Last Updated:
ಅಸ್ಸಾಂನಲ್ಲಿ ಮೂರು ಕಾಡು ಪ್ರಾಣಿಗಳ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರಗಳನ್ನು ಸ್ಥಾಪನೆ ಮಾಡಲ ವಂತಾರಾ ಫೌಂಡೇಶನ್ ಮುಂದಾಗಿದೆ. ಸ್ವಂತ ವೆಚ್ಚದಲ್ಲಿ ಈ ಕೇಂದ್ರಗಳಲ್ಲಿ ಸ್ಥಾಪಿಸಲು ಬಯಸುತ್ತಾ, ವಂತರಾ ಫೌಂಡೇಶನ್ ಅಸ್ಸಾಂ ಅರಣ್ಯ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸಿದೆ.
ಅಸ್ಸಾಂನಲ್ಲಿ (Assam) ಮೂರು ವನ್ಯಜೀವಿ ರಕ್ಷಣೆ (Wildlife Conservation) ಮತ್ತು ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲು ವಂತಾರಾ ಫೌಂಡೇಶನ್ (Vantara Foundation) ಮುಂದಾಗಿದೆ. ಇದಕ್ಕಾಗಿ ಅಸ್ಸಾಂ ಅರಣ್ಯ ಇಲಾಖೆಗೆ ವಂತಾರಾ ಫೌಂಡೇಶನ್ ಪ್ರಸ್ತಾವನೆ ಸಲ್ಲಿಸಿದೆ. ವಂತಾರಾ ಫೌಂಡೇಶನ್ ತನ್ನ ಸ್ವಂತ ವೆಚ್ಚದಲ್ಲಿ ಈ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದೆ. ‘ವಿಶ್ವ ಆನೆ ದಿನ’ದಂದು ಅಸ್ಸಾಂನ ಅರಣ್ಯ ಸಚಿವ ಜಯಂತ ಮಲ್ಲ ಬರುವಾ ಅವರು ರಾಜ್ಯದಲ್ಲಿ ವನ್ಯಜೀವಿ ಸಂರಕ್ಷಣೆಗಾಗಿ ಕೈಗೊಂಡಿರುವ ಈ ಪ್ರಮುಖ ಉಪಕ್ರಮವನ್ನು ಘೋಷಿಸಿದರು.














