Last Updated:
ಟೀಮ್ ಇಂಡಿಯಾ ಆತಿಥೇಯ ಶ್ರೀಲಂಕಾಗೆ ಗೆಲ್ಲಲು ದಾಖಲೆಯ 372 ರನ್ಗಳ ಬೃಹತ್ ಗುರಿಯನ್ನು ನಿಗದಿಪಡಿಸಿದೆ. ಇದು ಈ ಮೈದಾನದಲ್ಲಿ ನಿಗಧಿಪಡಿಸಿದ 3ನೇ ಗರಿಷ್ಠ ಟಾರ್ಗೆಟ್ ಆಗಿದೆ.
ಗಾಲೆ ಕ್ರೀಡಾಂಗಣದಲ್ಲಿ (Galle International Stadium) ನಡೆಯುತ್ತಿರುವ ಶ್ರೀಲಂಕಾ (India vs Sri Lanka) ವಿರುದ್ಧದ 2 ಪಂದ್ಯಗಳ ಸರಣಿಯ ಎರಡನೇ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಭಾರತ ತಂಡ ಕೇವಲ 193 ರನ್ಗಳಿಗೆ ಆಲೌಟ್ ಆಗಿದೆ. ಆದರೂ ಟೀಮ್ ಇಂಡಿಯಾ ಆತಿಥೇಯ ಶ್ರೀಲಂಕಾಗೆ ಗೆಲ್ಲಲು ದಾಖಲೆಯ 372 ರನ್ಗಳ ಬೃಹತ್ ಗುರಿಯನ್ನು ನಿಗದಿಪಡಿಸಿದೆ. ಇದು ಈ ಮೈದಾನದಲ್ಲಿ ನಿಗದಿಪಡಿಸಿದ 3ನೇ ಗರಿಷ್ಠ ಟಾರ್ಗೆಟ್ ಆಗಿದೆ. ಮೊದಲ ಇನ್ನಿಂಗ್ಸ್ನಲ್ಲಿ ಪಡೆದಿದ್ದ 178 ರನ್ಗಳ ದೊಡ್ಡ ಮುನ್ನಡೆಯ ಬಲದಿಂದಾಗಿ ಟೀಮ್ ಇಂಡಿಯಾ ಪಂದ್ಯದ ಮೇಲಿನ ಹಿಡಿತವನ್ನು ಬಿಗಿಗೊಳಿಸಿದೆ. ಈ ಸುದ್ದಿಯಲ್ಲಿ ಗಾಲೆ ಮೈದಾನದಲ್ಲಿ ಗರಿಷ್ಠ ರನ್ ಚೇಸ್ ಮಾಡಿ ಗೆದ್ದ ತಂಡಗಳ ದಾಖಲೆಯನ್ನ ಪರಿಶೀಲಿಸೋಣ.














