Last Updated:
ಬಾಲಿವುಡ್ ನಟ ಅರ್ಜುನ್ ರಾಂಪಾಲ್ (Arjun Rampal) ಹಾಗೂ ದಕ್ಷಿಣ ಆಫ್ರಿಕಾದ ಮಾಡೆಲ್ ಗೇಬ್ರಿಯೆಲಾ ಡೆಮೆಟ್ರಿಯೇಡ್ಸ್ (Gabriella Demetriades) ತಮ್ಮ ಹಲವು ವರ್ಷಗಳ ಸಂಬಂಧಕ್ಕೆ ಇದೀಗ ಅಧಿಕೃತ ಮದುವೆಯ ಮುದ್ರೆ ಹಾಕಿದ್ದಾರೆ.
ಬಾಲಿವುಡ್ ನಟ ಅರ್ಜುನ್ ರಾಂಪಾಲ್ (Arjun Rampal) ಹಾಗೂ ದಕ್ಷಿಣ ಆಫ್ರಿಕಾದ ಮಾಡೆಲ್ ಗೇಬ್ರಿಯೆಲಾ ಡೆಮೆಟ್ರಿಯೇಡ್ಸ್ (Gabriella Demetriades) ತಮ್ಮ ಹಲವು ವರ್ಷಗಳ ಸಂಬಂಧಕ್ಕೆ ಇದೀಗ ಅಧಿಕೃತ ಮದುವೆಯ ಮುದ್ರೆ ಹಾಕಿದ್ದಾರೆ. ಸುಮಾರು ಆರು ವರ್ಷಗಳ ಕಾಲ ಲಿವ್-ಇನ್ ಸಂಬಂಧದಲ್ಲಿದ್ದ ಈ ಜೋಡಿ ಈಗ ಕಾನೂನುಬದ್ಧವಾಗಿ ದಂಪತಿಯಾಗಿದ್ದಾರೆ. ವಿಶೇಷವೆಂದರೆ, ಯಾವುದೇ ಅದ್ಧೂರಿ ಸಮಾರಂಭವಿಲ್ಲದೆ ಗೋವಾದಲ್ಲಿ ಸರಳವಾಗಿ ನ್ಯಾಯಾಲಯದ ವಿವಾಹವಾಗಿರುವುದು ಅಭಿಮಾನಿಗಳ ಗಮನ ಸೆಳೆದಿದೆ.














