Last Updated:
ಪಂಕಜ್ ತ್ರಿಪಾಠಿ, ಅಲಿ ಫಜಲ್ ಹಾಗೂ ರವಿ ಕಿಶನ್ ಸೇರಿದಂತೆ ಪರಿಚಿತ ತಾರೆಯರನ್ನು ಒಳಗೊಂಡಿರುವ ಮಿರ್ಜಾಪುರ್: ದಿ ಮೂವಿ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ
ಮಿರ್ಜಾಪುರ್ ವೆಬ್ ಸರಣಿ ಬಿಡುಗಡೆಯಾದ ಬಳಿಕ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡು, ಒಟಿಟಿಯಲ್ಲಿ ಭಾರೀ ಜನಪ್ರಿಯತೆ ಗಳಿಸಿತ್ತು. ಇದೀಗ ಇದೇ ಜನಪ್ರಿಯ ಫ್ರಾಂಚೈಸಿ ಮಿರ್ಜಾಪುರ್: ದಿ ಮೂವಿ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದೆ. ಪಂಕಜ್ ತ್ರಿಪಾಠಿ, ಅಲಿ ಫಜಲ್ ಹಾಗೂ ರವಿ ಕಿಶನ್ ಸೇರಿದಂತೆ ಪರಿಚಿತ ತಾರೆಯರನ್ನು ಒಳಗೊಂಡಿರುವ ಮಿರ್ಜಾಪುರ್: ದಿ ಮೂವಿ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ. ಅಪರಾಧ, ರಾಜಕೀಯ ಮತ್ತು ಗ್ಯಾಂಗ್‌ಸ್ಟರ್ ಜಗತ್ತನ್ನು ಆಧರಿಸಿದ ಈ ಫ್ರಾಂಚೈಸಿಗೆ ಇರುವ ಜನಪ್ರಿಯತೆ ಚಿತ್ರಮಂದಿರಗಳಲ್ಲೂ ಕಾಣಿಸಿಕೊಂಡಿದ್ದು, ಮೊದಲ ದಿನದ ಕಲೆಕ್ಷನ್ ಇದೀಗ ಸಿನಿ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.














