Yuzvendra Chahal: ಟೀಮ್ ಇಂಡಿಯಾದಲ್ಲಿ ಸಿಗದ ಅವಕಾಶ! ಆಂಗ್ಲರ ನೆಲದಲ್ಲಿ 15 ವಿಕೆಟ್​​ ಪಡೆದು ವಿಶ್ವಕಪ್​​​ಗೆ ತಾವೂ ಸಿದ್ಧವೆಂದ ಸ್ಟಾರ್ ಬೌಲರ್ | ಕ್ರೀಡಾ ಸುದ್ದಿ | ACTPnews

ಯುಜ್ವೇಂದ್ರ ಚಹಲ್


Last Updated:


ಇಂಗ್ಲೆಂಡ್​​ನಲ್ಲಿ ಒಂಡೇ ಕಪ್ ನಡೆಯುತ್ತಿದೆ. ಚಹಲ್ ಈ ಟೂರ್ನಿಯಲ್ಲಿ ನಾರ್ಥಾಂಪ್ಟನ್ ಪರ ಆಡುತ್ತಿದ್ದಾರೆ. ಈ ಆವೃತ್ತಿಯಲ್ಲಿ ಏಳು ಪಂದ್ಯಗಳನ್ನಾಡಿರುವ ಅವರು 15 ವಿಕೆಟ್ ಕಬಳಿಸಿದ್ದಾರೆ. ಅವರು ಸರಾಸರಿ 21 ಮತ್ತು 27.60 ಸ್ಟ್ರೈಕ್ ರೇಟ್‌ನಲ್ಲಿ ಬೌಲಿಂಗ್ ಮಾಡಿ ಗಮನ ಸೆಳೆದಿದ್ದಾರೆ.

ಯುಜ್ವೇಂದ್ರ ಚಹಲ್
ಯುಜ್ವೇಂದ್ರ ಚಹಲ್

ಟೀಮ್ ಇಂಡಿಯಾದ ಅನುಭವಿ ಬೌಲರ್ ಯುಜ್ವೇಂದ್ರ ಚಹಲ್ (Yuzvendra Chahal) ಪ್ರಸ್ತುತ ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದಾರೆ. ಆದರೆ ಅವರು ವಿವಿಧ ಕಾರಣಗಳಿಂದ ಆಗಾಗ್ಗೆ ಸುದ್ದಿಯಲ್ಲಿದ್ದಾರೆ. ಭಾರತ ಪರ ಯಾವುದೇ ಸ್ವರೂಪದಲ್ಲಿ ಆಡುವ ಅವಕಾಶ ಸಿಗದಿದ್ದ ಕಾರಣ, ಅವರು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ECB) ಆಯೋಜಿಸುವ ಒಂಡೇ ಕಪ್‌ನಲ್ಲಿ (One-Day Cup) ಆಡಲು ಹೋಗಿದ್ದಾರೆ. ತಮಗೆ ಸಿಕ್ಕಿರುವ ಈ ಅವಕಾಶವನ್ನ ಸದ್ಬಳಕೆ ಮಾಡಿಕೊಳ್ಳುತ್ತಿರುವ ಅವರು ಅಸಾಧಾರಣವಾಗಿ ಪ್ರದರ್ಶನ ನೀಡುತ್ತಿದ್ದಾರೆ. ಆಡುತ್ತಿರುವ ಬಹುತೇಕ ಎಲ್ಲಾ ಪಂದ್ಯಗಳಲ್ಲಿ ವಿಕೆಟ್‌ಗಳನ್ನು ಕಬಳಿಸುತ್ತಿದ್ದಾರೆ. ಅವರು ಪ್ರಸ್ತುತ ಟೂರ್ನಮೆಂಟ್‌ನಲ್ಲಿ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಈ ಪ್ರದರ್ಶನದಿಂದಾದರೂ ಅವರು ಟೀಮ್ ಇಂಡಿಯಾಗೆ ಮರಳುವ ಸಾಧ್ಯತೆಗಳನ್ನು ಹೆಚ್ಚಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed