Last Updated:
23 ಕೋಟಿಯ ಬಜೆಟ್ನ ಸಿನಿಮಾ ಒಂದು 230 ಕೋಟಿಗೂ ಹೆಚ್ಚು ಗಳಿಸಿ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ಈ ಸಿನಿಮಾ ಫೀಲ್ ಗುಡ್ ಮೂವಿಯಾಗಿ ಫ್ಯಾಮಿಲಿ ಆಡಿಯನ್ಸ್ನಿಂದ ಭರಪೂರ ಪ್ರೀತಿ ಗಳಿಸಿದೆ. ಒಟಿಟಿಗೆ ಯಾವಾಗ ಬರುತ್ತೆ?
ಬೆಳಗಿನ ಪ್ರದರ್ಶನಗಳಿಂದ ಹಿಡಿದು ತಡರಾತ್ರಿಯ ಪ್ರದರ್ಶನಗಳವರೆಗೆ, ನಿವಿನ್ ಪೌಲಿ ಮತ್ತು ಮಮಿತಾ ಬೈಜು (Mamitha Baiju) ಅವರ ಇತ್ತೀಚಿನ ಸಿನಿಮಾ ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಸೆಳೆಯುತ್ತಿದೆ. ವೀಕ್ ಡೇಸ್ಗಳಲ್ಲಿಯೂ ಸಹ ಹಲವಾರು ಶೋಗಳು ಹೌಸ್ ಫುಲ್ (Housefull) ಆಗಿ ಓಡುತ್ತಿವೆ ಎಂದು ವರದಿಯಾಗಿದೆ.














