Last Updated:
ಬಾಲಿವುಡ್ನ ಹೈವಾನ್ ಚಿತ್ರದ ಟ್ರೈಲರ್ ಭಯಂಕರವಾಗಿದೆ. ಈ ಟ್ರೈಲರ್ ಅನ್ನ ನೋಡಿದಾಕ್ಷಣ ಥ್ರಿಲ್ ಆಗುತ್ತದೆ. ಅಕ್ಷಯ್ ಕುಮಾರ್ ಅಭಿನಯವು ಬೆಚ್ಚಿ ಬೀಳಿಸುತ್ತದೆ. ಆ ರೀತಿಯ ಈ ಚಿತ್ರದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಬಾಲಿವುಡ್ ಹೈವಾನ್ ಟ್ರೈಲರ್ (Haiwaan Trailer) ಭಯ ಹುಟ್ಟಿಸುತ್ತದೆ. ಅಕ್ಷಯ್ ಕುಮಾರ್ ಅವತಾರ್ ನಿಜಕ್ಕೂ ರಾಕ್ಷಸೀಯವಾಗಿದೆ. ಸೈಫ್ ಅಲಿ ಖಾನ್ (Saif Ali Khan) ಇಲ್ಲಿ ಅಮಾಯಕ ಅನಿಸುತ್ತಾರೆ. ಆದರೆ, ಸೈಫ್ ಅಲಿ ಖಾನ್ ಹಾಗೂ ಅಕ್ಷಯ್ ಗುದ್ದಾಟವೇ ಇಲ್ಲಿ ರೋಚಕವಾಗಿದೆ. ಅಕ್ಷಯ್ ಕುಮಾರ್ (Akshay Kumar) ಈ ಹಿಂದೆ ಈ ರೀತಿಯ ರೋಲ್ ಮಾಡಿರಲಿಲ್ಲ. ಆದರೆ, ಡೈರೆಕ್ಟರ್ ಪ್ರಿಯದರ್ಶನ್ (Priyadarshan) ಇಲ್ಲಿ ಅಕ್ಷಯ್ಗೆ ಅದ್ಭುತ ರೋಲ್ ಬರೆದಿದ್ದಾರೆ. ಸೈಫ್ ಅಲಿ ಖಾನ್ ಇಲ್ಲಿ ಅಂಧ ಅನ್ನೋದೇ ಹಿನ್ನೆಡೆ ಅನಿಸುತ್ತದೆ. ಆದರೆ, ಕತೆಯ ಓಟ ಇಲ್ಲಿ ಬೇರೆ ರೀತಿ ಇದೆ ಅನ್ನುವ ಭಾವನೆ ಮೂಡುತ್ತದೆ. ಇದರ ಝಲಕ್ ಈಗ ಬಿಟ್ಟಿರೋ ಟ್ರೈಲರ್ ಅಲ್ಲಿ ಸಿಗುತ್ತದೆ. ಈ ಸಿನಿಮಾದ ಟೈಟಲ್ನಂತೇನೆ ಇಡೀ ಚಿತ್ರ ಇದೆ ಅಂತ ಈ ಟ್ರೈರಲ್ ಹೇಳುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.














