Last Updated:
ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿವಾಹ 2007ರಲ್ಲಿ ನಡೆದಾಗ ರಾಣಿ ಮುಖರ್ಜಿ ಅವರಿಗೆ ಆಹ್ವಾನ ಇರಲಿಲ್ಲ ಎಂಬ ವಿಚಾರವೂ ಸುದ್ದಿಯಾಗಿತ್ತು. ಈ ಬಗ್ಗೆ ರಾಣಿ ನಂತರ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದರು.
ಐಶ್ವರ್ಯಾ ರೈ (Aishwarya Rai) ಹಾಗೂ ರಾಣಿ ಮುಖರ್ಜಿ (Rani Mukerji) ಒಮ್ಮೆ ಬಾಲಿವುಡ್ನ ಆತ್ಮೀಯ ಸ್ನೇಹಿತೆಯರಾಗಿದ್ದರು. ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ಪರಸ್ಪರರ ಬಗ್ಗೆ ಗೌರವದಿಂದ ಮಾತನಾಡುತ್ತಿದ್ದ ಈ ಇಬ್ಬರು ನಟಿಯರ ಸ್ನೇಹ ನಂತರ ಏಕಾಏಕಿ ಸುದ್ದಿಯಾಯಿತು. ಚಲ್ತೆ ಚಲ್ತೆ ಸಿನಿಮಾದಿಂದ ಆರಂಭವಾದ ಬೆಳವಣಿಗೆಗಳು ಇವರ ನಡುವಿನ ಅಂತರಕ್ಕೆ ಕಾರಣವಾದವು ಎನ್ನಲಾಗುತ್ತದೆ. ಬಳಿಕ ಅಭಿಷೇಕ್ ಬಚ್ಚನ್ (Abhishek Bachchan) ಹಾಗೂ ಐಶ್ವರ್ಯಾ ರೈ ಮದುವೆಗೆ ರಾಣಿ ಮುಖರ್ಜಿ ಅವರಿಗೆ ಆಹ್ವಾನ ನೀಡದಿರುವುದು ಈ ವಿಚಾರವನ್ನು ಮತ್ತಷ್ಟು ಚರ್ಚೆಗೆ ತಂದಿತು.














