Last Updated:
CM Vijay: ತಮಿಳುನಾಡು ಸಿಎಂ ವಿಜಯ್ ಅವರಿಗೆ ಯುವತಿಯೊಬ್ಬಳು ಫ್ಲೈಯಿಂಗ್ ಕಿಸ್ ಕೊಟ್ಟಿದ್ದು, ದಳಪತಿ ಅದನ್ನು ಕ್ಯಾಚ್ ಹಿಡಿದು ಹೃದಯಕ್ಕೆ ಒತ್ತಿ ಹಿಡಿದಿದ್ದಾರೆ. ವಿಡಿಯೋ ವೈರಲ್ ಆಗಿದೆ.
ತಮಿಳುನಾಡು ಸಿಎಂ (Tamil Nadu CM) ವಿಜಯ್ (Vijay) ಅವರು ಕುಂತರೂ ನಿಂತರೂ ಸುದ್ದಿಯಾಗುತ್ತಲೇ ಇರುತ್ತಾರೆ. ಅವರ ಫೋಟೋಸ್ (Photos) ಹಾಗೂ ವಿಡಿಯೋಗಳಂತೂ ಬೇಗನೆ ವೈರಲ್ ಆಗುತ್ತವೆ. ಇತ್ತೀಚೆಗೆ ಅಜ್ಜಿಗೆ ಸನ್ ಗ್ಲಾಸ್ ಕೊಟ್ಟು ಸಿಕ್ಕಾಪಟ್ಟೆ ಸುದ್ದಿಯಾದರು. ಇಂಥಹ ಖ್ಯಾತಿಯ ನಟ, ಹಾಗೂ ತಮಿಳುನಾಡಿನ ಸಿಎಂ ಆಗಾಗ ತಮ್ಮ ಸರಳ ವ್ಯಕ್ತಿತ್ವಕ್ಕೆ ಹಾಗೂ ಮಗುವಿನಂತಹ ಒಡನಾಟಕ್ಕೆ ಸುದ್ದಿಯಾಗುತ್ತಿರುತ್ತಾರೆ.














