Last Updated:
ಓಣಂ ಹಬ್ಬಕ್ಕೆ ಊರಿಗೆ ತೆರಳುವವರಿಗೆ ರೈಲ್ವೆಯಿಂದ ಭರ್ಜರಿ ಗುಡ್ ನ್ಯೂಸ್! 112 ವಿಶೇಷ ರೈಲು ಸೇವೆ ಘೋಷಣೆ; ಮಂಗಳೂರು, ಬೆಂಗಳೂರು, ಮೈಸೂರು, ಹುಬ್ಬಳ್ಳಿ ಸೇರಿದಂತೆ ಕರ್ನಾಟಕದ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ.
ಬೆಂಗಳೂರು: ಕೇರಳದ ಅತಿದೊಡ್ಡ ಹಬ್ಬ ‘ಓಣಂ’ (ಆಗಸ್ಟ್ 26, 2026, ತಿರುವೋಣಂ) ಹತ್ತಿರವಾಗುತ್ತಿದ್ದಂತೆ, ತಮ್ಮೂರಿಗೆ ಮರಳಲು ಟಿಕೆಟ್ ಸಿಗದೆ ಪರದಾಡುತ್ತಿರುವ ಪ್ರಯಾಣಿಕರಿಗೆ (Passengers) ಭಾರತೀಯ ರೈಲ್ವೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಹಬ್ಬದ ರಷ್ ಅನ್ನು ಸುಗಮವಾಗಿ ನಿಭಾಯಿಸಲು, ಕಳೆದ ವರ್ಷಕ್ಕಿಂತ ದುಪ್ಪಟ್ಟು, ಅಂದರೆ ಬರೋಬ್ಬರಿ 112 ವಿಶೇಷ ರೈಲು ಟ್ರಿಪ್‌ಗಳನ್ನು (Onam Special Trains) ಘೋಷಿಸಿದೆ. ಕಳೆದ ವರ್ಷ ಕೇವಲ 55 ಟ್ರಿಪ್‌ಗಳನ್ನು ಮಾತ್ರ ಓಡಿಸಲಾಗಿತ್ತು.














