Last Updated:
ಬಿಗ್ ಬಾಸ್ ಸೀಸನ್-13 ಕ್ಕಾಗಿಯೇ ಸುದೀಪ್ ಪೈಲಟ್ ಕಾಸ್ಟೂಮ್ ಹಾಕಿದ್ದಾರೆ. ಇದನ್ನ ಹಾಕಿಕೊಂಡಾಗ ಇವರಿಗೆ ಭಾರೀ ಖುಷಿ ಆಗಿದೆ. ಇದನ್ನ ಇವರು ತುಂಬಾನೆ ಎಂಜಾಯ್ ಮಾಡಿದ್ದಾರೆ. ಪ್ರೆಸ್ ಮೀಟ್ ಅಲ್ಲಿ ಸುದೀಪ್ ಇನ್ನು ಸಾಕಷ್ಟು ವಿಷಯ ಮಾತನಾಡಿದ್ದಾರೆ. ಅದರ ಡಿಟೈಲ್ಸ್ ಇಲ್ಲಿದೆ ಓದಿ.
ಬಿಗ್ ಬಾಸ್ ಸೀಸನ್-13 (Bigg Boss Season-13) ವಿಶೇಷವಾಗಿಯೆ ಇರುತ್ತದೆ. ಕಳೆದ 12 ನೇ ಸೀಸನ್‌ಗಳಲ್ಲಿ ಒಂದು ಲೆಕ್ಕ ಇತ್ತು. ಆದರೆ, ಈ ಸಲದ ಶೋ ಬೇರೆ ಇರುತ್ತದೆ. ಇಲ್ಲಿವರೆಗಿನ ಸೀನ್‌ಗಳಲ್ಲಿ ಔಟ್ ಆಫ್ ದಿ ಬಾಕ್ಸ್ ಅನ್ನೆ ಮಾಡಿಕೊಂಡು ಬಂದಿದ್ದೇವೆ. ಅಗ್ನಿಪರೀಕ್ಷೆ (Agnipareekshe) ಕೂಡ ಒಂದು ರೀತಿಯ ಔಟ್ ಆಫ್ ಬಾಕ್ಸ್ ಆಗಿದೆ. ಸಾಮಾನ್ಯ ಜನರನ್ನ ಮನೆ ಒಳಗೆ ಬಿಟ್ಟಿರೋದು ಕೂಡ ಹೊಸ ವಿಷಯವೇ ಆಗಿದೆ. ಈ ಸಲದ ಪ್ರೋಮೊದಲ್ಲಿ (Promo) ನಾನು ಪೈಲಟ್ ಆಗಿದ್ದೇನೆ. ಇದು ತುಂಬಾನೆ ಖುಷಿಕೊಟ್ಟಿದೆ. ಪೈಲಟ್ ಕಾಸ್ಟೂಮ್ (Pilot Costume) ಹಾಕಿಕೊಂಡು ತುಂಬಾನೆ ಎಂಜಾಯ್ ಮಾಡಿದ್ದೇನೆ ಅಂತಲೇ ಸುದೀಪ್ ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.














