Duleep Trophy 2026: ತಿಲಕ್ ವರ್ಮಾ ಭರ್ಕರಿ ಶತಕ, ಅಬ್ಬರಿಸಿದ ಕನ್ನಡಿಗ ಗೋಪಾಲ್! ದಕ್ಷಿಣ ವಲಯಕ್ಕೆ ಭಾರಿ ಮುನ್ನಡೆ | ಕ್ರೀಡಾ ಸುದ್ದಿ | ACTPnews

ತಿಲಕ್ ವರ್ಮಾ


Last Updated:

ಉತ್ತರ ವಲಯವನ್ನ ಕೇವಲ 195ಕ್ಕೆ ಆಲೌಟ್ ಮಾಡಿದ ನಂತರ ಬ್ಯಾಟಿಂಗ್​ಗೆ ಇಳಿದಿದ್ದ ದಕ್ಷಿಣ ವಲಯ ಕೂಡ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಕೇವಲ 80 ರನ್​ಗಳಾಗುವಷ್ಟರಲ್ಲಿ ತಂಡದ ಅಗ್ರಕ್ರಮಾಂಕದ ಬ್ಯಾಟರ್​ಗಳನ್ನ ಕಳೆದುಕೊಂಡಿತು. ಈ ಹಂತದಲ್ಲಿ ತಿಲಕ್ ಶತಕ ಸಿಡಿಸಿ ತಂಡ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆಯಲು ನೆರವಾದರು.

ತಿಲಕ್ ವರ್ಮಾ
ತಿಲಕ್ ವರ್ಮಾ

ದುಲೀಪ್ ಟ್ರೋಫಿ ಸೆಮಿಫೈನಲ್​​ನಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ದಕ್ಷಿಣ ವಲಯದ ನಾಯಕನಾಗಿರುವ ತಿಲಕ್ ವರ್ಮಾ ಉತ್ತರ ವಲಯದ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ನಾಯಕನ ಆಟವಾಡಿ ಗಮನ ಸೆಳೆದಿದ್ದಾರೆ. ಬೆಂಗಳೂರಿನ ಸೆಂಟರ್ ಆಫ್ ಎಕ್ಸ್​ಲೆನ್ಸ್​ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ದಕ್ಷಿಣ ವಲಯ 2ನೇ ದಿನದಾಟದ ಅಂತ್ಯಕ್ಕೆ 90 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಪ್ರಸ್ತುತ ತಿಲಕ್ ವರ್ಮಾ ಅಜೇಯ 106 ರನ್​ಗಳಿಸಿ (225 ಎಸೆತಗಳಲ್ಲಿ 7 ಬೌಂಡರಿಗಳು ಸೇರಿದಂತೆ ಔಟಾಗದೆ 106) ಮೈದಾನದಲ್ಲಿದ್ದಾರೆ. ದಕ್ಷಿಣ ವಲಯ ಪ್ರಸ್ತುತ 94 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 285 ರನ್​ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದೆ.



Source link

Leave a Reply

Your email address will not be published. Required fields are marked *