Last Updated:
ಡಾ. ಕನ್ವರ್ ಅವರ ಪತ್ನಿ ಕೃಷ್ಣ ಕನ್ವರ್ ಅವರು ಬಡಾದ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಪ್ರಾಂಶುಪಾಲರಾಗಿ ಸುಮಾರು 32 ವರ್ಷಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ 2011 ರಲ್ಲಿ ನಿವೃತ್ತರಾದರು. ಅವರು ಡಿಸೆಂಬರ್ 6, 2020 ರಂದು ನಿಧನರಾದರು. ಅವರ ಮರಣದ ಮೊದಲು, ದಂಪತಿ ತಮ್ಮ ಆಸ್ತಿಯನ್ನು ಸಮಾಜಕ್ಕೆ ಅರ್ಪಿಸಲು ನಿರ್ಧರಿಸಿದ್ದರು.
Himachal Doctor 100 Crore Property Donation: ‘ನಾನು ಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದೇನೆ. ನನಗೆ ಇನ್ನು ಯಾವುದೇ ಆಸೆಗಳಿಲ್ಲ. ನನ್ನ ಕುಟುಂಬದಲ್ಲಿ ನನಗೆ ಯಾರೂ ಆಪ್ತರೂ ಇಲ್ಲ.. ಹೀಗಾಗಿ ನಾನು ನನ್ನ ದೇಹ ಮತ್ತು 100 ಕೋಟಿ ಮೌಲ್ಯದ ಆಸ್ತಿಯನ್ನು ದಾನ ಮಾಡುತ್ತಿದ್ದೇನೆ.’ ಇದು 77 ವರ್ಷದ ಹಿರಿಯ ವೈದ್ಯರೊಬ್ಬರು ಹೇಳಿದ ಮಾತು..














