YouTuber: ‘ಗರ್ಭಿಣಿಯಾಗಿದ್ದಾಗಲೇ ಪತ್ನಿ ಮೋಸ ಮಾಡಿದಳು’, ಸಾಕ್ಷಿ ಸಮೇತ ಆರೋಪ ಮಾಡಿದ ಮಾಜಿ ಬಿಗ್‌ಬಾಸ್ ಸ್ಪರ್ಧಿ! | | ACTPnews

ಅನುರಾಗ್ ಧೋಬಲ್


Last Updated:

ಸಾಮಾಜಿಕ ಜಾಲತಾಣಗಳಲ್ಲಿ ಯುಕೆ07 ರೈಡರ್ (UK07 Rider) ಎಂದೇ ಜನಪ್ರಿಯರಾಗಿರುವ ಯೂಟ್ಯೂಬರ್ ಅನುರಾಗ್ ಧೋಬಲ್ (Anurag Dhobal) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಅನುರಾಗ್ ಧೋಬಲ್
ಅನುರಾಗ್ ಧೋಬಲ್

ಸಾಮಾಜಿಕ ಜಾಲತಾಣಗಳಲ್ಲಿ ಯುಕೆ07 ರೈಡರ್ (UK07 Rider) ಎಂದೇ ಜನಪ್ರಿಯರಾಗಿರುವ ಯೂಟ್ಯೂಬರ್ ಅನುರಾಗ್ ಧೋಬಲ್ (Anurag Dhobal) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕೆಲ ತಿಂಗಳ ಹಿಂದೆ ತಮ್ಮ ಕುಟುಂಬದವರ ವಿರುದ್ಧ ಕಿರುಕುಳದ ಆರೋಪ ಮಾಡಿದ್ದ ಅವರು, ಇದೀಗ ತಮ್ಮ ಪತ್ನಿ ರಿತಿಕಾ ಚೌಹಾಣ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಯೂಟ್ಯೂಬ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ವೈವಾಹಿಕ ಜೀವನ, ಮಗನ ಭೇಟಿ ಹಾಗೂ ವೈಯಕ್ತಿಕ ಸಂಬಂಧಗಳ ಕುರಿತು ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಅನುರಾಗ್ ಧೋಬಲ್ ಮತ್ತು ರಿತಿಕಾ ಚೌಹಾಣ್ 2025ರಲ್ಲಿ ಪ್ರೀತಿಸಿ ವಿವಾಹವಾಗಿದ್ದರು. ಅಂತರ್ಜಾತಿ ವಿವಾಹವಾಗಿದ್ದ ಈ ಜೋಡಿಗೆ 2026ರ ಮಾರ್ಚ್ 27ರಂದು ಗಂಡು ಮಗು ಜನಿಸಿತ್ತು.

ಪತ್ನಿ ವಿರುದ್ಧ ಹೊಸ ಆರೋಪ

ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಅನುರಾಗ್ ಧೋಬಲ್ ತಮ್ಮ ಪತ್ನಿ ಮದುವೆ ಸಮಯದಲ್ಲಿಯೇ ಮತ್ತೊಬ್ಬ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಆರೋಪಿಸಿದ್ದಾರೆ. ಈ ಸಂಬಂಧ ಕರೆಗಳ ದಾಖಲೆಗಳು, ಸ್ಕ್ರೀನ್‌ಶಾಟ್‌ಗಳು ಹಾಗೂ ಕೆಲವು ವಿಡಿಯೋ ಕ್ಲಿಪ್‌ಗಳನ್ನೂ ತೋರಿಸಿದ್ದಾರೆ.

ಅನುರಾಗ್ ಧೋಬಲ್ ತಮ್ಮ ವಿಡಿಯೋದಲ್ಲಿ ಅಭಿಷೇಕ್ ಎಂಬ ವ್ಯಕ್ತಿಯ ಹೆಸರನ್ನೂ ಉಲ್ಲೇಖಿಸಿದ್ದಾರೆ. ಅಭಿಷೇಕ್ ಅವರ ನಿವಾಸಕ್ಕೆ ತಾವು ಭೇಟಿ ನೀಡಿದ ವೇಳೆ ರಿತಿಕಾ ಅದೇ ವ್ಯಕ್ತಿಯ ಮೊಬೈಲ್‌ನಿಂದ ಕರೆ ಮಾಡಿದ್ದರು ಎಂದು ಆರೋಪಿಸಿದ್ದಾರೆ.ಇದಲ್ಲದೆ, ಗರ್ಭಾವಸ್ಥೆಯ ಸಮಯದಲ್ಲಿಯೂ ರಿತಿಕಾ ಮತ್ತು ಅಭಿಷೇಕ್ ನಡುವೆ ಸಂಪರ್ಕವಿತ್ತು ಎಂದು ಹೇಳಿಕೊಂಡಿದ್ದಾರೆ.

ಮಗನನ್ನು ನೋಡಲು ಅವಕಾಶ ನೀಡುತ್ತಿಲ್ಲ 

ವಿಡಿಯೋದಲ್ಲಿ ಅನುರಾಗ್ ಧೋಬಲ್ ಅತ್ಯಂತ ಭಾವನಾತ್ಮಕವಾಗಿ ತಮ್ಮ ಮಗನ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ತಮ್ಮ ಪತ್ನಿ ಹಾಗೂ ಅವರ ಕುಟುಂಬದವರು ಮಗ ಅನುರಿತ್ ಅವರನ್ನು ಭೇಟಿಯಾಗಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಜೀವನಾಂಶದ ಆರೋಪವೂ

ಇನ್ನು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ ಅನುರಾಗ್ ತಮ್ಮಿಂದ ಹೆಚ್ಚಿನ ಜೀವನಾಂಶದ ಹಣವನ್ನು ಕೇಳಲಾಗುತ್ತಿದೆ. ಮಗನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಲವು ವಿಚಾರಗಳನ್ನು ಬಹಿರಂಗಪಡಿಸದೆ ಮೌನವಾಗಿದ್ದೆ ಎಂದು ತಿಳಿಸಿದ್ದಾರೆ.

ಅನುರಾಗ್ ಧೋಬಲ್ ಮಾಡಿರುವ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ. ಆದರೆ ಈ ಆರೋಪಗಳಿಗೆ ಸಂಬಂಧಿಸಿದಂತೆ ರಿತಿಕಾ ಚೌಹಾಣ್ ಅಥವಾ ಅವರ ಕುಟುಂಬದಿಂದ ಅಧಿಕೃತ ಪ್ರತಿಕ್ರಿಯೆ ಇನ್ನೂ ಹೊರಬಂದಿಲ್ಲ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed