Last Updated:
ಜೈಲಿನಲ್ಲಿರುವ ಇಮ್ರಾನ್ ಖಾನ್ ಗಂಭೀರವಾದ ಆರೋಗ್ಯ ಎದುರಿಸುತ್ತಿದ್ದಾರೆ. ಈ ಹಿನ್ನೆಲೆ ಮಾಜಿ ಕ್ರಿಕೆಟಿಗರು ಪತ್ರ ಬರೆದಿದ್ದಾರೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು 1992ರ ವಿಶ್ವಕಪ್ ವಿಜೇತ ಇಮ್ರಾನ್ ಖಾನ್ (Imran Khan) ಅವರ ಆರೋಗ್ಯದ ಕುರಿತು ವಿಶ್ವ ಕ್ರಿಕೆಟ್ ದಿಗ್ಗಜರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಜೈಲಿನಲ್ಲಿರುವ ಅವರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಹಾಗೂ ಸೂಕ್ತ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಕೋರಿ ಭಾರತೀಯ ದಿಗ್ಗಜರಾದ ಸುನಿಲ್ ಗಾವಸ್ಕರ್ (Sunil Gavaskar), ಕಪಿಲ್ ದೇವ್ (Kapil Dev), ದಿಲೀಪ್ ವೆಂಗ್ಸರ್ಕಾರ್ ಸೇರಿದಂತೆ 9 ದೇಶಗಳ 21 ಮಾಜಿ ಕ್ಯಾಪ್ಟನ್ಗಳು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಪತ್ರ ಬರೆದಿದ್ದಾರೆ.














