ಈ ಚಿತ್ರದ ಟೈಟಲ್ ಕೂಡ ಇದೇ ಆಗಿದೆ. ಆದರೆ, ಇದು ನಿಗೂಢ ರೂಮಿನ ನಂಬರ್ ಆಗಿದೆ. ಈ ರೂಮ್ 15 ವರ್ಷದಿಂದ ಮುಚ್ಚಲ್ಪಟ್ಟಿರುತ್ತದೆ.
ಆದರೆ, ಒಮ್ಮೆ ಇದನ್ನ ತೆಗೆದ್ಮೇಲೆ ಆಗುವ ದುರಂತಗಳು ಇಲ್ಲಿ ಬೆಚ್ಚಿ ಬೀಳಿಸುತ್ತವೆ. ಆ ರೀತಿನೆ ಈ ಚಿತ್ರದ ಟ್ರೈಲರ್ ಇದೆ. ಈ ರೀತಿಯ ಚಿತ್ರವನ್ನ ಡೈರೆಕ್ಟರ್ ಪ್ರಶಾಂತ್ ನೀಲ್ ಪ್ರಸೆಂಟ್ ಮಾಡಿದ್ದಾರೆ.
ಚೈತ್ರಾ ಆಚಾರ್ ಇಲ್ಲಿ ಅದ್ಭುತವಾಗಿ ಅಭಿನಯಿಸಿದ್ದಾರೆ. ಇದನ್ನ ನೋಡ್ತಾ ಹೋದರೆ ಬೆಚ್ಚಿ ಬೀಳೋದು ಗ್ಯಾರಂಟಿ ನೋಡಿ. ಆ ರೀತಿನೇ ಈ ಒಂದು ಪಾತ್ರ ಇದೆ.
ಇದನ್ನ ನಟಿ ಚೈತ್ರಾ ಆಚಾರ್ ತುಂಬಾನೆ ಚೆನ್ನಾಗಿ ಮಾಡಿದ್ದಾರೆ. ಈ ಒಂದು ಅನುಭವ ಟ್ರೈಲರ್ ನೋಡಿದವರಿಗೆ ಪಕ್ಕಾ ಆಗುತ್ತದೆ. ಅಂದ್ಹಾಗೆ ಈ ಚಿತ್ರವನ್ನ ಪ್ರಶಾಂತ್ ನೀಲ್ ಡೈರೆಕ್ಷನ್ ಏನೂ ಮಾಡಿಲ್ಲ. ಬದಲಾಗಿ ಪ್ರಸೆಂಟ್ ಮಾತ್ರ ಮಾಡಿದ್ದಾರೆ.
ಈ ಚಿತ್ರವನ್ನ ಕೀರ್ತನ್ ನಾಡಗೌಡ ಡೈರೆಕ್ಷನ್ ಮಾಡಿದ್ದಾರೆ. ಈ ಚಿತ್ರದಲ್ಲಿ ಇವರು ವಾಸ್ತವ ಮತ್ತು ಭ್ರಮೆಗಳ ನಡುವೆ ಸಿಲುಕಿ ಒದ್ದಾಡುವ 18 ವರ್ಷದ ವಿವೇಕ್ ಎಂಬ ಯುವಕನ ಸುತ್ತ ಕಥೆ ಹೇಳಿದ್ದಾರೆ.
ಆದರೆ, ಈ ಚಿತ್ರದಲ್ಲಿರೋ VIMS ಕಟ್ಟಡವನ್ನ ತೆರೆಯ ಬೇಡಿ ಅಂತ ಸ್ಥಳೀಯರು ಹೇಳ್ತಾನೇ ಇರ್ತಾರೆ. ವಿರೋಧ ಕೂಡ ಮಾಡುತ್ತಾರೆ.
ಆದರೆ, ಇದನ್ನ ಓಪನ್ ಮಾಡಿದಾಗ, ಹಾಗೆ ರೂಮ್ ನಂಬರ್ 418 ತೆರೆದಾಗ, ಇಲ್ಲಿಯ ನಿಗೂಢತೆ ಮತ್ತಷ್ಟು ತೆರೆದುಕೊಳ್ಳುತ್ತದೆ.
ಈ ಸಿನಿಮಾದಲ್ಲಿ ದೇವಿಕಾ ಅನ್ನುವ ಪಾತ್ರ ಇದೆ. ಇದರ ಪ್ರವೇಶ ಆದ್ಮೇಲೆ ಹಾರರ್-ಥ್ರಿಲ್ಲರ್ ಎಲಿಮೆಂಟ್‌ಗಳ ಅನುಭವ ಆಗ್ತಾನೇ ಹೋಗುತ್ತದೆ.
ಈ ಚಿತ್ರಕ್ಕೆ ದಿನೇಶ್ ದಿವಾಕರ್ ಕ್ಯಾಮರಾವರ್ಕ್ ಮಾಡಿದ್ದಾರೆ. ವೆಂಕಿ ಜಿಜಿ ಅವರು ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನ ನಿರ್ಮಾಣ ಮಾಡಿದೆ.
ಈ ಚಿತ್ರದ ರಿಲೀಸ್ ಫಿಕ್ಸ್ ಆಗಿದೆ. ಅಧಿಕೃತವಾಗಿ ಡೇಟ್ ಕೂಡ ರಿವೀಲ್ ಆಗಿದೆ. ಹಾಗೆ ಇದು ಇದೇ ತಿಂಗಳು ಅಕ್ಟೋಬರ್-23 ರಂದು ತೆರೆ ಕಾಣುತ್ತಿದೆ.
ಆದರೆ, ಇದು ಕೇವಲ ತೆಲುಗು ಭಾಷೆಯಲ್ಲಿ ಮಾತ್ರ ರಿಲೀಸ್ ಆಗುತ್ತಿಲ್ಲ. ಬದಲಾಗಿ, ಬಹು ಭಾಷೆಯಲ್ಲಿ ಈ ಸಿನಿಮಾ ತೆರೆ ಕಾಣುತ್ತಿದೆ.
ತೆಲುಗು, ಕನ್ನಡ, ಹಿಂದಿ, ತಮಿಳು, ಮಲೆಯಾಳಂ ಭಾಷೆಯಲ್ಲಿ ಇದು ಬಿಡುಗಡೆ ಆಗುತ್ತಿದೆ. ಈ ಮೂಲಕ ಆಯಾ ಭಾಷೆಯ ಸಿನಿಮಾ ಪ್ರೇಮಿಗಳು ಈ ಚಿತ್ರವನ್ನ ತಮ್ಮ ಭಾಷೆಯಲ್ಲಿಯೇ ನೋಡಬಹುದು.













