ರಾಮ್‌ ಚರಣ್‌ ಜೊತೆ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ ಶ್ರುತಿ ಹಾಸನ್! ʻಪೆದ್ದಿʼ ಸಿನಿಮಾದ ‘ಹೆಲ್ಲಲ್ಲಲೋ’ ಸ್ಪೆಷಲ್‌ ಸಾಂಗ್‌ | | ACTPnews

ram charan shruti haasan peddi movie hellallallo song release soon


ಹೆಲ್ಲಲ್ಲಲ್ಲೋ ಅಬ್ಬರ

ಪೆದ್ದಿ ಚಿತ್ರದ ಈ ಹಾಡು ಇಂಟ್ರಸ್ಟಿಂಗ್ ಆಗಿದೆ. ಮ್ಯೂಸಿಕ್ ಗಮನ ಸೆಳೆಯುತ್ತಿದೆ. ಕೋರಿಯೋಗ್ರಾಫಿ ಕೂಡ ಜೋಡಿ ಮೋಡಿ ಮಾಡುವಂತೆ ಇವೆ.

ಕನ್ನಡದಲ್ಲಿ ಬರೆದವರು ಯಾರು
ಅಂದ್ರೆ, ಈ ಹಾಡಿನಲ್ಲಿ ಶ್ರುತಿ ಹಾಸನ್ ಇದ್ದಾರೆ. ರಾಮ್ ಚರಣ್ ಮಸ್ತ್ ಹೆಜ್ಜೆ ಹಾಕಿದ್ದಾರೆ. ಹಾಗಾಗಿಯೇ ಜೋಡಿಯಲ್ಲಿ ರೀಲ್ಸ್ ಮಾಡೋರಿಗೆ ಇದು ಹೊಸ ಸ್ಪೂರ್ತಿ ಆಗುತ್ತದೆ.
ಕನ್ನಡದಲ್ಲಿ ಬರೆದವರು ಯಾರು

ಪೆದ್ದಿ ಚಿತ್ರ ಮೂಲತಃ ತೆಲುಗು ಚಿತ್ರವೇ ಆಗಿದೆ. ಆದರೆ, ಇದು ಕನ್ನಡ, ತಮಿಳು , ಹಿಂದಿ ಹೀಗೆ ಬಹು ಭಾಷೆಯಲ್ಲಿ ರಿಲೀಸ್ ಆಗುತ್ತದೆ. ಆಯಾ ಭಾಷೆಯಲ್ಲೂ ಹಾಡುಗಳು ಬರ್ತಿವೆ.

ಎ.ಆರ್. ರೆಹಮಾನ್ ಮೋಡಿ

ಪೆದ್ದಿ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ಕೊಟ್ಟಿದ್ದಾರೆ. ಇವರ ಹಾಡುಗಳ ಮೋಡಿ ಜಾಸ್ತಿನೇ ಇದೆ. ಚಿಕಿರಿ ಸಾಂಗ್ ಮೋಡಿ ಮಾಡಿದೆ. ರೈ ರೈ ರಾ ಹಾಡು ಕೂಡ ಗಮನ ಸೆಳೆದಿದೆ.

ಇದೀಗ ಹೆಲ್ಲಲ್ಲಲ್ಲೋ ಹಾಡು ರಿಲೀಸ್ ಆಗುತ್ತಿದೆ. ಸದ್ಯಕ್ಕೆ ಈ ಹಾಡಿನ ಪ್ರೋಮೋವನ್ನ ರಿಲೀಸ್ ಮಾಡಲಾಗಿದೆ. ಚಿತ್ರದ ನಿರ್ದೇಶಕ ಬುಚಿ ಬಾಬು ಸನಾ ತಮ್ಮ ಇನ್‌ಸ್ಟಾಗ್ರಾಮ್‌ನ ಪೇಜ್ ಅಲ್ಲೂ ಇದನ್ನ ಹಂಚಿಕೊಂಡಿದ್ದಾರೆ.

ram charan shruti haasan peddi movie hellallallo song release soon

ಹೆಲ್ಲಲ್ಲಲ್ಲೋ ಅಬ್ಬರ
23.05.2026 ರಿಲೀಸ್

ಪೆದ್ದಿ ಚಿತ್ರ ಜೂನ್-4 ರಂದು ರಿಲೀಸ್ ಆಗುತ್ತಿದೆ. ವಿಶ್ವದಾದ್ಯಂತ ಈ ಚಿತ್ರ ತೆರೆ ಕಾಣುತ್ತಿದೆ. ಅದಕ್ಕೂ ಮೊದಲು ಚಿತ್ರದ ಹೆಲ್ಲಲ್ಲಲ್ಲೋ ಹಾಡು ರಿಲೀಸ್ ಆಗುತ್ತಿದೆ.

ಈ ಒಂದು ಹಾಡು 23.05.2026 ರಂದು ರಿಲೀಸ್ ಆಗುತ್ತಿದೆ. ಈ ಹಾಡಿನ ಪ್ರೋಮೋ ಈಗಲೇ ಗಮನ ಸೆಳೆದಿದೆ. ಇನ್ನುಳಿದಂತೆ ಚಿತ್ರದ ಬಗ್ಗೆ ನಿರೀಕ್ಷೆ ಇದೆ.

ಕ್ರೀಡಾಧರಿಸಿದ ಸಿನಿಮಾ

ಪೆದ್ದಿ ಚಿತ್ರ ಕ್ರೀಡಾಧರಿಸಿದ ಚಿತ್ರವೇ ಆಗಿದೆ. ಡೈರೆಕ್ಟರ್ ಬುಚಿ ಬಾಬು ಸನಾ ಇಲ್ಲಿ ಕುಸ್ತಿ ಬಗ್ಗೆ ಹೇಳುತ್ತಿದ್ದಾರೆ. ಕ್ರಿಕೆಟ್ ಆಟವನ್ನೂ ಪ್ರಮುಖವಾಗಿಟ್ಟಿದ್ದಾರೆ. ರನ್ನಿಂಗ್ ಕೂಡ ಇದೆ.

ಪೆದ್ದಿ ಪಾತ್ರ ಈ ಮೂರರಲ್ಲೂ ಮಾಸ್ಟರ್ ಅನ್ನೋದು ಟ್ರೈಲರ್ ಆಲ್ಲಿಯೇ ಗೊತ್ತಾಗಿದೆ. ಹಳ್ಳಿಯ ಯುವಕರಿಗೆ ಈ ಪೆದ್ದಿನೇ ಸ್ಪೂರ್ತಿ ಅನ್ನೋದು ರಿವೀಲ್ ಆಗಿದೆ.

ಗೌರ್ ನಾಯ್ಡು ಶಿವಣ್ಣ

ಪೆದ್ದಿ ಚಿತ್ರದಲ್ಲಿ ಶಿವರಾಜ್ ಕುಮಾರ್ ಕುಸ್ತಿ ಉಸ್ತಾದ್ ಪಾತ್ರ ಮಾಡಿದ್ದಾರೆ. ಈ ಉಸ್ತಾದ್ ಅದೆಷ್ಟ ಖಡಕ್ ಅನ್ನೋದು ರಿವೀಲ್ ಆಗಿದೆ. ಇತ್ತೀಚಿಗೆ ಬಂದ ಈ ಟ್ರೈಲರ್ ಅಲ್ಲಿ ಶಿವಣ್ಣನ ಒಂದು ಡೈಲಾಗ್ ಇದೆ.

“ಆಟ ಗೆಲ್ಲೋದ ಅಲ್ಲ..ಬದುಕುವುದು ಮುಖ್ಯ” ಅಂತಲೇ ಹೇಳ್ತಾರೆ. ಇದು ಟ್ರೈಲರ್ ಅಲ್ಲಿ ಗಮನ ಸೆಳೆಯುತ್ತದೆ. ಇನ್ನುಳಿದಂತೆ ಈ ಚಿತ್ರ ಜಾಸ್ತಿನೇ ನಿರೀಕ್ಷೆ ಹುಟ್ಟುಹಾಕಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed