Last Updated:
ಸೂಪರ್ ಜೈಂಟ್ಸ್ ಫ್ರಾಂಚೈಸ್ ಐಪಿಎಲ್ ಸೇರಿ ವಿಶ್ವದ ಹಲವು ಟಿ20 ಲೀಗ್‌ಗಳಲ್ಲಿ ತಂಡವನ್ನ ಹೊಂದಿದೆ. ಆದರೆ ಇದುವರೆಗೂ ಒಂದೂ ಬಾರಿಯೂ ಪ್ರಶಸ್ತಿ ಗೆದ್ದಿರಲಿಲ್ಲ. ಇದೀಗ ಹಂಡ್ರೆಡ್ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ತನ್ನ ಪ್ರಶಸ್ತಿ ಬರವನ್ನ ನೀಗಿಸಿಕೊಂಡಿದೆ.
ಐಪಿಎಲ್ಗೆ ಎಂಟ್ರಿಕೊಟ್ಟು 5 ವರ್ಷಗಳಾದರೂ ಸಂಜೀವ್ ಗೋಯಂಕಾ (Sanjeev Goenka) ಮಾಲೀಕತ್ವದ ತಂಡ ಒಂದೂ ಟ್ರೋಫಿಯನ್ನ ಗೆದ್ದಿಲ್ಲ. ಆದರೆ ಅವರ ಸಹ ಮಾಲೀಕತ್ವದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ (Manchester Super Giants) ತಂಡ ಮೊದಲ ಆವೃತ್ತಿಯಲ್ಲೇ ದಿ ಹಂಡ್ರೆಡ್ ಪುರುಷರ ಟೂರ್ನಮೆಂಟ್‌ನ ವಿಜೇತರಾಗಿ ಹೊರಹೊಮ್ಮಿದೆ. ಭಾನುವಾರ ನಡೆದ ಫೈನಲ್‌ನಲ್ಲಿ, ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಟ್ರೆಂಟ್ ರಾಕೆಟ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಗಮನಾರ್ಹವಾಗಿ, ಇದು ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್‌ನ ಮೊದಲ ‘ದಿ ಹಂಡ್ರೆಡ್’ ಪ್ರಶಸ್ತಿಯಾಗಿದೆ. 2016ರಲ್ಲಿ ಟಿ20 ಲೀಗ್ಗೆ ಎಂಟ್ರಿ ಕೊಟ್ಟರೂ, 2017ರಲ್ಲಿ ಹೊರ ಹೋಗಿತ್ತು. 2022ರಲ್ಲಿ ಮತ್ತೆ ಕಮ್ಬ್ಯಾಕ್ ಮಾಡಿದ ಸಂಜೀವ್ ಗೋಯೆಂಕಾ ಅವರ ಮಾಲೀಕತ್ವದ ಸೂಪರ್ ಜೈಂಟ್ಸ್ ಸಮೂಹ ಚೊಚ್ಚಲ ಟ್ರೋಫಿ ತನ್ನದಾಗಿಸಿಕೊಂಡಿದೆ.














