Last Updated:
ಇಂದು ಬೆಳ್ಳಂಬೆಳಗ್ಗೆ ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕಂಪ ಸಂಭವಿಸಿದೆ. ಬೆಳಿಗ್ಗೆ 5:46 ಕ್ಕೆ 4.0 ತೀವ್ರತೆಯ ಭೂಕಂಪ ಸಂಭವಿಸಿದೆ. ಶಿಮ್ಲಾದಿಂದ 66 ಕಿ.ಮೀ ದೂರದಲ್ಲಿರುವ ಜುಬ್ಬಲ್-ಕೋಟ್ಖೈನಲ್ಲಿ ಭೂಕಂಪದ ಕೇಂದ್ರಬಿಂದು ಇತ್ತು.
ಇಂದು ಬುಧವಾರ ಬೆಳಿಗ್ಗೆ ಹಿಮಾಚಲ ಪ್ರದೇಶದಲ್ಲಿ (Himachal Pradesh) ಪ್ರಬಲ ಭೂಕಂಪ (Earthquake) ಸಂಭವಿಸಿದೆ. ಬೆಳಿಗ್ಗೆ 5:46 ಕ್ಕೆ ರಾಜ್ಯದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿದೆ. ಭೂಕಂಪದ ಕೇಂದ್ರವು ಭೂಕಂಪವನ್ನು ದೃಢಪಡಿಸಿದೆ. ಕೇಂದ್ರಬಿಂದುವು ಶಿಮ್ಲಾದಿಂದ ಪೂರ್ವ-ಆಗ್ನೇಯಕ್ಕೆ ಸುಮಾರು 66 ಕಿಲೋಮೀಟರ್ ದೂರದಲ್ಲಿ, ನೆಲದಿಂದ 10 ಕಿಲೋಮೀಟರ್ ಕೆಳಗೆ ಇತ್ತು. ಜುಬ್ಬಲ್-ಕೋಟ್ಖೈ ದಿಕ್ಕಿನಲ್ಲಿ ವರದಿಯಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.














