Last Updated:
ಸ್ಫೋಟಗೊಂಡ ಪಟಾಕಿ ಕಾರ್ಖಾನೆ ನಿಜಾಮುದ್ದೀನ್ ಅವರ ಪುತ್ರ ಆದಿಲ್ ಡಿಜೆ ಒಡೆತನದಲ್ಲಿದೆ ಎಂದು ಹೇಳಲಾಗಿದೆ. ಪಿಪ್ರಿ ಪೊಲೀಸ್ ಠಾಣೆ ಪ್ರದೇಶದ ಮನುರಿಯಲ್ಲಿ ಈ ಘಟನೆ ಸಂಭವಿಸಿದೆ. ಕೌಶಂಬಿ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಕೌಶಂಬಿ: ಪಟಾಕಿ ಕಾರ್ಖಾನೆಯಲ್ಲಿ ಭಯಾನಕ ಸ್ಫೋಟ ಸಂಭವಿಸಿದ್ದು, 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ 10 ಕ್ಕೂ ಹೆಚ್ಚು (Firecracker Factory Blast) ಮಂದಿಗೆ ತೀವ್ರ ಸುಟ್ಟಗಾಯಗಳಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.














