Last Updated:
Kunal Chandagude: 19 ವರ್ಷದ ಯುವಕ ಕುನಾಲ್ ಚಂದಗುಡೆ, ತಂದೆ ಮುರಳೀಧರ್ ಚಂದಗುಡೆ ಹಾಗೂ ತಾಯಿ ಸಂಗೀತಾ ಚಂದಗುಡೆ ಮೂವರು ಆತ್ಮಹತ್ಯೆಗೆ ಶರಣಾಗಿದ್ದರು. ಇತ್ತ ಮನೆ ಮಾಲೀಕರ ದಾರಿ ಕಾಯುತ್ತಿದ್ದ ನಾಯಿ (Dog) ‘ಶೇರು’ (Sheru) ಅನ್ನ ನೀರು ಬಿಟ್ಟು ಚಿಂತಿಸತೊಡಗಿತ್ತು.
ಮಹಾರಾಷ್ಟ್ರ: 19 ವರ್ಷದ ಯುವಕ ಕುನಾಲ್ ಚಂದಗುಡೆ (Kunal Chandgude) ಸಾವಿನ ಬಗ್ಗೆ ದೇಶಾದ್ಯಂತ ಭಾರೀ ಚರ್ಚೆ ನಡೆಯುತ್ತಿದೆ. ಛತ್ರಪತಿ ಸಂಭಾಜಿನಗರದ (Chhatrapati Sambhajinagar) ಖಾವದ್ಯ ಡೊಂಗರ್ (Khavadya Dongar) ಬೆಟ್ಟದಲ್ಲಿ 19 ವರ್ಷದ ಕುನಾಲ್ ಚಂದಗುಡೆ ಎಂಬ ಯುವಕ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನನ್ನು ಮನವೊಲಿಸೋದಕ್ಕೆ ತೆರಳಿದ್ದ ತಂದೆ ಮುರಳೀಧರ್ ಚಂದಗುಡೆ (Muralidhar Chandgude) ಕೂಡ ಬೆಟ್ಟದಿಂದ ಬಿದ್ದಿದ್ದರು. ಇದನ್ನೆಲ್ಲ ನೋಡುತ್ತಿದ್ದ ಅವನ ತಾಯಿ ಸಂಗೀತಾ ಚಂದಗುಡೆ (Sangeeta Chandgude) ಕೂಡ ಬೆಟ್ಟದಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದರು. ಇತ್ತ ಮನೆ ಮಾಲೀಕರ ದಾರಿ ಕಾಯುತ್ತಿದ್ದ ನಾಯಿ (Dog) ‘ಶೇರು’ (Sheru) ಅನ್ನ ನೀರು ಬಿಟ್ಟು ಚಿಂತಿಸತೊಡಗಿತ್ತು. ಇದೀಗ ನಾಯಿಯನ್ನು ಸುರಕ್ಷಿತವಾಗಿ ಹಿಡಿದು, ಬೇರೆಡೆಗೆ ಶಿಫ್ಟ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.














