Last Updated:
ಬೆಂಗಳೂರಿನ ಖಾಲಿ ನಿವೇಶನ ಮಾಲೀಕರೇ ಎಚ್ಚರ! ಆಗಸ್ಟ್ 15ರೊಳಗೆ ಸೈಟ್ನ ಕಸ, ಕಳೆ ಹಾಗೂ ಕಟ್ಟಡ ತ್ಯಾಜ್ಯ ತೆರವುಗೊಳಿಸದಿದ್ದರೆ, ಜಾಗದ ಗಾತ್ರಕ್ಕೆ ಅನುಗುಣವಾಗಿ ಭಾರಿ ಸ್ವಚ್ಛತಾ ಮತ್ತು ತ್ಯಾಜ್ಯ ಸಾಗಣೆ ಶುಲ್ಕ ವಿಧಿಸಲಾಗುತ್ತದೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನೀವು ಖಾಲಿ ನಿವೇಶನ (Vacant Site) ಹೊಂದಿದ್ದರೆ ಈ ಸುದ್ದಿ ನಿಮ್ಮ ಕಣ್ಣುತೆರೆಸಲಿದೆ. ಆಗಸ್ಟ್ 15ರೊಳಗೆ ನಿಮ್ಮ ಖಾಲಿ ಜಾಗದಲ್ಲಿರುವ ಕಸ, ಕಳೆ ಗಿಡಗಳು ಹಾಗೂ ಕಟ್ಟಡದ ತ್ಯಾಜ್ಯವನ್ನು ಸಂಪೂರ್ಣವಾಗಿ ತೆರವುಗೊಳಿಸಿ ಶುಚಿಯಾಗಿಟ್ಟುಕೊಳ್ಳಿ. ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ತಾನೇ ನಿಮ್ಮ ಸೈಟ್ ಅನ್ನು ಸ್ವಚ್ಛಗೊಳಿಸಿ, ಆ ಖರ್ಚಿನ (Expense) ಬಾಬ್ತು ಬರೋಬ್ಬರಿ 1.7 ಲಕ್ಷ ರೂಪಾಯಿವರೆಗಿನ ಬೃಹತ್ ದಂಡವನ್ನು ನಿಮ್ಮ ಆಸ್ತಿ ತೆರಿಗೆಯೊಂದಿಗೆ ಕಟ್ಟುನಿಟ್ಟಾಗಿ ವಸೂಲಿ ಮಾಡಲಿದೆ.














