Last Updated:
ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರು ತಮ್ಮ ದಿವಂಗತ ತಂದೆ ರಮೇಶ್ ತೆಂಡೂಲ್ಕರ್ ಅವರ ಸ್ಮರಣಾರ್ಥ ‘ಪ್ರೊಫೆಸರ್ ರಮೇಶ್ ತೆಂಡೂಲ್ಕರ್ ಸ್ಮಾರಕ ಫೆಲೋಶಿಪ್’ ಅನ್ನು ಘೋಷಿಸಿದ್ದಾರೆ.
ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಶಿಕ್ಷಕರ ದಿನಾಚರಣೆಯ (Teacher’s Day) ಸಂದರ್ಭದಲ್ಲಿ ಮಹತ್ವದ ಸೇವಾ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ. ಸಚಿನ್ ತಮ್ಮ ತಂದೆ ಪ್ರೊಫೆಸರ್ ರಮೇಶ್ ತೆಂಡೂಲ್ಕರ್ ಅವರ ಸ್ಮರಣಾರ್ಥ ಈ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಫೌಂಡೇಶನ್ (STF) ಯುವ ವೈದ್ಯರಿಗಾಗಿ ‘ಪ್ರೊಫೆಸರ್ ರಮೇಶ್ ತೆಂಡೂಲ್ಕರ್ ಸ್ಮಾರಕ ಫೆಲೋಶಿಪ್’ ಅನ್ನು ಘೋಷಿಸಿದೆ. ಈ ಮಹತ್ವದ ಉಪಕ್ರಮವು ಶ್ರೀನಗರದಲ್ಲಿ ಕ್ಲೆಫ್ಟ್ (Cleft-ಸೀಳು ತುಟಿ) ಮತ್ತು ಕ್ರೇನಿಯೊಫೇಶಿಯಲ್ (Craniofacial) ಕ್ಷೇತ್ರದಲ್ಲಿ ಪರಿಣತಿಯನ್ನು ಪಡೆಯಲು ಸಚಿನ್ ಯುವ ವೈದ್ಯರಿಗೆ ಆರ್ಥಿಕ ಸಹಾಯವನ್ನು ನೀಡಲಿದ್ದಾರೆ.














