Last Updated:
ಟಾಕ್ಸಿಕ್ ಚಿತ್ರ ಟಿಕೆಟ್ ಸೇಲ್ ಅಲ್ಲೂ ದಾಖಲೆ ಮಾಡಿದೆ. ಪ್ರತಿ ಗಂಟೆಗೆ ಸುಮಾರು 20 ಸಾವಿರದಂತೆ ಟಿಕೆಟ್ ಸೇಲ್ ಆಗಿವೆ. ಈ ಟಿಕೆಟ್ ಸೇಲ್ ಲೆಕ್ಕವನ್ನ ಸಿನಿಮಾ ತಂಡವೇ ಅಧಿಕೃತವಾಗಿ ಕೊಟ್ಟಿದೆ. ಅದರ ವಿವರ ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರದ (Toxic Movie) ಮುಂಗಡ ಟಿಕೆಟ್ ಬುಕಿಂಗ್ ಅಲ್ಲೂ ಧಮಾಕಾ ಆಗಿದೆ. ಪ್ರತಿ ಗಂಟೆಗೆ ಸುಮಾರು 20 ಸಾವಿರದಂತೆ ಅಡ್ವಾನ್ಸ್ ಟಿಕೆಟ್ ಬುಕ್ ಆಗಿವೆ. ಕೆಜಿಎಫ್ ಆದ್ಮೇಲೆ ಈ ಒಂದು ಚಿತ್ರದ ಮೂಲಕ ಯಶ್ (Yash) ಬರ್ತಿದ್ದಾರೆ. ನಾಲ್ಕು ವರ್ಷದ ಬಳಿಕ ಬರ್ತಿರೋ ರಾಕಿಯನ್ನ ನೋಡೋಕೆ ಕಾಯುತ್ತಿದ್ದಾರೆ. ಆ ಕಾಯುವಿಕೆ ಅದೆಷ್ಟು ಇದೆ ಅನ್ನೋದು ಟಿಕೆಟ್ ಬುಕಿಂಗ್ ಮೂಲಕವೇ ತಿಳಿಯುತ್ತದೆ. ಅಷ್ಟೊಂದು ಜನ ಈ ಚಿತ್ರ ನೋಡಿಕೆ ಕಾಯುತ್ತಿದ್ದಾರೆ. ರಾಕಿ ಭಾಯ್ (Rocky Bhai) ಅನ್ನ ರಾಯನ ರೂಪದಲ್ಲಿ ವೆಲ್ ಕಮ್ ಮಾಡಲು ಕಾಯುತ್ತಿದ್ದಾರೆ. ಈ ರಾಯನ (Raya) ಟಿಕೆಟ್ ಸೇಲ್ ಕತೆಯನ್ನ ಸಿನಿಮಾ ತಂಡವೇ ಅಧಿಕೃತವಾಗಿಯೇ ಹೇಳಿದೆ. ಇದರ ವಿವರ ಇಲ್ಲಿದೆ ಓದಿ.














