Last Updated:
ಭಾರತ ಮತ್ತು ಶ್ರೀಲಂಕಾ ನಡುವೆ ಗಾಲೆಯಲ್ಲಿ ರೋಚಕ ಟೆಸ್ಟ್ ಪಂದ್ಯ ನಡೆಯುತ್ತಿದೆ. ಗಾಲೆ ಟೆಸ್ಟ್ನಲ್ಲಿ ಮೂರನೇ ದಿನ ಇದ್ದಕ್ಕಿದ್ದಂತೆ ಅಂಪೈರ್ ಬದಲಾವಣೆಯಾಗಿದೆ.
ಭಾರತ (India) ಮತ್ತು ಶ್ರೀಲಂಕಾ (Sri Lanka) ನಡುವೆ ಗಾಲೆ(Galle)ಯಲ್ಲಿ ರೋಚಕ ಟೆಸ್ಟ್ (Test) ಪಂದ್ಯ ನಡೆಯುತ್ತಿದೆ. ಮೂರನೇ ದಿನ ಆಸ್ಟ್ರೇಲಿಯಾದ ರಾಡ್ ಟಕರ್ ಅಂಪೈರ್ (Umpire) ಆಗಿ ಆನ್-ಫೀಲ್ಡ್ಗೆ ಬರಲಿಲ್ಲ. ಆದ್ದರಿಂದ ಪಾಕಿಸ್ತಾನ(Pakistan)ದ ಅಹ್ಸಾನ್ ರಜಾ (Ahsan Raza) ಟಿವಿ ಅಂಪೈರ್ನಿಂದ ಮೈದಾನಕ್ಕೆ ಬರಬೇಕಾಯಿತು. ರಾಡ್ ಟಕರ್ (Rod Tucker) ಅಸ್ವಸ್ಥರಾಗಿದ್ದರಿಂದ ಅಂಪೈರಿಂಗ್ ಮಾಡಲು ಬರಲಿಲ್ಲ. ಎರಡನೇ ದಿನ ಅವರ ಆರೋಗ್ಯ ಕೆಟ್ಟಿದ್ದರಿಂದ ಕೊನೆಯ ಅವಧಿಯಲ್ಲಿ ಮೈದಾನಕ್ಕೆ ಬರಲಿಲ್ಲ.














