಫೈಟರ್ ಜೆಟ್ ಪತನಗೊಂಡಿದೆ. ಇದರಲ್ಲಿ ಇಬ್ಬರು ಪೈಲಟ್ಗಳು ಸಾವನ್ನಪ್ಪಿದ್ದಾರೆ, ಆದರೆ ಸಾವಿರಾರು ಪ್ರೇಕ್ಷಕರಲ್ಲಿ ಯಾರೂ ಗಾಯಗೊಂಡಿಲ್ಲ. ಕಡಿಮೆ ಎತ್ತರದ ಸಾಹಸದ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ.
ಗ್ರೀಕ್ ರಾಜಧಾನಿ ಅಥೆನ್ಸ್ನ ಉತ್ತರದಲ್ಲಿರುವ ಟನಾಗ್ರಾ ವಾಯುನೆಲೆಯಲ್ಲಿ ಜೆಟ್ (Jet) ಪತನಗೊಂಡಿದೆ. ಅಲ್ಲಿ ನಡೆಯುತ್ತಿದ್ದ ‘ಅಥೆನ್ಸ್ ಫ್ಲೈಯಿಂಗ್ ವೀಕ್’ ವಾಯು ಪ್ರದರ್ಶನದ (Air Show) ಸಮಯದಲ್ಲಿ ಗ್ರೀಕ್ ವಾಯುಪಡೆಯ ಫ್ಯಾಂಟಮ್ ಎಫ್-4 ಫೈಟರ್ ಜೆಟ್ ಪತನಗೊಂಡಿದೆ. ಕಡಿಮೆ ಎತ್ತರದಲ್ಲಿ ಕುಶಲತೆಯನ್ನು ತೋರಿಸುವಾಗ ಈ ಅಪಘಾತ ಸಂಭವಿಸಿದೆ. ಈ ಅಪಘಾತದಿಂದಾಗಿ ವಿಮಾನದಲ್ಲಿದ್ದ ಇಬ್ಬರು ಪೈಲಟ್ಗಳು (Pilot‘s Death) ಸಾವನ್ನಪ್ಪಿದ್ದಾರೆ.














