72nd National Film Awards: ಕನ್ನಡಿಗನ ಸಿನಿಮಾ ಕೃತಿಗೆ ಅತ್ಯುತ್ತಮ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ! ಯಾವುದದು ಗೊತ್ತಾ? | | ACTPnews

kannada book by Kenchenuru pradeep kumar shetty wins best book on cinema 72nd national film awards


ನಾನಿರುವುದೇ ನಿಮಗಾಗಿ ನಾಡಿರುವುದು ನನಗಾಗಿ…
ಈ ಪುಸ್ತಕದ ವಿಶೇಷತೆಗಳು

ಈ ಪುಸ್ತಕವನ್ನ ಕೆಂಚನೂರು ಪ್ರದೀಪ್ ಕುಮಾರ್ ಶೆಟ್ಟಿ ಅವರು ಬರೆದಿದ್ದಾರೆ. ಈ ಪುಸ್ತಕದ ಪೂರ್ತಿ ಹೆಸರು “ನಾನಿರುವುದೇ ನಿಮಗಾಗಿ ನಾಡಿರುವುದು ನನಗಾಗಿ: ಕನ್ನಡ ಸಿನಿಮಾದ ತತ್ವ ಮತ್ತು ರಾಜಕೀಯ” ಅಂತಲೇ ಇದೆ.

ಈ ಪುಸ್ತಕದ ವಿಶೇಷತೆಗಳು

ಈ ಪುಸ್ತಕದಲ್ಲಿ ಕನ್ನಡ ಸಿನಿಮಾದ ತತ್ವ ಹಾಗೂ ರಾಜಕೀಯವನ್ನ ಆಳವಾಗಿಯೇ ವಿಶ್ಲೇಷಣೆ ಮಾಡಲಾಗಿದೆ. ಈ ಪುಸ್ತಕಕ್ಕೆ ಉದ್ದನೆಯ ಶೀರ್ಷಿಕೆನೂ ಇದೆ.

“ನಾನಿರುವುದೇ ನಿಮಗಾಗಿ ನಾಡಿರುವುದು ನನಗಾಗಿ: ಕನ್ನಡ ಸಿನಿಮಾದ ತತ್ವ ಮತ್ತು ರಾಜಕೀಯ” ಅಂತಲೇ ಇದೆ. ಇನ್ನುಳಿದಂತೆ ಈ ಒಂದು ಪ್ರಸ್ತಕದ ಮೂಲಕ ಕನ್ನಡಿಗನ ಕೃತಿಕೆ ರಾಷ್ಟ್ರೀಯ ಪ್ರಶಸ್ತಿ ಬಂದಿರೋದು ಎಲ್ಲರೂ ಹೆಮ್ಮೆ ಪಡುವೆ ರೀತಿನೇ ಇದೆ ಅಂತಲೂ ಹೇಳಬಹದು.

ಕನ್ನಡಕ್ಕೆ ಪ್ರಶಸ್ತಿಗಳು

ಮಿಥ್ಯ ಚಿತ್ರಕ್ಕೆ ಮೂರು ಪ್ರಶಸ್ತ್ರಿಗಳು ಬಂದಿವೆ. ಈ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಬಂದಿದೆ. ಇದೇ ಚಿತ್ರದ ಪೋಷಕ ನಟನೆಗೆ ರೂಪಾ ವರ್ಕಾಡಿ ಅವರಿಗೆ ಪ್ರಶಸ್ತಿ ಘೋಷಣೆ ಆಗಿದೆ.

kannada book by Kenchenuru pradeep kumar shetty wins best book on cinema 72nd national film awards

ಕನ್ನಡಕ್ಕೆ ಪ್ರಶಸ್ತಿಗಳು

ಇದೇ ಚಿತ್ರದ ನಟನೆಗೆ ಬಾಲ ನಟ ಅತಿಶ್ ಶೆಟ್ಟಿ ಅತ್ಯುತ್ತಮ ಬಾಲನಟ ಪ್ರಶಸ್ತಿಯನ್ನ ಪಡೆದುಕೊಂಡಿದ್ದಾರೆ. ಈ ಚಿತ್ರವನ್ನ ರಕ್ಷಿತ್ ಶೆಟ್ಟಿ ಅವರ ಪರಮ್ವಃ ಸ್ಟುಡಿಯೋಸ್ ಹಾಗೂ ಕೆಆರ್ಜಿ ಈ ಚಿತ್ರವನ್ನ ನಿರ್ಮಿಸಿದೆ. ಸುಮಂತ್ ಭಟ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ.

ಅತ್ಯುತ್ತಮ ನಾಯಕ ನಟಿ

ಅತ್ಯುತ್ತಮ ನಾಯಕಿ ನಟಿ ಅಂತ ಬಂದ್ರೆ, ಆರ್ಟಿಕಲ್ -370 ಚಿತ್ರಕ್ಕೆ ಯಾಮಿ ಗೌತಮ್ ಅವರಿಗೆ ಬಂದಿದೆ. ಈ ಚಿತ್ರದ ಅದ್ಭುತ ಅಭಿನಯಕ್ಕೆ ಇವರಿಗೆ ಈ ಪ್ರಶಸ್ತಿ ಬಂದಿದೆ.

ಅತ್ಯುತ್ತಮ ನಟ ಯಾರು

ಅತ್ಯುತ್ತಮ ನಟ ಪ್ರಶಸ್ತಿ ಅಂತ ಬಂದರೆ, ಮಲೆಯಾಳಂ ಭ್ರಮಯುಗಂ ಚಿತ್ರಕ್ಕೆ ಮಮ್ಮುಟ್ಟಿ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಹಾಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಕೂಡ ಪಡೆದುಕೊಂಡಿದ್ದಾರೆ. ಇವರು ಚಂದು ಚಾಂಪಿಯನ್ ಚಿತ್ರಕ್ಕಾಗಿಯೇ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಬೆಸ್ಟ್ ತುಳು ಸಿನಿಮಾ

ಬೆಸ್ಟ್ ತುಳು ಸಿನಿಮಾ ಅಂತ ಬಂದ್ರೆ ಈ ಸಲ ಇಂಬು ಚಿತ್ರಕ್ಕೆ ಈ ಪ್ರಶಸ್ತಿ ಬಂದಿದೆ. ಪಿಚ್ಚರ್ ಸ್ಟುಡಿಯೋ ಇದನ್ನ ನಿರ್ಮಾಣ ಮಾಡಿದೆ. ಶಿವಧ್ವಜ್ ಶೆಟ್ಟಿ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ ಅಂತ ಹೇಳಬಹುದು.

ಇತರ ಸಿನಿಮಾಗಳ ವಿವರ

ಅತ್ಯುತ್ತಮ ನಟಿ: ‘ಆರ್ಟಿಕಲ್ 370’ ಚಿತ್ರಕ್ಕಾಗಿ ಯಾಮಿ ಗೌತಮ್

ಅತ್ಯುತ್ತಮ ನಟ: ‘ಭ್ರಮಯುಗಂ’ ಚಿತ್ರಕ್ಕಾಗಿ ಮಮ್ಮುಟ್ಟಿ

ಅತ್ಯುತ್ತಮ ನಿರ್ದೇಶನ: ‘ಅಮರನ್’ ಚಿತ್ರಕ್ಕಾಗಿ ರಾಜ್‌ಕುಮಾರ್ ಪೆರಿಯಸಾಮಿ

ಅತ್ಯುತ್ತಮ ಮಕ್ಕಳ ಸಿನಿಮಾ: ‘ನಂದಕಿಶೋರ್’ (ತೆಲುಗು)

ಅತ್ಯುತ್ತಮ ಜನಪ್ರಿಯ ಸಿನಿಮಾ: ‘ಕಲ್ಕಿ 2898 AD’ (ತೆಲುಗು)

ಅತ್ಯುತ್ತಮ ಚೊಚ್ಚಲ ನಿರ್ದೇಶಕ: ‘ಸ್ವಾತಂತ್ರ್ಯ ವೀರ ಸಾವರ್ಕರ್’ ಚಿತ್ರಕ್ಕಾಗಿ ರಣದೀಪ್ ಹೂಡಾ



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports