Last Updated:
ಪಂಜಾಬ್ ಟಿ20 ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು (ಸೆಪ್ಟೆಂಬರ್ 1) ರನ್ ಮಳೆಯೇ ಹರಿದಿದ್ದು, ಜಲಂಧರ್ ವಾರಿಯರ್ಸ್ ತಂಡವು ಅಮೃತಸರ ಸೂರ್ಮಾಸ್ ವಿರುದ್ಧ 8 ವಿಕೆಟ್‌ಗಳ ರೋಮಾಂಚಕ ಹಾಗೂ ಐತಿಹಾಸಿಕ ಜಯ ದಾಖಲಿಸಿದೆ.
ಶೇರ್-ಎ-ಪಂಜಾಬ್ ಟಿ20 ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು (ಸೆಪ್ಟೆಂಬರ್ 1) ರನ್ ಮಳೆಯೇ ಹರಿದಿದ್ದು, ಜಲಂಧರ್ ವಾರಿಯರ್ಸ್ ತಂಡವು ಅಮೃತಸರ ಸೂರ್ಮಾಸ್ ವಿರುದ್ಧ 8 ವಿಕೆಟ್‌ಗಳ ರೋಮಾಂಚಕ ಹಾಗೂ ಐತಿಹಾಸಿಕ ಜಯ ದಾಖಲಿಸಿದೆ. ಅಮೃತಸರ ತಂಡ ನೀಡಿದ್ದ 265 ರನ್‌ಗಳ ದೈತ್ಯ ಗುರಿಯನ್ನು ಜಲಂಧರ್ ತಂಡವು ಇನ್ನು 19 ಎಸೆತಗಳು ಬಾಕಿ ಇರುವಂತೆಯೇ ತಲುಪಿ ಕ್ರಿಕೆಟ್ ಪ್ರೇಮಿಗಳನ್ನು ಬೆರಗುಗೊಳಿಸಿದೆ. ಇತ್ತೀಚೆಗಷ್ಟೇ ಭಾರತ ತಂಡಕ್ಕೆ ಆಯ್ಕೆಯಾಗಿದ್ದ ಪ್ರಭಸಿಮ್ರನ್ ಸಿಂಗ್ ಕೇವಲ 47 ಎಸೆತಗಳಲ್ಲಿ ಅಜೇಯ 125 ರನ್ಗಳಿಸಿ ಈ ಐತಿಹಾಸಿಕ ರನ್ ಚೇಸ್ಗೆ ನೆರವಾದರು.














